ಮುಂಬಯಿ: ಜ.24: ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಹಿಳಾ ವಿಭಾಗವು 2016ನೇ ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮವನ್ನು ಇಂದಿಲ್ಲಿ ಆದಿತ್ಯವಾರ ಅಪರಾಹ್ನ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಆಯೋಜಿಸಿತ್ತು.

Bhandary Arasihna Kukuma-5

Bhandary Arasihna Kukuma-6

Bhandary Arasihna Kukuma-7

Bhandary Arasihna Kukuma-8

Bhandary Arasihna Kukuma-9

Bhandary Arasihna Kukuma-12

Bhandary Arasihna Kukuma-13

Bhandary Arasihna Kukuma-A1

Bhandary Arasihna Kukuma-B2

Bhandary Arasihna Kukuma-B3

ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವಿಭಾಗಧ್ಯಕ್ಷೆ ಲಲಿತಾ ವಿಶ್ವಾನಾಥ್ ಭಂಡಾರಿ ನೇತೃತ್ವದಲ್ಲಿ ನಡೆಸಲ್ಪಟ್ಟ ಮಹಿಳಾ ಪ್ರಧಾನ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಮಾಜ ಸೇವಕಿ, ಮನಿಫೋಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಇದರ ನಿರ್ದೇಶಕಿ ಕಡಂದಲೆ ಶೋಭಾ ಸುರೇಶ್ ಭಂಡಾರಿ ಉಪಸ್ಥಿತರಿದ್ದು, ಮಹಿಳಾ ಪದಾಧಿಕಾರಿ ಅವರನ್ನೊಳ ಗೊಂಡು ದೀವಿಗೆ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.

ಶಾಲಿನಿ ರಮೇಶ್ ಭಂಡಾರಿ, ಶಾಂತಿ ಶೇಖರ್ ಭಂಡಾರಿ, ಸುಮತಿ ಸದಾಶಿವ ಭಂಡಾರಿ, ಮಹಿಳಾ ಉಪ ಕಾರ್ಯಾಧ್ಯಕ್ಷೆ ವನಿತಾ ಎಸ್.ಭಂಡಾರಿ, ಕಾರ್ಯದರ್ಶಿ ರೇಖಾ ಎ.ಭಂಡಾರಿ ವೇದಿಕೆಯಲ್ಲಿದ್ದು, ಕಚ್ಚೂರು ಶ್ರೀನಾಗೇಶ್ವರ ದೇವರನ್ನು ಸ್ತುತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶೋಭಾ ಸುರೇಶ್ ಭಂಡಾರಿ ಮಾತನಾಡಿ ಸುಖದುಃಖಗಳನ್ನು ಸಮಚಿತ್ತದಿಂದ ಹಂಚಿಕೊಂಡು ಬಾಳಲು ಪ್ರೇರೆಪಿಸುವ ಆಚರಣೆ ಇದಾಗಿದೆ. ಭಾರತೀಯ ಧಾರ್ಮಿಕ ರಿವಾಜು ಸಮೃದ್ಧಿಯನ್ನು ತೋರುತ್ತದೆ. ಆ ಪಯ್ಕಿ ಸಂಸ್ಕಾರಕ್ಕೆ ಪೂರಕವಾದ ಹಳದಿ ಕುಂಕುಮ ಆಚರಣೆ ನಂಬಿಕಸ್ಥರಿಗೆ ವರವಾಗಿದೆ. ಅವರ ಪರಿಶ್ರಮವು ಧರ್ಮದ ಸಂದೇಶಕ್ಕೆ ಶಕ್ತಿಯಾಗಿ ಭವಿಷ್ಯತ್ತಿನ ಯುವ ಪೀಳಿಗೆಗೆ ಪ್ರೇರಕವಾಗಲಿ. ಧರ್ಮನಿಷ್ಠಾ ಮಹಿಳೆಯರ ಸಂಪ್ರದಾಯಿಕ ಈ ಆಚರಣೆಯಿಂದ ಸರ್ವ ನಾರಿಯರಿಗೂ ಫಲ ಸಿಗಲಿ. ಕಷ್ಟನಷ್ಟಗಳು ಕಳೆದುಕೊಂಡು ಇಷ್ಟಾರ್ಥಗಳು ಫಲಿಸುತ್ತಾ ಬಾಳು ಬೆಳಗಲಿ ಎಂದರು.

ಚಿತ್ರ ವರದಿ: ರೋನ್ಸ್ ಬಂಟ್ವಾಳ್

By Suddi9

Leave a Reply

Your email address will not be published. Required fields are marked *