rakshith
rakshith
rakshith

ಕೈಕಂಬ: ಈ ಬಾರಿ ನಡೆದ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಯಲ್ಲಿ ಸಂಯುಕ್ತ ಪ್ರೌಢ ಶಾಲೆ ಮಳಲಿ ಇದರ ರಕ್ಷಿತ್ ಎಂಬಾತನಿಗೆ 581 (ಶೇ.92.96) ಅಂಕಗಳೊಂದಿಗೆ ತೇರ್ಗಡೆಯಾಗಿ ಹೆತ್ತವರಿಗೆ ಹಾಗೂ ಶಾಲೆಗೆ ಕೀತರ್ಿ ತಂದಿದ್ದಾನೆ. ಮಳಲಿಯಂಥಾ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಟ್ಯೂಷನ್ ಇಲ್ಲದೆ ಇಷ್ಟು ದೊಡ್ಡ ಅಂಕ ಗಳಿಸಿರುವುದು ವಿಶೇಷವೇ ಸರಿ ಎಂದು ಬಣ್ಣಿಸಲಾಗುತ್ತಿದೆ.
ಮಳಲಿಯ ಕೋದರ್ೊಟ್ಟು ಹರೀಶ್ ಪೂಜಾರಿ ಹಾಗೂ ಗೀತಾ ದಂಪತಿಯ ಸುಪುತ್ರನಾಗಿರುವ ರಕ್ಷಿತ್ ಇದುವರೆಗೂ ಯಾವುದೇ ಟ್ಯೂಷನ್ಗೆ ಹೋಗಿಲ್ಲ. ಮಾರುಕಟ್ಟೆಗಳಲ್ಲಿ ಸಿಗುವ ಯಾವುದೇ ಮಾರ್ಗದಶರ್ಿ ಪುಸ್ತಕಗಳನ್ನು ಖರೀದಿಸಿಲ್ಲ. ಬರೀ ಪಠ್ಯ ಪುಸ್ತಕವನ್ನೇ ಮನನ ಮಾಡುತ್ತಾ ಓದಿದ್ದ. ಇವನು ಮನೆಯಿಂದ ಶಾಲೆಗೆ ಹೋಗಬೇಕಾದರೆ 1 ಗಂಟೆಯ ಕಾಲ ಕಾಲ್ನಡಿಗೆಯಲ್ಲಿ ಕ್ರಮಿಸಬೇಕು.
ಈತನ ಹೆತ್ತವರಿಗೆ ಅಷ್ಟೇನೂ ದೊಡ್ಡ ಮಟ್ಟದ ವಿದ್ಯೆ ಇಲ್ಲ. ಈತನಿಗೆ ಓದು ಎಂದು ಯಾರೂ ಕೂಡಾ ಒತ್ತಾಯಪಡಿಸುವುದಿಲ್ಲ. ಅವನಷ್ಟಕ್ಕೇ ಓದುತ್ತಾ ಇರುತ್ತಾನೆ. ಶಿಕ್ಷಕರ ಪ್ರೋತ್ಸಾಹದಿಂದ ಹಾಗೂ ಆತನ ಶ್ರಮದಿಂದ ಇಷ್ಟು ಅಂಕಗಳು ಬಂದಿವೆ ಎಂದು ಹೇಳುವ ಈತನ ಹೆತ್ತವರು ಮಗನ ಸಾಧನೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ.
ಈತನಿಗೆ ಕನ್ನಡ ಭಾಷೆಯಲ್ಲಿ 125ರಲ್ಲಿ 124 ಅಂಕಗಳು ಲಭಿಸಿದೆ. ಹಿಂದಿಯಲ್ಲಿ 98 ಸಮಾಜವಿಜ್ಞಾನದಲ್ಲಿ 97, ವಿಜ್ಞಾನದಲ್ಲಿ 96, ಹಿಂದಿಯಲ್ಲಿ 85 ಹಾಗೂ ಇಂಗ್ಷಿಷ್ನಲ್ಲಿ 81 ಅಂಕಗಳು ಲಭಿಸಿದೆ.
ಅಂದಹಾಗೆ ಈ ಬಾರಿ ಮಳಲಿ ಶಾಲೆಗೆ 81.25 ಶೇ. ಫಲಿತಾಂಶ ಬಂದಿದೆ.

By suddi9

One thought on “ಮಳಲಿಯ ಗ್ರಾಮೀಣ ಪ್ರತಿಭೆಗೆ ಅತ್ಯಧಿಕ ಅಂಕ”

Leave a Reply

Your email address will not be published. Required fields are marked *