ಬಂಟ್ವಾಳ; ಪ್ರಸ್ತುತ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿಗೆ 74.64 ಶೇಕಡಾ ಫಲಿತಾಂಶ ದಾಖಲಾಗಿದೆ. ತಾಲೂಕಿನಲ್ಲಿ ಒಟ್ಟು 6050 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದು, 4516 ವಿದ್ಯಾಥರ್ಿಗಳು ತೇರ್ಗಡೆಗೊಂಡಿದ್ದಾರೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ತಿಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ 3160 ಬಾಲಕರ ಪೈಕಿ 2095 , 2890 ಬಾಲಕಿಯರ ಪೈಕಿ 2421 ಬಾಲಕಿಯರು ತೇರ್ಗಡೆ ಹೊಂದಿದ್ದಾರೆ.
ಶೇ.100 ಫಲಿತಾಂಶ
ತಾಲೂಕಿನ 10 ಖಾಸಗಿ ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿದ್ದು, ಅಳಿಕೆ ಸತ್ಯಸಾಯಿ ಲೋಕಸೇವಾ ಆಂಗ್ಲಮಾಧ್ಯಮ ಶಾಲೆಯ ವಿದ್ಯಾಥರ್ಿ ಜೆ.ಆತ್ರೇಯ ನಾರಾಯಣ 615 ಅಂಕಗಳಿಸಿ ಪ್ರಥಮ ಹಾಗೂ ಕನ್ನಡ ಮಾಧ್ಯಮದಲ್ಲಿ ವಿಟ್ಲ ದ ವಿಠಲ ಪ್ರೌಢಶಾಲೆಯ ಉಷಾ ಎ 611 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ.
ಎಸ್ವಿಎಸ್ ದೇವಳ ಆಂಗ್ಲಮಾಧ್ಯಮ ಬಂಟ್ವಾಳ, ಸಂತ ರೀಟಾ ವಿಟ್ಲ, ಬಾಲವಿಕಾಸ ಮಾಣಿ, ಆಲ್ ಮದೀನ ಪ್ರೌಢಶಾಲೆ ನರಿಂಗಾನ(ಕನ್ನಡ ಮಾಧ್ಯಮ), ಎಸ್ ವಿಎಸ್ ವಿದ್ಯಾಗಿರಿ ಆಂಗ್ಲಮಾಧ್ಯಮ ಬಂಟ್ವಾಳ, ವಿಟ್ಲ ಜೇಸಿಸ್ ವಿಟ್ಲ, ಜ್ಞಾನದೀಪ ಪ್ರೌಢಶಾಲೆ ಕುನರ್ಾಡು, ಸೈಂಟ್ ಜೋನ್ ಪ್ರೌಢಶಾಲೆ ಅಲ್ಲಿಪಾದೆ, ಎಸ್ಎಲ್ಎನ್ಪಿ ಪಾಣೆಮಂಗಳೂರು, ಲೊರೆಟ್ಟೋ ಆಂಗ್ಲಮಾಧ್ಯಮ ಶಾಲೆ ಶೇ. 100 ಸಾಧನೆ ಮಾಡಿದೆ.
ಸಕರ್ಾರಿ ಶಾಲೆಗಳ ಪೈಕಿ ವಗ್ಗದಲ್ಲಿರು ಮೊರಾಜರ್ಿ ವಸತಿ ಶಾಲೆ 94.8 ಶೇ. ಹಾಗೂ ಕೊಡ್ಮಾಣ್ ಸಕರ್ಾರಿ ಪ್ರೌಢಶಾಲೆ 92ಶೇ. ನಯನಾಡು ಸಕರ್ಾರಿ ಪ್ರೌಢಶಾಲೆ 91.7 ಸಾಧನೆ ಮಾಡಿವೆ. ನಂದಾವರ ಸಕರ್ಾರಿ ಪ್ರೌಢಶಾಲೆ ಶೇ.24.7 ಶೇ. ಕನಿಷ್ಠ ಫಲಿತಾಂಶ ದಾಖಲಿಸಿದೆ.
