ಸುದ್ದಿ9ಕೈಕಂಬ; ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ವೈಜ್ಞಾನಿಕ ಕಸ,ತ್ಯಾಜ್ಯ ನಿರ್ವಹಣೆ ಮತ್ತು ವಿಂಗಡಣೆಗೆ ಸ್ಥಳ ನಿಗದಿಯಾಗಬೇಕು ಹಾಗೂ ಘಟಕಗಳು ಪ್ರಾರಂಭವಾಗಬೇಕು.ಎಂದು ದಿಶಾ ಸಂಸ್ಥೆಯ ನಿರ್ಧೇಶಕರಾದ ಸಿಲ್ವೆಸ್ಟರ್ ಡಿ ಸೋಜ ಹೇಳಿದರು. ಕಸ ವಿಲೇವಾರಿಯಾಗದಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ. ಅಂಗವಿಕಲತೆ ಊನಗಳು ಏರ್ಪಡುತ್ತವೆ. ಈ ಎಲ್ಲಾ ಸಮಸ್ಯೆ ಮತ್ತು ತೊಂದರೆಗಳನ್ನು ನಿವಾರಿಸಲು ತ್ಯಾಜ್ಯ ವಿಲೇವಾರು ವ್ಯವಸ್ಥೆ ಮಾಡುವಂತೆ ಪಂಚಾಯತ್ಗಳನ್ನು ಒತ್ತಾಯಿಸಬೇಕು ಎಂದು ಅವರು ಕೊಳವೂರು ಸಣ್ಣಗುಡ್ಡೆ ಪುಷ್ಪರವರ ಮನೆ ವಠಾರದಲ್ಲಿ ನಡೆದ ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆಯ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.

8 vp  thyja gatakaನೇಸರ ಕೇಂದ್ರ ಸಮಿತಿ, ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟ ಮತ್ತು ದಿಶಾ ಟ್ರಸ್ಟ್ (ರಿ) ಕೈಕಂಬ ಇವರ ಜಂಟಿ ಆಶ್ರಯದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳವೂರು ನೇಸರ ಗ್ರಾಮ ಸಮಿತಿಯ ಉಪಾಧ್ಯಕ್ಷೆ ಲೀಲಾವತಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸ್ಪಂದನ ಒಕ್ಕೂಟದ ಕೋಶಾಕಾರಿ ಎಲ್ಸಿ ಡಿ ಸೋಜ ಮತ್ತು ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿ ವಾಲ್ಡರ್, ಕ್ಷೇತ್ರ ಸಂಯೋಜಕ ರುದೇಶ್, ಕಾರ್ಯಕರ್ತೆ ಸುಮಂಗಲ, ಗ್ರಾಮ ಸಮಿತಿಯ ಕೋಶಾಧಿಕಾರಿ ಕುಲುಸು, ಉಪಾಧ್ಯಕ್ಷರಾದ ಜಯಂತಿ ಮತ್ತು ವಿಶ್ವನಾಥ ಪೂಜಾರಿ ಸಣ್ಣಗುಡ್ಡೆ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *