ಬಂಟ್ವಾಳ: ಚಪ್ಪಲಿ ಖರೀದಸಲೆಂದು ತನ್ನ ಚಿಕ್ಕಮ್ಮನೊಂದಿಗೆ ಬಂಟ್ವಾಳ ಪೇಟೆಗೆ ಆಗಮಿಸಿ ಬಳಿಕ ನಾಪತ್ತೆಯಗಿದ್ದ ಸರಪಾಡಿ ಗ್ರಾಮದ ನಡಾಯಿ ನಿವಾಸಿ ದಿ. ಜಯಂತ ಪೂಜಾರಿ ಹಾಗೀ ವಿಶಾಲಾಕ್ಷಿ ದಂಪತಿಯ ಪುತ್ರಿ ಅಪ್ರಪ್ತ ವಯಸ್ಸಿನ ಆಶಾಲತಾಳನ್ನು ಬೆಳಗಾಂನ ಅಥೆಣಿ ಎಂಬಲ್ಲಿ ಪತ್ತೆಹಚ್ಚಿ ಬಂಟ್ವಾಳಕ್ಕೆ ಕರೆತಂದಿದ್ದು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

love
ಬಂಟ್ವಾಳ ಗ್ರಾಮಾಂತರ ಎಸೈ ನಾಗರಾಜ ಮತ್ತವರ ತಂಡ ನಡೆಸಿದ ಯಶಸ್ವಿ ಕಾರ್ಯಚರಣೆಯಲ್ಲಿ ಬೆಳಗಾಂನ ಅಥಣಿ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಇದ್ದ ಬಾಲಕಿಯನ್ನು ಪತ್ತೆ ಮಾಡಿ ಮಂಗಳವಾರ ಬಂಟ್ವಾಳಕ್ಕೆ ಕರೆತಂದಿದ್ದಾರೆ. ಈ ಸಂದರ್ಭದಲ್ಲಿ ಪ್ರಕರಣದ ಪ್ರಮುಖ ಆರೋಪಿ ಅಶೋಕ್ (32) ಹಾಗು ಆತನಿಗೆ ಸಹಕಾರ ನೀಡಿದ್ದ ರವಿ ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈತನಿಗೆ ಈಗಾಗಲೇ ವಿವಾಹವಾಗಿದ್ದು ಇಬ್ಬರು ಮಕ್ಕಳನ್ನು ತಂದೆಯಾಗಿದ್ದಾನೆ. ಈಗಾಗಲೇ ಪತ್ನಿಗೆ ಆರೋಪಿ ಆಶೋಕ ವಿಚ್ಚೇಧನ ನೀಡಿದ್ದಾನೆ ಎಂದು ಪೊಲಿಸರ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. .
ಪ್ರೀತಿ ಮಾಯೆ ಹುಷಾರು…..
ನಾಪತ್ತೆಯದ ಬಾಲಕಿ ಆರೋಪಿ ಅಶೋಕ್ನ ಪ್ರೀತಿಯ ಬಲೆಗೆ ಬಿದ್ದಿರುವುದು ನಾಪತ್ತೆಗೆ ಕಾರಣ ಎನ್ನುವ ಅಂಶ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ತನ್ನ ಗೆಳತಿಗೆ ಮಾಡಿದ ಪೋನ್ ಕರೆಯ ಮೂಲಕ ಅಶೋಕ್ನೊಂದಿಗೆ ಸ್ನೇಹ ಸಂಪಾದಿಕೊಂಡ ಆಶಾಲತಾ ನಿರಂತರ ಪೋನ್ ಮೂಲಕ ಸಂಪರ್ಕದಲ್ಲಿದ್ದಳು. ದಿನಕಳೆದಂತೆ ಈ ಸ್ನೇಹ ಪ್ರೇಮಕ್ಕೆ ತಿರುಗಿದ್ದೇ ಈ ಎಲ್ಲಾ ಅವಾಂತರಗಳಿಗೆ ಕಾರಣ ಎನ್ನಲಾಗಿದೆ. ಈ ವಿಚಾರವನ್ನು ಚಿಕ್ಕಮ್ಮ ಸವಿತಾಳಲ್ಲಿ ಹೇಳಕೊಂಡಿದ್ದು ತನ್ನನ್ನು ಆತನಿಗೆ ವಿವಾಹ ಮಾಡಿಸಿಕೊಡದೇ ಇದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಕೆ ಹಾಕಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈಕೆಯ ಒತ್ತಡದಿಂದಲೇ ಈ ಘಟನೆ ನಡೆದಿದ್ದು ಆಕೆ ಅಪ್ರಾಪ್ತೆ ಎನ್ನುವ ಕಾರಣಕ್ಕೆ ಆರೋಪಿ ಅಶೋಕ್ ಮತ್ತು ಇತರರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದ ಸುದ್ದಿ ತಿಳಿದ ಆಕೆಯ ಪೋಷಕರು ಠಾಣೆಗೆ ಆಗಮಿಸಿ ಆಶಾಲತಾಳೊಂದಿಗೆ ಮಾತುಕತೆಗೂ ಮುಂದಾದರು. ಈ ಸಂದರ್ಭ ಪ್ರಭಾರ ಸಿಐ ಬಿ.ಕೆ. ಮಂಜಯ್ಯ ರವರು ಹೆತ್ತವರಿಗೆ ಆಕೆಯನ್ನು ಮಾತನಾಡಿಸಲು ಅವಕಾಶ ನಿರಾಕರಸಿದರು. ಪೊಲೀಸರ ತನಿಖೆಯ ವೇಳೆ ಬಾಲಿಕ ತಾನು ಅಶೋಕ್ ಜೊತೆಯೇ ತೆರಳುವುದಗಿ ಪಟ್ಟು ಹಿಡಿದಿದ್ದಳೆ.
ಕಳೆದ ಎರಡೂ ತಿಂಗಳಿನಿಂದ ಸದಾ ಸುದ್ದಿಯಲ್ಲಿದ್ದ ಈ ಪ್ರಕರಣ ಈಗ ಒಂದು ಹಂತಕ್ಕೆ ತಲುಪಿದ್ದು ಪ್ರಮುಖ ಆರೋಪಿ ಅಶೋಕನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಬಾಲಕಿ ಆಶಾಲತಾಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ರಿಮಾಂಡ್ ಹೋಂಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ಇದರೊಂದಿಗೆ ಹಲವು ದಿನಗಂಳಿಂದ ಹಬ್ಬಿದ್ದ ಊಹಾಪೋಹಗಳಿಗೆ ತೆರೆಬಿದ್ದಿದೆ. ಈ ಕಾರ್ಯಚರಣೆಯಲ್ಲಿ ಎಸೈ ನಾಗರಾಜ್ ಅವರೊಂದಿಗೆ ಸಿಬ್ಬಂದಿಗಳಾದ ಲಕ್ಷ್ಮಣ್, ಪ್ರಶಾಂತ್, ಕುಮಾರ್, ರವರು ಸಹಕರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರ ಬಾಲಕಿಯ ಚಿಕ್ಕಮ್ಮ ಸವಿತಾ ಹಾಗೂ ಆರೋಪಿ ಅಶೋಕ್ನ ಚಿಕ್ಕಮ್ಮ ಧರ್ಮರಾಜ್ನನ್ನು ಬಂಧಿಸಲಾಗಿತ್ತು.
ಕಳೆದ ಮಾ.17ರಂದು ಚಿಕ್ಕಮ್ಮ ಸವಿತಾಳೊಂದಿಗೆ ಚಪ್ಪಲಿ ಖರೀದಿಸಲೆಂದು ಬಂಟ್ವಾಳ ಪೇಟೆಗೆ ಅಗಮಿಸಿ ಬಳಿಕ ನಾಪತ್ತೆಯಾಗಿದ್ದಳು. ಬಾಲಕಿಯನ್ನು ಮಾರಾಟ ಜಾಲದಲ್ಲಿ ಸಿಲುಕಿಸಲಾಗಿತ್ತು ಎನ್ನುವ ವದಂತಿಯೂ ಹಬ್ಬಿ ರಾಜಕೀಯ ಲೇಪವು ಅಂಟಿಕೊಂಡಿತ್ತು. ಆರೋಪಿ ಅಶೋಕ್ನ ಬಂಧನದ ಬಳಿಕವಷ್ಟೇ ಇಡೀ ಪ್ರಕರಣದ ಸತ್ಯಾಸತ್ಯತೆ ಹೊರ ಬೀಳಬೇಕಾಗಿದೆ.

By suddi9

Leave a Reply

Your email address will not be published. Required fields are marked *