ಬೆಳ್ಳೂರು: ಬಂಟ್ವಾಳತಾಲೂಕಿನ ಬಡಗಬೆಳ್ಳೂರು ಗ್ರಾಮದ ಕಾವೇಶ್ವರ ದೇವಸ್ಥಾನದಲ್ಲಿ ಡಿ.26 ರಂದು ಶನಿವಾರ ಶ್ರೀ ಶನೀಶ್ವರ ಪೂಜೆ ಜರಗಿತು. ಕ್ಷೇತ್ರದ ತಂತ್ರಿಗಳದ ಉದಯ ಪಾಂಗಣ್ಣಾನವರ ನೇತೃತ್ವದಲ್ಲಿ ಶ್ರೀಪತಿ ಭಟ್ ಅವರು ಶನೀಶ್ವರ ಪೂಜೆ ನೆರವೇರಿಸಿದರು.
ದೇವಳದ ಅರ್ಚಕರಾದ ಪ್ರಕಾಶ್ ಭಟ್ ಹಾಗೂ ಉದ್ಯಮಿ ರಘು ಎಲ್ ಶೆಟ್ಟಿ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅದ್ಯಕ್ಷೆ ಜಯಂತಿ, ಮಾಜಿ ತಾಲೂಕು ಪಂ. ಸದಸ್ಯ ದೇವಪ್ಪ ಪೂಜಾರಿ ಮತ್ತು ಊರಿನ ಪ್ರಮುಕರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

