ಬಂಟ್ವಾಳ; ಬಿ.ಸಿ.ರೋಡಿನ ಮೇಲ್ಸೇತುವೆಯಡಿ ನಿಲ್ಲಿಸಿದ್ದ ಬೈಕೊಂದು ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ. ತಮಿಳುನಾಡು ಮೂಲದ ಕುಂಭಕೋಣ ನಿವಾಸಿ ರಂಜಿತ್ ಕುಮಾರ್ ಎಂಬವರಿಗೆ ಸೇರಿದ ಕೆಎ36 ಇಎ3764 ನಂಬ್ರದ ಬೈಕ್ ಕಳವಾಗಿದೆ. ಇವರು ಸೋಮವಾರ ಮೇಲ್ಸೇತುವೆಯಡಿ ಬೈಕ್ ನಿಲ್ಲಿಸಿ. ಪಕ್ಕದ ಹೋಟೆಲ್ ನಲ್ಲಿ ಊಟ ಮುಗಿಸಿ ಮರಳಿ ಬಂದಾಗ ಬೈಕ್ ಕಾಣೆಯಾಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *