ಮಂಗಳೂರು: ಮಂಗಳೂರಿನಿಂದ ಮೈಸೂರಿಗೆ ಪ್ರವಾಸಕ್ಕೆ ಹೊರಟ ತಂಡದ ಟೆಂಪೋ ಟ್ರಾವೆಲರ್ ವಾಹನಕ್ಕೆ  ಮಂಗಳೂರು ಮೈಸೂರು ರಸ್ತೆಯ ಮುಖಾಂತರ ಹಾದು ಹೋಗಿರುವ ಪೆರಿಯಾಪಟ್ಟಣದಲ್ಲಿ ಉಂಟಾದ ಅಪಘಾತಕ್ಕೆ ಮಂಗಳೂರು ಮೂಲದ 9 ಮಂದಿ ಬಲಿಯಾಗಿದ್ದು, 11 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
piriyapattana
ಮೃತರು ದೇರಳಕಟ್ಟೆ ಮೂಲದವರೆಂದು ತಿಳಿಯಲಾಗಿದ್ದು ಮೃತರ ವಿವರ ಇಂತಿದೆ: ಆಸೀಂ(60), ಸಾಜಿದಾ(35), ಜುನೇದಾ(30), ಜೀನತ್(25), ಅಮೀರ್(48), ಸಫೀದಾ(6), ಅಫೀಜ್(3), ಮೊಹಮ್ಮದ್ ಮುಸ್ತಾಫ್ (3) ಮೃತರು.
ಮೃತಪಟ್ಟ ಒಂಭತ್ತು ಮಂದಿಯಲ್ಲಿ ಮೂವರು ಮಕ್ಕಳು, ಮೂವರು ಮಹಿಳೆಯರು ಹಾಗೂ ಮೂವರು ಪುರುಷರು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಟೆಂಪೋ ಟ್ರಾವೆಲರ್ ಮಂಗಳೂರು ಕಡೆಗೆ ಹಾಗೂ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಮೈಸೂರು ಕಡೆಗೆ ಹೊರಟಿದ್ದ ಲಾರಿಯ ಮಧ್ಯೆ ಈ ದುರ್ಘಟನೆ ಸಂಭವಿಸಿದೆ.
ಮೃತರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರೆಂಬ ಮಾಹಿತಿ ಲಭ್ಯವಾಗಿದೆ.

By suddi9

Leave a Reply

Your email address will not be published. Required fields are marked *