ಮಹಾನಗರ ಪಾಲಿಕಾ ನೀತಿ ಜನಸಾಮಾನ್ಯರಿಗೆ ಅನುಕೂಲವಾಗಲಿ-ಸಂಸದ ಗೋಪಾಲ ಶೆಟ್ಟಿ
ಮುಂಬಯಿ: ಮಹಾನಗರ ಪಾಲಿಕಾ ನೀತಿ ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂದು ಸಂಸದ ಗೋಪಾಲ ಸಿ.ಶೆಟ್ಟಿತಿಳಿಸಿದ್ದಾರೆ. ಕಳೆದ ಶುಕ್ರವಾರ ಮುಂಜಾನೆ ಬೋರಿವಿಲಿಯಲ್ಲಿ ವೀರ ಸಾವರ್ಕರ್ ಉದ್ಯಾನ ಮತ್ತು ಪೆÇಯ್ಸರ್ ಜಿಮ್ಖಾನ ಸಂಸ್ಥೆಗಳ ಬಚಾವೋ ಸಮಿತಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಸಂಸದ ಗೋಪಾಲ ಸಿ. ಶೆಟ್ಟಿಮಾತನಾಡಿ ಪ್ರಧಾನಮಂತ್ರಿಜನಭಾಗಿದಾರಿ ಯೋಜನೆಯನ್ನು ಸ್ಥಾನೀಯ ಜನತೆಯ ಉಪಯೋಗಕ್ಕೆ ಒದಗಿಸಬೇಕೇ ಹೊರತು ಬೃಹನ್ಮುಂಬಯಿ ಮಹಾನಗರ ಪಾಲಿಕಾ (ಬಿಎಂಸಿ) ತನ್ನ ನಿಲುವಿನಂತೆ ಕಾರ್ಯನಿರ್ವಹಿಸ ಬಾರದು. ಸ್ಥಳಿಯ ಜನತೆಯೆ ಭಾಗಿತ್ವ ಇಲ್ಲಿ ಪ್ರಮುಖವಾಗಿದೆ.

Gopal C.Shetty (M.P) Morcha-1

Gopal C.Shetty (M.P) Morcha-3

Gopal C.Shetty (M.P) Morcha-4

Gopal C.Shetty (M.P) Morcha-5

Gopal C.Shetty (M.P) Morcha-A2

Gopal C.Shetty (M.P) Morcha-A4ಆದುದರಿಂದ ವೀರ ಸಾವರ್ಕರ್ ಉದ್ಯಾನ ಮತ್ತು ಪೆÇಯ್ಸರ್ ಜಿಮ್ಖಾನಗಳತ್ತ ಬಿಎಂಸಿ ಹಸ್ತಕ್ಷೇಪ ಮಾಡದಂತೆ ಮನವಿ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಬೋರಿವಿಲಿ ನಿವಾಸಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಬಿಎಂಸಿ ನೀತಿಯನ್ನು ಖಂಡಿಸಿ ಗೋಪಾಲ ಶೆಟ್ಟಿಅವರು ಸೂಕ್ತ ಕ್ರಮಕೈಗೊಂಡು ಸಮಸ್ಯೆಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿದರು. ಅಜಯ್‍ರಾಜ್ ಪುರೋಹಿತ್, ಎರ್ಮಳ್ ಹರೀಶ್ ಶೆಟ್ಟಿ, ಶಿಮಂತೂರು ಉದಯ ಶೆಟ್ಟಿ, ವಂಸಂತ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *