ಸುದ್ದಿ9 ಕೈಕಂಬ; ಗುರುಪುರ ಕೈಕಂಬದಲ್ಲಿ ನೂತನವಾಗಿ ಆರಂಭಗೊಂಡ ಪ್ರಗತಿ ಸಹಕಾರಿ ಸಂಘ ನಿಯಮಿತ ಎಲ್ ನಂ 400 ಇದರ ಶಾಕೆಯು ಗುರುಪುರ ಕೈಕಂಬದ ವಿಜೇತ್ ಕಾಂಪ್ಲೆಕ್ಸ್ನಲ್ಲಿ ಮೇ.9ರಂದು ಶುಕ್ರವಾರ 9.15ಕ್ಕೆ ಉದ್ಘಾಟನೆಗೊಂಡಿತು. ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಪದ್ಮಿನಿ ಎಸ್ ಅಂಚನ್ ಉದ್ಘಾಟಿಸಿದರು. ಗುರುಪುರ ಕೈಕಂಬ ಪೊಂಪೈ ಚರ್ಚ್ ನ ವಂ.ಗ್ರೆಗರಿ ಸೆರಾವೊ ಅವರು ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಪ್ರಗತಿ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ರೋಯ್ ಕ್ಯಾಸ್ತಲೀನೊ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜೋನ್ಸನ್ ಲೋಬೊ, ಸೂರಲ್ಪಾಡಿ ಅಟೋಲಿಂಕ್ಸ್ ಮತ್ತು ಪೈನಾನ್ಸ್ ಮಾಲಕ ಅಬ್ದುಲ್ ಖಾದರ್,ಸಹಕಾರಿಯ ಉಪಾಧ್ಯಕ್ಷ ಜೋನ್ ಡಾಯಸ್, ಆಡಳಿತ ಅಧಿಕಾರಿ ನೆಸ್ಲಿನ್ ಜೇಮ್ಸ್ಡಿ” ಕೋಸ್ಟ ಮತ್ತು ನಿರ್ದೇಶಕರಾದ ವಿವಿಯನ್ ಡಿ” ಸೋಜ, ಜೊಸ್ಸಿ ಸಿಕ್ವೇರಾ, ಜೀವನ್ ದಾಸ್, ವಿಕ್ಟರ್ ವಾಸ್, ಡೊನಾಲ್ಡ್ ಬಂಟ್ವಾಳ್, ಲಿಲ್ಲಿ ಡಿ”ಸೋಜ ಮತ್ತಿತರರು ಉಪಸ್ಥಿತರಿದ್ದರು.
