ಬಂಟ್ವಾಳ; ರಿಕ್ಷಾ ಚಾಲಕರು ತಮ್ಮ ಸೀಟಿನ ಹಿಂಭಾಗದಲ್ಲಿ ಪ್ರಯಾಣಿಕರಿಗೆ ಕಾಣುವಂತೆ ಕಡ್ಡಾಯವಾಗಿ ವೋಟರ್ ಐಡಿಯ ಜೆರಾಕ್ಸ್ ಪ್ರತಿ, ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಅಳವಡಿಸುವಂತೆ ಬಂಟ್ವಾಳ ನಗರ ಠಾಣೆಯ ನೂತನ ಸಬ್ಇನ್ಸ್ಪೆಕ್ಟರ್ ನಂದಕುಮಾರ್ ಎಂ.ಎಂ. ಸೂಚಿಸಿದ್ದಾರೆ.

ಮಂಗಳವಾರ ಸಂಜೆ ಬಂಟ್ವಾಳ ಹಾಗೂ ಬಿ.ಸಿ.ರೋಡಿನ ರಿಕ್ಷಾ ಚಾಲಕರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಚಾಲಕ ಮಾಲಕರ ಸಭೆ ನಡೆಸಿದ ಅವರು, ಮುಂದಿನ ಜೂನ್ ನ ಒಳಗಾಗಿ ಚಾಲಕರು ಕಟ್ಟುನಿಟ್ಟಾಗಿ ಇದನ್ನು ಪಾಲಿಸುವಂತೆ ನಿದರ್ೇಶನ ನೀಡಿದ್ದಾರೆ. ಹಾಗೆಯೇ ಬಿ.ಸಿ.ರೋಡು ಹಾಗೂ ಬಂಟ್ವಾಳ ಪರಿಸರದಲ್ಲಿ ಸೂಕ್ತ ಪಾಕರ್ಿಂಗ್ ವ್ಯವಸ್ಥೆ ಯ ಬಗ್ಗೆ ಯೂ ಸಭೆಯಲ್ಲಿ ಚಚರ್ಿಸಲಾಯಿತು. ರಿಕ್ಷಾದಲ್ಲಿ ಡ್ಡಾಯವಾಗಿ ಚಾಲಕ ತನ್ನ ಡ್ರೈವಿಂಗ್ ಲೈಸೆನ್ಸ್ ಹಾಗೂ ಇತರ ದಾಖಲೆ ಪತ್ರಗಳನ್ನು ಇಟ್ಟುಕೊಳ್ಳಬೇಕೆಂದು ಸೂಚನೆ ನೀಡಲಾಯಿತು. ವಾಹನ ಸಂಚಾರದ ವೇಳೆ ಇತರ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಅಡೆತಡೆಯಾಗದಂತೆ ಪಾಕರ್ಿಂಗ್ ಮಾಡುವಂತೆಯೂ ಸಲಹೆ ನೀಡಿದರು. ಇದೇ ವೇಳೆ ರಿಕ್ಷಾ ಚಾಲಕ-ಮಾಲಕರೂ ಕೂಡ ಕೆಲ ಸಲಹೆ-ಸೂಚನೆಗಳನ್ನು ಎಸೈ ಯವರ ಮುಂದಿಟ್ಟರು. ಇನ್ನೆರಡು ದಿನಗಳಲ್ಲಿ ಬಸ್ ಹಾಗೂ ಟೂರಿಸ್ಟ್ ಕಾರು-ಚಾಲಕ ಮಾಲಕರ ಸಭೆ ಕರೆಯುವುದಾಗಿ ಎಸ್ಐ ನಂದಕುಮಾರ್ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.. ಎರಡು ದಿನಗಳ ಹಿಂದೆ ದಿಡೀರನೇ ಬಂಟ್ವಾಳ ನಗರ ಠಾಣೆಯ ಹಿಂದಿನ ಎಸ್ಐ ಸಂಜಯ ಕುಮಾರ್ ರವರನ್ನು ಜಿಲ್ಲಾ ಗುಪ್ತ ವಾತರ್ೆ ವಿಭಾಗಕ್ಕೆ ವಗರ್ಾಯಿಸಿದ್ದು, ಮಂಗಳೂರು ಗ್ರಾಮಾಂತರ ಠಾಣೆಯ ಎಸ್ಐ ನಂದಕುಮಾರ್ ರವರನ್ನು ತೆರವಾದ ಈ ಸ್ಥಾನಕ್ಕೆ ನಿಯುಕ್ತಿಗೊಳಿಸಲಾಗಿದೆ.
