ಶೇ.100 ಪಡೆದ ಮಂಗಳೂರು ತಾಲೂಕಿನ 12 ಶಾಲೆಗಳ ಪೈಕಿ 6 ಶಾಲೆ ಬಜ್ಪೆ ಪಾಲು
ಬಜ್ಪೆ: ಈ ಬಾರಿ ನಡೆದ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಯಲ್ಲಿ ಬಜ್ಪೆ ವ್ಯಾಪ್ತಿಯಲ್ಲಿ 6 ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. ಈ ಪೈಕಿ ಮಂಗಳೂರಿನ ಶೇ.100 ಫಲಿತಾಂಶ ಪಡೆದ 12 ಶಾಲೆಗಳ ಪೈಕಿ 6 ಶಾಲೆಗಳು ಬಜ್ಪೆಯ ಪಾಲಾಗಿದ್ದು ದಾಖಲೆ ಎನಿಸಿದೆ.
ಶೇ.100 ಪಡೆದ ಶಾಲೆಗಳು:
ಅವರ್ ಲೇಡಿ ಆಫ್ ಸ್ಕೂಲ್ ಪಾಂಪೆ ಗುರುಪುರ ಕೈಕಂಬ,
ಪಾಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಶಾಲೆ ಮಳವೂರು ಬಜ್ಪೆ,
ರಾಜ್ ಅಕಾಡಮಿ ಇಂಗ್ಲೀಷ್ ಮಾಧ್ಯಮ ಶಾಲೆ ಗಂಜಿಮಠ,
ರೋಸಮಿಸ್ತಕಾ ಪ್ರೌಢ ಶಾಲೆ ಕಿನ್ನಿಕಂಬ್ಳ ಕೈಕಂಬ
ಅನ್ಸಾರ್ ಪ್ರೌಢ ಶಾಲೆ ಬಜ್ಪೆ
ಸಹರಾ ಇಂಗ್ಲೀಷ್ ಮಾಧ್ಯಮ ಶಾಲೆ ಅಡ್ಡೂರು
ಇದರಲ್ಲಿ ಪಾಪ್ಯುಲರ್ ಪಾಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಶಾಲೆ ಮಳವೂರು ಇದರಲ್ಲಿ 9 ಮಕ್ಕಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಅಲ್ಲದೆ ಅವರ್ ಲೇಡಿ ಆಫ್ ಸ್ಕೂಲ್ ಪಾಂಪೆ ಗುರುಪುರ ಕೈಕಂಬ ಇದರ ಆರು ಮಕ್ಕಳು ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಅಲ್ಲದೆ ಸರಕಾರಿ ಶಾಲೆಯ ಪೈಕಿ ಸಂಯುಕ್ತ ಸರಕಾರಿ ಪ್ರೌಢ ಶಾಲೆ ಮಳಳಿ ಶೇ.70 ಅಂಕ ಪಡೆದಿದ್ದು 5 ಮಕ್ಕಳು ಡಿಸ್ಟಿಂಕ್ಷನ್ ಹಾಗೂ ನೋಣಲ್ ಸರಕಾರಿ ಪ್ರೌಢ ಶಾಲೆಯ ಮೂರು ಮಕ್ಕಳು ಡಿಸ್ಟಿಂಕ್ಷನ್ ಪಡೆದಿರುವುದು ವಿಶೇಷ ಎನಿಸಿದೆ.
ಅಲ್ಲದೆ ಅವರ್ ಲೇಡಿ ಆಫ್ ಸ್ಕೂಲ್ ಪಾಂಪೆ ಗುರುಪುರ ಕೈಕಂಬ ಇದರಲ್ಲಿ ಸುಜೇಶ್ ಅಮೀನ್ ಎಂಬಾತ ಶೇ.93 ಪಡೆದಿದ್ದು ಬಜ್ಪೆಗೆ ಪ್ರಥಮ ಸ್ಥಾನಿಯಾಗಿದ್ದಾನೆ.
ಗ್ರಾಮೀಣ ವಿದ್ಯಾಥರ್ಿಯ ಮೇಲುಗೈ:
ಸಂಯುಕ್ತ ಪ್ರೌಢ ಶಾಲೆಯ ಮಳಲಿ ಕೋದರ್ೊಟ್ಟಿನ ರಕ್ಷಿತ್ ಎಂಬಾತ ಶೇ.92.5 ಫಲಿತಾಂಶ ಪಡೆದಿದ್ದು ಯಾವುದೇ ಟ್ಯೂಷನ್ ಇಲ್ಲದೆ ಗ್ರಾಮೀಣ ವಿದ್ಯಾಥರ್ಿಯೋರ್ವ ಇಷ್ಟು ಅಂಕ ಪಡೆದಿರುವುದು ಎಲ್ಲರ ಶ್ಲಾಘನೆಗೆ ಒಳಗಾಗಿದೆ. ಈತ ಬಜ್ಪೆಗೆ ಎರಡನೇ ಸ್ಥಾನಿಯಾಗಿದ್ದಾನೆ.

By suddi9

Leave a Reply

Your email address will not be published. Required fields are marked *