ಮುಂಬಯಿ ಸೆಂಟ್ರಲ್ ಮಂಗಳೂರು ಸೇವೆ ರೈಲ್ವೇ ಬಜೆಟ್‍ನಲ್ಲಿ ಸೇರ್ಪಡೆ-ಗೋಪಾಲ್ ಶೆಟ್ಟಿ
ಮುಂಬಯಿ: ಜಾಗತಿಕ ಆರ್ಥಿಕತೆಯ ಜರ್ಜಗರಿತ ನಡುವೆಯೂ ಕಳೆದ ಎರಡು ವರ್ಷದಿಂದ ಭ್ರಷ್ಟಾಚಾರ, ನಿಷ್ಟಕ್ಷಪಾತ ಧೋರಣೆಯ ಸರಕಾರದ ಆಡಳಿತದಿಂದ ನಮ್ಮ ದೇಶಕ್ಕೆ ಯಾವುದೇ ಆರ್ಥಿಕ ತೊಂದರೆ ಉಂಟಾಗಲಿಲ್ಲ. ಆದರೆ ದೇಶದ ಬೃಹತ್ ಸರಕಾರಿ ಉದ್ದಿಮೆಗಳಿಂದ ರೈಲ್ವೆಯ ಮೂಲಭೂತ ಹಾಗೂ ಜನಸ್ಪಂದನ ಸೌಕರ್ಯವನ್ನು ಉನ್ನತ ಮಟ್ಟಕ್ಕೆ ತಲುಪುವ ದೃಷ್ಟಿಯಿಂದ ಪ್ರಯಣ ದರ ಏರಿಕೆ ಅನಿವಾರ್ಯ.
ಆದರೆ ಈತನ್ಮಧ್ಯೆ ತಮ್ಮೆಲ್ಲರ ಬೇಡಿಕೆಯಂತೆ ಮುಂಬಯಿ ಸೆಂಟ್ರಲ್ ಮಂಗಳೂರು ಕೊಂಕಣ ರೈಲು ಸೇವೆ ಬರುವ ರೈಲ್ವೇ ಬಜೆಟ್‍ನಲ್ಲಿ ಸೇರ್ಪಡೆಗೊಂಡು ತಮ್ಮೆಲ್ಲರ ಕನಸು ನನಸಾಗಲಿದೆಎಂದು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ತಿಳಿಸಿದರು. ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಪಶ್ಚಿಮ ವಲಯ ಸಂಸ್ಥೆಯು ವಿೂರಾ ಭಯಂದರ್ ತುಳು ಕನ್ನಡ ಸಂಘದ ಸಹಯೋಗದೊಂದಿಗೆ ಕಳೆದ ಆದಿತ್ಯವಾರ ಸಂಜೆವಿೂರಾರೋಡ್ ಪೂರ್ವದ ಹೊಟೇಲ್ ಪಯ್ಯಡೆ ರೆಸಿಡೆನ್ಸಿಯಲ್ಲಿಆಯೋಜಿಸಿದ್ದ ರೈಲ್ವೇ ಯಾತ್ರಿ ಸಂಘದ 6ನೇ ಸಾರ್ವಜನಿಕ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಭಿವೃದ್ಧಿಯ ದೃಷ್ಟಿಕೋನ ಹಾಗೂ ಬೆಳವಣಿಗೆಯ ದೂರದರ್ಶಿತ್ವದ ರೈಲ್ವೆಗೆ ಖಾಸಗಿ ಬಂಡವಾಳದ ಕಾರ್ಯಕಲ್ಪವೂ ಅನಿವಾರ್ಯ. ರೈಲ್ವೇ ಯಾತ್ರಿ ಸಂಘದ ನಿರಂತರ ಹೋರಾಟದ ಫಲವಾಗಿ ಹಲವಾರು ಜನಪಯೋಗಿ ಸಕಾರಾತ್ಮಕ ಬೆಳವಣಿಗೆಗಳು ನಡೆದಿದ್ದು, ಸರಕಾರದ ಒತ್ತಡಕ್ಕಾಗಿ ಕೊಂಕಣ ರೈಲ್ವೆಯ ಲಾಭ ಪಡೆಯುವ ಏಳು ರಾಜ್ಯಗಳು ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದ ಗೋಪಾಲ್ ಶೆಟ್ಟಿ ಉಪನಗರದಿಂದ ಮುಂಬಯಿ ಸೆಂಟ್ರಲ್, ದಾದರ್, ಬೊರಿವಿಲಿ, ವಸಾಯಿ, ಪನ್ವೇಲ್ ಮೂಲಕ ಮಂಗಳೂರಿಗೆ ತೆರಳುವ ಬಹುದಿನದ ನಿಮ್ಮ ಆಶಯಕ್ಕೆ ಶೀಘ್ರವೇ ಮಂಡನೆಯಾಗಲಿರುವ ರೈಲ್ವೆ ಬಜೆಟ್‍ಲ್ಲಿ ಒತ್ತಡ ತರುವೆ ಎಂದು  ಭರವಸೆಯನ್ನಿತ್ತರು.

Railway Meeting @ Mira Road-B4

Railway Meeting @ Mira Road-6
Railway Meeting @ Mira Road-B3

Railway Meeting @ Mira Road-B2ರೈಲ್ವೇ ಸಂಘದ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಮುಂದಾಳುತ್ವದಲ್ಲಿ ನಡೆಸಲ್ಪಟ್ಟ ಮಹಾಸಭೆಯಲ್ಲಿ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ, ಉಪಾಧ್ಯಕ್ಷ ಪ್ರೇಮನಾಥ ಪಿ.ಕೋಟ್ಯಾನ್, ಜೊತೆ ಕಾರ್ಯದರ್ಶಿ ರಜಿತ್ ಸುವರ್ಣ, ಬಂಟ್ಸ್ ನ್ಯಾಯ ಮಂಡಳಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಾಡೆ, ವಿೂರಾ ಭಯಂದರ್ ತುಳು ಕನ್ನಡ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ, ವಿೂರಾ ಭಯಂದರ್ ಕರ್ನಾಟಕ ಸಂಘದ ಅಧ್ಯಕ್ಷ ಉದಯ ಹೆಗ್ಡೆ ಏಳಿಯಾಳು, ಕರ್ನಾಟಕ ಮಹಾಮಂಡಲದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ವೇದಿಕೆಯಲ್ಲಿ ಅಸೀನರಾಗಿದ್ದು ಗೋಪಾಲ್ ಶೆಟ್ಟಿಅವರನ್ನು ಗೌರವಿಸಿದರು. ಸಭೆಯಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ವಿಜಯ ಆರ್.ಭಂಡಾರಿ, ಮುಂಡಪ್ಪ ಎಸ್.ಪಯ್ಯಾಡೆ, ಮನೋಹರ್ ಶೆಟ್ಟಿ, ದಿವಾಕರ್ ಶೆಟ್ಟಿ, ಸಂತೋಷ್ ರೈ ಬೆಳ್ಳಿಪಾಡಿ, ಬಿಜೆಪಿ ಯುವ ಮುಂದಾಳು ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ ಸೇರಿದಂತೆ ಅನೇಕ ಸಂಘ- ಸಂಸ್ಥೆಗಳಪದಾಧಿಕಾರಿಗಳು ಉಪಸ್ಥಿತರಿದ್ದು ಗೋಪಾಲ್ ಶೆಟ್ಟಿಅವರನ್ನು ಗೌರವಿಸಿದರು. ಕಳೆದ ಹಲವಾರು ವರ್ಷದಿಂದ ಪಶ್ಚಿಮ ಉಪನಗರದ ಊರಿನ ಪ್ರಯಾಣಿಕರುತುಂಬಾ ತೊಂದರೆ ಅನುಭವಿಸುತ್ತಿದ್ದು, ಇದರ ನಿವಾರಣೆಗಾಗಿ ಸಂಕಲ್ಪ ಹೊತ್ತು ರೈಲ್ವೇ ಯಾತ್ರಿ ಸಂಘ ಸ್ಥಾಪನೆಗೊಂಡಿದೆ. ಸಂಘದ ಅಧ್ಯಕ್ಷ ಉದಯ ಶೆಟ್ಟಿ ಶಿಮಂತೂರು ಉಪನಗರದಹಲವಾರು ರೈಲ್ವೆ ಸಮಸ್ಯೆ ಕೋರ್ಟಿನ ಮೆಟ್ಟಲೇರಿ ಜಯಗಳಿಸಿದ್ದಾರೆ. ಕಳೆದ ವರ್ಷ ಪ್ರಾರಂಭಗೊಂಡ ಊರಿನ ರಜಾ ಕಾಲದ ರೈಲ್ವೆಯ ಈ ಸಂಸ್ಥೆಯ ಪ್ರಯತ್ನದಿಂದಲೆ ಆಗಿದ್ದು, ಮುಂದೆಯೂ ಈ ರೈಲನ್ನು ಖಾಯಂಗೊಳಿಸಲು ಇಂದಿನ ಸಭೆಯಲ್ಲಿ ಸಂಸದರಿಗೆ ಮನದಟ್ಟು ಮಾಡಿ ಎಂದು ದೀಪ ಬೆಳಗಿಸಿ ಸಭೆಗೆ ಚಾಲನೆಯನ್ನೀಡಿ ವಿರಾರ್ ಶಂಕರ್ ಶೆಟ್ಟಿವಿನಂತಿಸಿದರು. ಶಿಮಂತೂರು ಉದಯ ಶೆಟ್ಟಿ ಮಾತನಾಡಿ ಮಾಧ್ಯಮ ವರ್ಗದ ಜನರಿಗೆ ಅತಿ ಕಡಿಮೆ ಸಮಯ ದರದಲ್ಲಿ ಪ್ರಯಾಣದ ಏಕೈಕ ಸೌಲಭ್ಯ ಭಾರತೀಯ ರೈಲ್ವೆಯಿಂದ ಮಾತ್ರ ಸಾಧ್ಯ. ನನ್ನ ದಿನನಿತ್ಯ ಉಪನಗರ ರೈಲ್ವೆ ಪ್ರಯಾಣದಲ್ಲಿ ಹಲವಾರು ದುರ್ಘಟನೆಗಳನ್ನು ಕಂಡು ಹತನಾದ ನನಗೆ ರೈಲ್ವೆಯ ಎಲ್ಲಾ ದುರ್ಘಟನೆಗಳಿಗೆ ಪರಿಹಾರ ಶೋಧಕನಾಗಿ ಕಾನೂನು ಮೂಲಕ ಕೋರ್ಟು ಹತ್ತಿ ಸಫಲನಾದೆ ನಾವು ನೀಡುವ ಓಟಿಗೆ ವ್ಯಕ್ತಿಗತ ಹೋರಾಟ ಅಗತ್ಯ. ಕೊಂಕಣ ರೈಲ್ವೆಯ ಜನಕ ಜಾರ್ಜ್ ಫೆರ್ನಾಂಡಿಸ್ ನಂತರ ಅವರ ಸ್ಥಾನದಲ್ಲಿ ಸಂಸದ ಗೋಪಾಲ ಶೆಟ್ಟಿ ಅವರನ್ನು ನಾವು ಕಾಣುವಂತಾಗಬೇಕು. ನಮ್ಮ ಸಾಧನೆಗೆ ಪ್ರತಿಫಲ ದೊರೆಯಬೇಕು. ಕೊಂಕಣ ರೈಲು ಮಾರ್ಗದಲ್ಲಿ ಗಣಪತಿ, ದೀಪಾವಳಿ ಕ್ರಿಸ್ಮಸ್ ಮತ್ತು ಹೊಸವರ್ಷದಅಹ್ಮದಾಬಾದ್-ಮಂಗಳೂರು ಮತ್ತು ಮುಂಬಯಿ ಸೆಂಟ್ರಲ್ ಮಂಗಳೂರು ವಿಶೇಷ ರೈಲು ಸೇವೆ ಪಶ್ಚಿಮ ನಗರದ ಪ್ರಯಾಣಿಕರ ಅನುಕೂಲತೆ ಆಗಿದ್ದು, ಇದಕ್ಕೆ ಸ್ಪಂದಿಸಿದಂತೆ ಮುಂಬರುವ ಸೇವೆಗೂ ಪ್ರಯಾಣಿಕರು ಸಹಕರಿಸಬೇಕು. ರೈಲುಗಳಲ್ಲಿ ಅನಾಗರಿಕತೆ ಮರೆತು ಸಭ್ಯತಾ ಪ್ರಯಾಣಿಕರಾಗಿ ನಾವು ಇತರರಿಗೆ ಮಾದರಿಯಾಗಬೇಕು. ಆವಾಗಲೇ ರೈಲ್ವೇ ಪ್ರಾಧೀಕಾರ ನಮ್ಮತ್ತ ಗಮನ ಹರಿಸಿ ಸೇವೆಗೆ ಸ್ಪಂದಿಸ ಬಲ್ಲದು ಎಂದರು. ಮಂಗಳೂರು ಮುಂಬಯಿ ಪ್ರಯಾಣಿಕರ ಪರಿಸ್ಥಿತಿಯ ಸಮಸ್ಯೆಗೆ ಬೊರಿವಲಿ ರೈಲ್ವೇ ಯಾತ್ರಿ ಸಂಘ ಸ್ಪಂದಿಸಿದೆ. ಜಲಬೆಂಬಲದ ಸಹಾಯದಿಂದ ಈ ಸಂಸ್ಥೆ ಯಶಸ್ವಿ ಸಾಧಿಸಿದೆ. ರೈಲ್ವೆಯ ಪ್ರಸಕ್ತ ಪರಿಸ್ಥಿತಿ ಇನ್ನು ಸುಧಾರಣೆಯಾಗಿಲ್ಲ. ಮೂಲಭೂತ ಸೌಕರ್ಯ ದೊರೆಯುತ್ತಿಲ್ಲ. ಉಪನಗರ ರೈಲ್ವೆ ಪ್ರವಾಸ ಹಲವಾರು ಬದಲಾವಣಿಯ ನಂತರವು ಸಫಲತೆ ಕಂಡಿಲ್ಲ. ಈ ಎಲ್ಲಾ ಸಮಸ್ಯೆಗೆ ಸಂಸದರೊಂದಿಗೆ ನಾವೆಲ್ಲಾ ಒಗ್ಗಟ್ಟಾಗಿ ಬೆಂಬಲ ನೀಡಬೇಕು ಎಂದು ಪದ್ಮನಾಭ ಪಯ್ಯಡೆ ಹೇಳಿದರು.ಮುಂಡಪ್ಪ ಪಯ್ಯಡೆ ಮಾತನಾಡಿ ಅವರು ಭಾರತೀಯ ರೈಲ್ವೇ ಪ್ರಯಾಣಿಕರ ಜೀವನಾಡಿ, ಉಪನಗರದಲ್ಲಿ ರೈಲ್ವೆ ಸೇವೆಯನ್ನು ಸುಧಾರಿಸುವುದರ ಜೊತೆಗೆ ಊರಿಗೆ ಪ್ರಯಾಣಿಸುವಂತಹ ಮಾಧ್ಯಮ ವರ್ಗದ ಜನರ ಪಾಲಿಗೆ ಈ ಸಂಸ್ಥೆಯ ಆದರ್ಶಣೆಯ ಸೇವೆ ದೊರೆಯುವಂತಾಗಬೇಕು. ನಮ್ಮ ಕೆಲಸ ಕಾರ್ಯಗತವಾಗಲು ಸಂಸ್ಥೆಯ ಸಹಾಯದೊಂದಿಗೆ ಸಂಸದರಿಗೆ ಬೆಂಬಲಿಸಬೇಕು. ವಿರಾರ್ ಶಂಕರ್ ಶೆಟ್ಟಿ, ಶಿಮಂತೂರು ಉದಯ ಶೆಟ್ಟಿ ಮತ್ತು ಸಂಗಡಿಗರ ಪ್ರಯತ್ನ ಸ್ತುತ್ಯರ್ಹ ಎಂದರು. ಉದಯ ಹೆಗ್ಡೆಸ್ವಾಗತಿಸಿದರು. ಚಂದ್ರಶೇಖರ್ ಬಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಎರ್ಮಾಳ್ ಅರುಣ್ಕುಮಾರ್ ಅಭಾರ ಮನ್ನಿಸಿದರು.

By suddi9

Leave a Reply

Your email address will not be published. Required fields are marked *