ಬಜಪೆ: ಸಾಮೂಹಿಕ ಹಿತ ಚಿಂತನೆಯುಳ್ಳ ಸಮಾಜ ಕಾರ್ಯಗಳನ್ನು ನಡೆಸಿ ಸಮಾಜದಲ್ಲಿನ ಅವ್ಯವಸ್ಥೆಗಳನ್ನು ಪರಿವರ್ತಿಸುವಲ್ಲಿ ಸಂಘ-ಸಂಸ್ಥೆಗಳು ಪ್ರಮುಖ ಪಾತ್ರವಹಿಸಬೇಕು ಎಂದು ಕೆಂಜಾರು ಶ್ರೀ ದೇವಿ ಎಂಜಿನಿಯರಿಂಗ್ ಕಾಲೇಜಿನ ಡಾ| ವಿಜಯಾ ದೇವಿಪ್ರಸಾದ್ ಆಳ್ವ ಹೇಳಿದರು.
ಅವರು ಕಳವಾರು ಮಿತ್ರಮಂಡಳಿಯ 45ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಬೆಂಕಿನಾಥೇಶ್ವರ ದೇವಳದ ಸಭಾಂಗಣದಲ್ಲಿ ಜರಗಿದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಟ್ಟೆಯ ಕೆಎಸ್ ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ಮೆಂಟ್ನ ರವಿಲೋಚನಾ ರಾವ್, ಎಸ್ಎನ್ಎಸ್ ಕಾಲೇಜಿನ ಉಪನ್ಯಾಸಕ ಗಣೇಶ್ ಬಿ ಮಂಜೇಶ್ವರ, ಶ್ರೀನಿವಾಸ ಭಟ್ ಪೆರ್ಮುದೆ, ಮಿತ್ರಮಂಡಳಿಯ ಅಧ್ಯಕ್ಷ ಕೆ. ರಾಮ ಭಟ್ ಇವರುಗಳು ಪಾಲ್ಗೊಂಡಿದ್ದರು.
ಈ ಸಂದರ್ಭ ಬಹುಮಾನ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಲಾಯಿತು. ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
