ಪೊಳಲಿ: ಜಗಜ್ಜನನಿ,ಪವಿತ್ರತಾ ಸ್ವರೂಪಿಣಿಯಾದ ಶ್ರೀಮಾತೆ ಶಾರದಾದೇವಿಯವರ 163ನೇ ಜನ್ಮದಿನ ಮತ್ತು ಕಲ್ಪತರು ದಿನಗಳನ್ನು 2016 ಜನವರಿ 1ರಂದು ಶುಕ್ರವಾರ ಪೊಳಲಿ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮದೂಂದಿಗೆ ಆಚರಿಸಲಾಗುವುದು.
ಬೆಳಗ್ಗೆ 6 ಗಂಟೆಗೆ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, 9.30 ರಿಂದ 11 ಗಂಟೆಯವರೆಗೆ ವಿಶೇಷ ಭಜನೆ, 11 ಗಂಟೆಗೆ ಹೋಮ, ಮಧ್ಯಾಹ್ನ 12.30 ಕ್ಕೆ ಆರತಿ, ನಂತರ ಅನ್ನ ಪರಸಾದ ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ಭರತನಾಟ್ಯ- ವಿದ್ವಾನ್ ಸುದರ್ಶನ್ ಎಂ ಎಲ್ ಭಟ್ ಇವರ ಶಿಷ್ಯೆ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಮತ್ತು ಶಿಷ್ಯರಿಂದ ಜರಗಲಿದೆ. ಎಂದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ತಿಳಿಸಿದ್ದಾರೆ.
