ಮನೆ ಮಾತಾದಾಗ ಭಾಷೆ ಬೆಳೆಯುತ್ತದೆ : ಮುಖ್ಯಮಂತ್ರಿ ಪಾರ್ಸೇಕಾರ್
ಗೋವಾ (ಪಣಜಿ): ಕೊಂಕಣಿ ಪ್ರಧಾನಮತ್ತು ರಾಜ್ಯ ಭಾಷೆಯ ಗೋವಾವು ವಿಶ್ವ ಪ್ರಸಿದ್ಧಿಯಂತೆ ಕೊಂಕಣಿ ಭಾಷೆಯು ಜಾಗತಿಕವಾಗಿ ಮಹತ್ವ ಪಡೆಯಬೇಕಾಗಿದೆ. ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಕೊಂಕಣಿ ಭಾಷೆ ಮಾತೃ
ಭಾಷೆಯಾಗಿ ರೂಡಿಯಲ್ಲಿದ್ದು, ಇದರ ಸಾಹಿತ್ಯ, ಸಂಸ್ಕೃತಿ, ಕಲೆಗಳೆಲ್ಲವೂ ವೃದ್ಧಿಯಾಗಬೇಕು. ಭಾಷೆಯು ಮನೆ ಮಾತಾಗಿ ಬೆಳೆದಾಗ ಶಕ್ತಿಶಾಲಿ ಭಾಷೆಯಾಗಿ ಬೆಳೆಯಬಲ್ಲದು ಎಂದು ಗೋವಾ ರಾಜ್ಯದಮುಖ್ಯಮಂತ್ರಿ ಲಕ್ಷ್ಮೀ ಮೀಕಾಂತ್ ಪಾರ್ಸೇಕಾರ್ ನುಡಿದರು. ಕಲಾ ಅಕಾಡೆಮಿ ಕಂಪಾಲ ಮತ್ತು ಗೋಮಂತಕ್ ಮರಾಠ ಸಮಾಜ್ ಗೋವಾ ಸಂಸ್ಥೆಗಳು ಇಂದಿಲ್ಲಿ ಶುಕ್ರವಾರ ಪಣಜಿಯಲ್ಲಿ ರೂಪಿಸಲಾದ ದಿ|ಜೆ.ಬಿಮೊರಾಯಸ್ ನಗರದ ಕಲಾ ಅಕಾಡೆಮಿಯ ತೆರೆದ ಸಭಾಗೃಹದ ವೇದಿಕೆಯಲ್ಲಿ ಆಯೋಜಿಸಲಾದ ಮೂರು ದಿನಗಳ 30ನೇ ಅಖಿಲ ಭಾರತ ಕೊಂಕಣಿ ಪರಿಷದ್‍ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮುಖ್ಯಮಂತ್ರಿ ಪಾರ್ಸೇಕಾರ್ ಮಾತನಾಡಿದರು.

All India Konkani Parishad @ GOA -A2

 

 

All India Konkani Parishad @ GOA-1

All India Konkani Parishad @ GOA-16
All India Konkani Parishad @ GOA-2

All India Konkani Parishad @ GOA-5

All India Konkani Parishad @ GOA-6

All India Konkani Parishad @ GOA-8

All India Konkani Parishad @ GOA-14

All India Konkani Parishad @ GOA-15ಡಾ| ಚಂದ್ರಶೇಖರ್ ಎಸ್.ಶೆಣೈ ಮುಂಬಯಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪರಿಷದ್‍ನಲ್ಲಿ ಗೌರವ ಅತಿಥಿಗಳಾಗಿ ಮುಂಬಯಿ ಉಚ್ಛನ್ಯಾಯಲಯದ ನಿವೃತ್ತ ನ್ಯಾಯಧೀಶ ಜಸ್ಟೀಸ್ ರಾಮಚಂದ್ರ ಎಂ.ಎಸ್ ಖಾಂಡೇಪರ್ಕರ್, ಪಣಜಿ ಶಾಸಕ ಸಿದ್ಧಾರ್ಥ್ ಕುಂಕಳ್ಕರ್ ಅವರು 30ನೇ ಪರಿಷದ್‍ನ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿದರು. ಇದೇ ಸಂದರ್ಭದಲ್ಲಿ ಅತಿಥಿಗಳುವಿಶ್ವ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉದಯ ಎಲ್.ಬೇಂಬ್ರೆ ಮತ್ತಿತರಿಗೆ ಕೊಂಕಣಿ ಸಾಹಿತ್ಯಅಕಾಡೆಮಿಯಪುರಸ್ಕಾರವನ್ನು ಅವರಿಗೆ ಪ್ರದಾನಿಸಿ ಅಭಿನಂದಿಸಿದರು. ಡಾ| ಚಂದ್ರಶೇಖರ್ ಶೆಣೈ ಅಧ್ಯಕ್ಷೀಯ ಭಾಷಣಗೈದು ಭಾಷಾ ವಿಕಾಸನದಿಂದ ಏಕೀರಣ ಸಾಧ್ಯವಾಗಿದ್ದು, ಅದಕ್ಕಾಗಿ ದೇಶದಲ್ಲಿನ ಸರ್ವ ಕೊಂಕಣಿ ಬಾಂಧವರ ಸಂಸ್ಕೃತಿ, ಸಾಹಿತ್ಯ ಬಲಗೊಳಿಸಬೇಕಾಗಿದೆ. ಭಾಷೆಯ ಎಲ್ಲಾ ವಿಚಾರಗಳಲ್ಲಿ ಪರಿಣಾಮಕಾರಿಯಾದಾಗ ಕೊಂಕಣೀಯರ ಮಧ್ಯೆ ಸ್ವಾಭಿಮಾನ ಬೆಳೆಯುತ್ತದೆ. ಇದಕ್ಕಾಗಿ ಭಾಷೆಯ ಜಾಗೃತಿಗೆ ಇಂತಹ ಪರಿಷತ್ತುಗಳು ಪರಿಣಾಮಕಾರಿಯಾಗಬಲ್ಲವು ಎಂದರು. ವೇದಿಕೆಯಲ್ಲಿ ಅಭಾಕೊಪಕಾರ್ಯಾಧ್ಯಕ್ಷೆ ಉಷಾ ರಾಣೆ, ಕಾರ್ಯಾಧ್ಯಕ್ಷಜೂಜೆ ಲಾರೇನ್ಸ್, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಶಾಂತರಾಮ್ ಎಸ್.ವಿ ವಾಲಾವ್ಲೀಕರ್, ಕಾರ್ಯದರ್ಶಿ ಸುಫಲಾ ಗಾಯ್ತೊಂಡೆ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕೋಶಾಧಿಕಾರಿ ಜ್ಞಾನೇಶ್ವರಕ್ ತಾರಿ, ಸ್ವಾಗತಸಮಿತಿ ಕಾರ್ಯನಿರತ ಅಧ್ಯಕ್ಷ ಜೋಸ್ ಲೊರೆನ್ಸೋ, ಉಪಾಧ್ಯಕ್ಷರುಗಳಾದ ಭರತ್ ನಾಯಕ್, ದಾಮೋದರ್ ಘಾಣೆಕರ್, ವಿವೇಕ್ ಪಿಸುರ್ಲೇಕರ್, ಸಂಚಾಲಕರಾದ ಅಂಜು ಸಖರ್‍ದಂಡೆ, ಗೌರಿಶಾ ವೆಣೇಕರ್, ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಬಸ್ತಿವಾಮನ ಶೆಣೈ, ಪ್ರಭಾಕರ ಪ್ರಭು ಬಂಟ್ವಾಳ, ವಿಶ್ವ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉದಯ ಎಲ್.ಬೇಂಬ್ರೆ, ಕೊಂಕಣಿ ಭಾಷಾ ಮಂಡಳ್ ಮುಂಬಯಿ ಅಧ್ಯಕ್ಷ ಜೊನ್ ಡಿ’ಸಿಲ್ವಾ, ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್‍ನ ಅಧ್ಯಕ್ಷ ಲಿಯೋ ಫೆರ್ನಾಂಡಿಸ್, ಪೌಲ್ ಮೊರಾಸ್, ಗೀತಾ ಕಿಣಿ, ವಿಲ್ಸನ್ ಕಟೀಲ್, ಲೊರೆನ್ಸ್ ಡಿ’ಸೋಜಾ ಕಮಾನಿ, ಸಿರಿಲ್ ಕ್ಯಾಸ್ತೆಲಿನೊ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪ್ರಕಾಶ್ ದತ್ತರಾಮ್ ರಚಿತ ಸ್ವಾಗತ ಗೀತೆ ಮತ್ತು ಪ್ರಾರ್ಥನೆಯನ್ನು ಅಕ್ಷಯ ನಾಯಕ್ ಆಡಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಶಾಂತರಾಮ್ ಎಸ್.ವಿ ವಾಲಾವ್ಲೀಕರ್ ಸುಖಾಗಮನ ಬಯಸಿದರು. ಕೊಂಕಣಿ ಪರಿಷದ್ ಅಧ್ಯಕ್ಷ  ಗೋಕುಲ್‍ದಾಸ್ ಪ್ರಭು ಪ್ರಾಸ್ತಾವಿಕ ನುಡಿಗಳ್ನಾಡಿದರು. ಸುಭಾಷ್ ಜ್ಹಾನ್ ಮತ್ತು ಅಕ್ಷತಾ ಪುರಣಿಕ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಸುನಿತಾ ಕಾಣೆಕರ್ ವಂದನಾರ್ಪಣೆಗೈದರು. ಕೊಂಕಣಿಯ ವಿವಿಧ ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರ ಪಡಿಸಿದರು.

By suddi9

Leave a Reply

Your email address will not be published. Required fields are marked *