ಬಜ್ಪೆಯಿಂದ ಪೊಳಲಿ-ಕೈಕಂಬ ಮಾರ್ಗವಾಗಿ ಬಿ.ಸಿ.ರೋಡ್ ಕಡೆ ಸಂಚರಿಸುವ ರಸ್ತೆಯ ಅಗಲ ತೀರಾ ಕಿರಿದಾಗಿದ್ದು, ವಾಹನ ಸಂಚಾರದ ವೇಳೆ ಜನರು ಮಾನಸಿಕ ಕಿರಿಕಿರಿ ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಹದಗೆಟ್ಟ ರಸ್ತೆಯಲ್ಲಿ ಎರಡು ವಾಹನಗಳು ಸಾವಕಾಶವಾಗಿ ಸಂಚರಿಸಲು ಸಾಕಷ್ಟು ಸ್ಥಳಾವಕಾಶ ಇಲ್ಲದಿರುವ ಕಾರಣ ಜನರು ಸರ್ಕಸ್ ಮಾಡುತ್ತಾ, ಸ್ಥಳೀಯ ಜನಪ್ರತಿನಿಧಿಗಳನ್ನು ಶಪಿಸಿಕೊಂಡೇ ದಾರಿ ಸವೆಸುತ್ತಿದ್ದಾರೆ.

bajpe 1

ಬಿ.ಸಿ.ರೋಡ್ ಕಡೆಯಿಂದ ಬಜ್ಪೆಗೆ ಬರುವಾಗ ಗುರುಪುರ-ಕೈಕಂಬದವರೆಗಿನ 18-20 ಕಿ,ಮೀ. ಉದ್ದದ ರಸ್ತೆಯ ಅಗಲ ತೀರಾ ಕಿರಿದಾಗಿದೆ. ಕೆಲಸಮಯದ ಹಿಂದೆ ಬಿ.ಸಿ.ರೋಡ್ನಿಂದ ಪಚ್ಚಿನಡ್ಕದವರೆಗೆ, ಗುರುಪುರ-ಕೈಕಂಬದಿಂದ ಅಡ್ಡೂರಿನವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದ್ದರೂ ರಸ್ತೆಯ ಉಳಿದ ಭಾಗವನ್ನು ಮಾತ್ರ ಅಭಿವೃದ್ಧಿಪಡಿಸದೆ ಜನರ ಸಮಸ್ಯೆಯನ್ನು ಕೇವಲವಾಗಿ ಕಾಣಲಾಗಿದೆ ಎಂದು ಆರೋಪಿಸುತ್ತಿದ್ದಾರೆ ನಾಗರಿಕರು.
ಇಲ್ಲಿ ರಸ್ತೆಯ ಅಗಲ ಕಿರಿದಾಗಿರುವುದು ಮಾತ್ರವಲ್ಲದೆ ಯೋಗ್ಯ ಚರಂಡಿ ವ್ಯವಸ್ಥೆಯೂ ಇಲ್ಲ. ಇದರಿಂಸದ ಮಳೆ ಜೋರಾಗಿ ಸುರಿದರೆ ನೀರು ರಸ್ತೆಯಲ್ಲೇ ಹರಿಯುತ್ತದೆ. ರಸ್ತೆಯ ಬದಿ ಆಳವಾದ ಗುಂಡಿಗಳಿದ್ದು, ಮಳೆಯ ನೀರು ತುಂಬಿಕೊಂಡಾಗ ವಾಹನ ಸವಾರರು ಸೈಡ್ ಕೊಡಲು ಹರಸಾಹಸ ಪಡುವಂತಾಗುತ್ತದೆ. ಪೊಳಲಿ, ಕಲ್ಪನೆ ಬಳಿ ಎರಡು ವಾಹನಗಳು ಎದುರು-ಬದುರಾಗಿ ಸಾಗಿದಾಗ ಇಂಥ ದೃಶ್ಯ ಸಾಮಾನ್ಯವಾಗಿದ್ದು, ನಿತ್ಯ ಪ್ರಯಾಣಿಕರಿಗೆ ನಿತ್ಯದ ಗೋಳಾಗಿದೆ.
ಈ ರಸ್ತೆಯಲ್ಲಿ ಈಗಾಗಲೇ ಕೆಲವು ರಸ್ತೆ ಅಪಘಾತಗಳು ಸಂಭವಿಸಿವೆ. ಅನೇಕ ಮಂದಿಯ ಪ್ರಾಣಹರಣವಾಗಿದೆ. ಇಷ್ಟೆಲ್ಲ ಆದರೂ ಇಲ್ಲಿ ರಸ್ತೆ ಬದಿಯ ಕಮರಿಗೆ ಯಾವುದೇ ತಡೆಗೋಡೆ ನಿಮರ್ಿಸಲಾಗಿಲ್ಲ ಮಾತ್ರವಲ್ಲದೆ, ವಾಹನ ಸವಾರರನ್ನು ಅಪಾಯದ ಕುರಿತು ಎಚ್ಚರಿಸುವ ಕ್ರಮಗಳನ್ನೂ ಕೈಗೊಳ್ಳಲಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಸೂಚನಾಫಲಕ ಕಳ್ಳರ ಪಾಲು:
ಈ ರಸ್ತೆಯಲ್ಲಿ ಬೀದಿದೀಪದ ವ್ಯವಸ್ಥೆಯಂತೂ ಇಲ್ಲ. ಇಲ್ಲಿ ಕೆಲವು ವರ್ಷಗಳ ಹಿಂದೆ ಅಂದಾಜು 30ಕ್ಕೂ ಹೆಚ್ಚು ಸೂಚನಾಫಲಕಗಳನ್ನು ಅಳವಡಿಸಲಾಗಿತ್ತು. ಆದರೆ ಅದರಲ್ಲಿ ಬಹುತೇಕ ಸೂಚನಾಫಲಕಗಳು ಕಳ್ಳರ ಪಾಲಾಗಿದ್ದು, ಗುಜರಿ ಅಂಗಡಿಯನ್ನು ಸೇರಿವೆ ಎನ್ನುತ್ತಾರೆ ಸ್ಥಳೀಯರು.
ಬಿ.ಸಿ.ರೋಡ್ ಹಾಗೂ ಬಜ್ಪೆ ನಡುವಿನ ಪ್ರಮುಖ ರಸ್ತೆ ಇದಾಗಿದೆ. ಇಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಬಸ್ ಸಂಚಾರವೂ ನಿಯಮಿತವಾಗಿದ್ದು, ವಾಹನ ಸವಾರರು ಸ್ವಲ್ಪವೇ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು, ರಸ್ತೆ ಪ್ರಾಧಿಕಾರ ಎಚ್ಚೆತ್ತುಕೊಂಡು ರಸ್ತೆಯನ್ನು ಶೀಘ್ರ ಅಭಿವೃದ್ಧಿಪಡಿಸಿದಲ್ಲಿ ಜನರು ನೆಮ್ಮದಿಯಿಂದ ಸಂಚರಿಸಬಹುದಾಗಿದೆ.

By suddi9

Leave a Reply

Your email address will not be published. Required fields are marked *