ಬಂಟ್ವಾಳ; ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಜಡ್ಡುಕಟ್ಟಿದ್ದ ಬಂಟ್ವಾಳ ತಾಲೂಕಿನ ಸಕರ್ಾರಿ ಯಂತ್ರವನ್ನು ಮತ್ತೆ ಚುರುಕುಗೊಳಿಸುವ ಕಾರ್ಯ ಮಂಗಳವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆದಿದೆ.
ಬಿ.ಸಿ.ರೋಡಿನ ಎಸ್ಜೆಎಸ್ಆರ್ ವೈ ಸಭಾಂಗಣದಲ್ಲಿ ತಾಲೂಕಿನ ಇಲಾಖಾಧಿಕಾರಿಗಳ ಸಭೆ ನಡೆಸಿದ ಸಚಿವರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಯನ್ನು ನಿವಾರಿಸುವಲ್ಲಿ ಆದ್ಯತೆಯ ಮೇರೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಬೇಡಿಕೆಯಿರುವಲ್ಲಿ ಕೊಳವಿ ಬಾವಿ ಕೊರೆಯಲು ಹಾಗೂ ನೀರಿನ ಕೊರತೆ ಇರುವಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಸಚಿವರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ನಿದರ್ೇಶನ ನೀಡಿದರು.

ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಎರಡನೇ ಹಂತದ 24*7 ಕುಡಿಯುವ ನೀರಿನ ಯೋಜನೆಗೆ ಜಮೀನಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ, ಪುರಸಭೆಗೆ ಹಸ್ತಾಂತರಿಸುವಂತೆ ತಹಶೀಲ್ದಾರರಿಗೆ ಸಚಿವರು ನಿದರ್ೇಶನ ನೀಡಿದರು.
ತ್ಯಾಜ್ಯ ವಿಲೇವಾರಿ; ಸಚಿವರ ಅಸಮಾಧಾನ
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಸ ಸಂಗ್ರಹಣೆಯ ಸಜಿಪನಡುಗ್ರಾಮದ ಕಂಚಿನಡ್ಕಪದವಿನ ತ್ಯಾಜ್ಯ ಸಂಸ್ಕರಣಾ ಘಟಕದ ನಿಮರ್ಾಣ ಕಾರ್ಯವನ್ನು ಚುರುಕುಗೊಳಿಸುವಂತೆ ಪುರಸಭಾ ಮುಖ್ಯಾಧಿಕಾರಿ ಗಣೇಶ್ ರವರಿಗೆ ಸಚಿವ ರೈ ಸೂಚನೆ ನೀಡಿದ್ದಾರೆ.
ಪುರಸಭಾ ವ್ಯಾಪ್ತಿಯ ಎಲ್ಲೆಂದರಲ್ಲಿ ಚೆಲ್ಲಾಡಿರುವ ತ್ಯಾಜ್ಯಗಳ ಬಗ್ಗೆ ತೀವ್ರ ಅಸಾಮಾಧಾನ ವ್ಯಕ್ತಪಡಿಸಿದ ಸಚಿವ ರೈ, ಈ ಬಗ್ಗೆ ಮುಖ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ. ತ್ಯಾಜ್ಯಸಂಸ್ಕರಣಾ ಘಟಕದ ಪ್ರಗತಿಯ ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಯವರು, ಷರತ್ತಿನನ್ವಯ ಕಾಮಗಾರಿ ಮುಂದುವರಿಸಲು ಸದನ ಸಮಿತಿ ತೀಪರ್ುನೀಡಿದೆ. ಅದರಂತೆ ಸಂಸ್ಕರಣಾ ಘಟಕದ ಸಮೀಪವಿರುವ ಅಂಗನವಾಡಿ ಕೇಂದ್ರ ಹಾಗೂ ಶಾಲೆಯನ್ನು ಸ್ಥಳಾಂತರಿಸಬೇಕಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಇದೇ ವೇಳೆ ಆಕ್ರೋಶಗೊಂಡ ಸಚಿವರು, ತ್ಯಾಜ್ಯವಿಲೇವಾರಿಯಂತಹಾ ಗಂಭೀರ ಸಮಸ್ಯೆಯ ಬಗ್ಗೆ ಕ್ಷುಲ್ಲಕ ಕಾರಣಗಳನ್ನು ಮುಂದಿಡಬೇಡಿ, ಇಂತಹಾ ನಿರ್ಲಕ್ಷ್ಯಗಳಿಂದ ಪುರಸಭೆಗೇ ಕೆಟ್ಟ ಹೆಸರು ಬರುತ್ತದೆ, ಮಾಧ್ಯಮಗಳೂ ಈ ಬಗ್ಗೆ ಗಮನಸೆಳೆದಿವೆ, ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಭೆಗೆ ಗೈರುಹಾಜರಾಗಿದ್ದ ಮುಖ್ಯಾಧಿಕಾರಿಯವರನ್ನು ತಹಶೀಲ್ದಾರರು ದೂರವಾಣಿ ಕರೆಯ ಮೂಲಕ ಕರೆಸಿಕೊಂಡರು.
12 ಸಾವಿರ ಬಿಪಿಎಲ್ ಕಾಡರ್್ ವಿತರಣೆ..
ತಾಲೂಕಿನಲ್ಲಿ ಬಿಪಿಎಲ್ ಕಾಡರ್್ ಗಾಗಿ ಒಟ್ಟು 17, 149 ಅಜರ್ಿಗಳು ಬಂದಿದ್ದು, ಈ ಪೈಕಿ 12,680 ಅಜರ್ಿದಾರ ಕುಟುಂಬಗಳಿಗೆ ಬಿಪಿಎಲ್ ಕಾಡರ್್ ವಿತರಿಸಲಾಗಿದೆ ಎಂದು ತಹಶೀಲ್ದಾರ್ ಮಲ್ಲೇಸ್ವಾಮಿ ಸಭೆಗೆ ಮಾಹಿತಿ ನೀಡಿದರು. ಉಳಿದ ಅಜರ್ಿಗಳನ್ನು ಪರಿಶೀಲಿಸಿ, ಅರ್ಹ ಕುಟುಂಬಗಳಿಗೆ ಶೀಘ್ರ ಬಿಪಿಎಲ್ ಕಾಡರ್್ ವಿತರಿಸುವಂತೆ ಸಚಿವ ರೈ ಸೂಚಿಸಿದರು.
ಹಲವು ವರ್ಷಗಳಿಂದ ನಿವೇಶನ ಹಂಚಿಕೆ ಪ್ರಕ್ರಿಯೆ ಸ್ಥಗಿತಗೊಂಡಿದ್ದ ತಾಲೂಕಿನಲ್ಲಿ ನಿವೇಶನರಹಿತರ ಸಮಸ್ಯೆ ಬಿಗಡಾಯಿಸಿದ್ದು,ಸಕರ್ಾರಿ ಜಮೀನುಗಳ ಅತಿಕ್ರಮಣಗಳು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕಾಯ್ದಿರಿಸಿದ ಸಕರ್ಾರಿ ನಿವೇಶನಗಳನ್ನು ಫಲಾನುಭವಿಗಳಿಗೆ ಕಾಲಕಾಲಕ್ಕೆ ಹಂಚಿಕೆಮಾಡಬೇಕೆಂದು ರೈ ಸಲಹೆ ನೀಡಿದರು.
ಚುನಾವಣಾ ನೀತಿಸಂಹಿತ ಅಂತ್ಯಗೊಂಡ ಬೆನ್ನಲ್ಲೇ ಅಕ್ರಮ ಸಕ್ರಮ ಸಮಿತಿಯ ಸಭೆ ನಡೆಸುವಂತೆ ಸೂಚಿಸಿದ ಸಚಿವರು 94/ಸಿ ಅಜರ್ಿಗಳ ವಿಲೇವಾರಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
9 ಮಂದಿಗೆ ಮಲೇರಿಯಾ, 28 ಮಂದಿಗೆ ಕ್ಷಯ..
ಆರೋಗ್ಯ ಇಲಾಖಾ ಪ್ರಗತಿ ಪರಿಸೀಲನೆ ವೇಳೆ ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್, ತಾಲೂಕಿನಲ್ಲಿ 3171 ಮಂದಿಯ ರಕ್ತ ಪರಿಶೀಳನೆ ನಡೆಸಲಾಗಿದ್ದು 9 ಮಂದಿಯಲ್ಲಿ ಮಲೇರಿಯಾ ಪತ್ತೆಯಾಗಿದೆ, 207 ಮಂದಿಗೆ ಕಫಪರೀಕ್ಷೆ ನಡೆಸಿದಾಗ 28 ಮಂದಿಯಲ್ಲಿ ಕ್ಷಯ ರೋಗ ಕಾಣಿಸಿಕೊಂಡಿದ್ದು ಚಿಕಿತ್ಸೆ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಮಳೆಯಿಂದ ಸಾಂಕ್ರಾಮಿಕ ರೋಗಗಳು ಹೆಚ್ಚುವ ಭೀತಿಯಿದ್ದು ಇ ಬಗ್ಗೆ ಜನರಲ್ಲಿ ಜಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನಯ ಹಮ್ಮಿಕೊಳ್ಳಲಾಗಿದೆ ಎಮದು ತಿಳಿಸಿದರು.
ತಾಲೂಕಿನ ವಿಟ್ಲ ಹೋಬಳಿಯಲ್ಲಿ ಎಮಡೋಪೀಡಿತರ ಶಿಬಿರ ನಡೆಸಿ 180 ಫಲಾನುಭವಿಗಳಿಗೆ ಮಾಸಶನ ವಿತರಿಸಲಾಗಿದೆ. ಮರುಸವರ್ೇಯ ವೇಳೆ 105 ಮಂದಿ ಎಮಡೋಪೀಡಿತರು ಪತ್ತೆಯಾಗಿದ್ದು ಮುಂದಿನ ಹಂತದಲ್ಲಿ ಅವರಿಗೂ ಮಾಸಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಾಧಿಕಾರಿ ಮಾಹಿತಿ ನೀಡಿದರು. ತಾಲೂಕಿನ ವಿವಿಧ ಪ್ರಾ.ಆ. ಕೇಂದ್ರದಲ್ಲಿ ವೈದ್ಯಾಧಿಕಾರಿಗಳ ಕೊರೆತೆಯ ಬಗ್ಗೆ ಸಚಿವರ ಗಮನ ಸೆಳೆದರು.
2.5 ಕೋಟಿ ಕೊರತೆ:
ಅಡಿಕೆ ಕೊಳೆ ರೋಗಕ್ಕೆ ಈವರೆಗೆ 5.25 ಕೋಟಿ ರುಪಾಯಿ ಪರಿಹಾರ ಮೊತ್ತ ವಿತರಿಸಲಾಗಿದ್ದು ಉನ್ನೂ 2.5 ಕೋಟಿ ರುಪಾಯಿಯ ಅಗತ್ಯವಿದೆ ಎಂದು ತೋಟಗಾರಿಕಾ ಸಹಾಯಕ ನಿದರ್ೇಶಕ ಸಂಜೀವನಾಯ್ಕ್ ಮಾಹಿತಿ ನೀಡಿದರು.
ಸುವರ್ಣ ಗ್ರಾಮ ಯೋಜನೆ, ನಬಾಡರ್್, ನಮ್ಮ ಗ್ರಾಮ ನಮ್ಮ ರಸ್ತೆ, ಸಿಆರ್ಎಫ್ ಯೋಜನೆಯಡಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶಾಸಕರ ನಿಧಿಯಡಿ 2 ಕೋಟಿಗಿಂತಲೂ ಮೀರಿ 27 ಲಕ್ಷ ರು ಹೆಚ್ಚು ವರಿಯಾಗಿ ಕಾಮಗಾರಿ ನಡೆಸಲಾಗಿದೆ ಎಂದು ಜಿ.ಪಂ.ಎಂಜಿನಿಯರ್ ಗಿರೀಶ್ ಕೆ.ಪಿ. ಸಚಿವರ ಗಮನಕ್ಕೆ ತಂದರು. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ಅರಣ್ಯ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ, ತಾ.ಪಂ. ಸೇರಿದಂತೆ ಮೂರು ಗಂಟೆಗಳ ಕಾಲ ಸಚಿವರು ಅಧಿಕಾರಿಗಳ ಕ್ಲಾಸ್ ತೆಗೆದುಕೊಂಡರು.
ತಾ.ಪಂ. ಕಾರ್ಯನಿವರ್ಾಹಣಾಧಿಕಾರಿ ಸಿಪ್ರಿಯನ್ ಮಿರಾಂದ ಸ್ವಾಗತಿಸಿ ವಂದಿಸಿದರು.
