ಬಂಟ್ವಾಳ ತಾಲ್ಲೂಕಿನ ನಯನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ಘಟಕ ವತಿಯಿಂದ ಗುರುವಾರ ಸಂಜೆ ಆರಂಭಗೊಂಡ ವಾರ್ಷಿಕ ವಿಶೇಷ ಶಿಬಿರವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಮುಖ್ಯಶಿಕ್ಷಕ ಅಶೋಕ ಕುಮಾರ್ ಮತ್ತಿತರರು ಇದ್ದಾರೆ.
ನಯನಾಡು: ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ
ಎನ್‍ಎಸ್‍ಎಸ್‍ನಿಂದ ರಾಷ್ಟ್ರೀಯ ಪರಿಕಲ್ಪನೆ ಸಾಧ್ಯ: ಸಚಿವ ರೈ
ಬಂಟ್ವಾಳ:ದೇಶದಲ್ಲಿ ವಿವಿಧ ಭಾಷೆ ಮತ್ತು ಧರ್ಮಗಳ ನಡುವೆ ಪರಸ್ಪರ ಸಹಿಷ್ಣುತೆ ಮೂಡಿಸುವ ರಾಷ್ಟ್ರೀಯ ಪರಿಕಲ್ಪನೆ ಹೊಂದಿರುವ ಸಾಮರಸ್ಯದ ನೈಜ ಬದುಕಿನ ಪಾಠವನ್ನು ರಾಷ್ಟ್ರೀಯ ಸೇವಾ ಯೋಜನೆ ಮೂಲಕ ದೊರೆಯುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ತಾಲ್ಲೂಕಿನ ನಯನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ಘಟಕ ವತಿಯಿಂದ ಗುರುವಾರ ಸಂಜೆ ಆರಂಭಗೊಂಡ ಆರು ದಿನಗಳ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

25btl-Nayanadu
ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ .ಕೆ.ಗಣಪತಿ ಭಟ್ ಕುಳಮರ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯ ರಮೇಶ ಕುಡುಮೇರು, ಪಿಲಾತಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆ., ಮುಖ್ಯ ಶಿಕ್ಷಕ ಅಶೋಕ್ ಕುಮಾರ್ ಎ., ಪ್ರಾಂಶುಪಾಲ ಕುಮಾರ್ ಕೆ., ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಇನಾಸ್ ರೊಡ್ರಿಗಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದೇವಪ್ಪ ಶೆಟ್ಟಿ ,ಶಿಬಿರಾಧಿಕಾರಿ ಮಾಧವ ಎಂ.,ಸಹಶಿಬಿರಾಧಿಕಾರಿಗಳಾದ ಸುರೇಶ ಡಿ., ಚಂದ್ರಶೇಖರ, ಸುಜಿತ್, ಘಟಕ ನಾಯಕರಾದ ಜಯಪ್ರಕಾಶ್, ನವೀನ್ ಕುಮಾರ್, ಹಸ್ತ ಎಸ್., ರಮಾಶ್ರೀ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಪರಮೇಶ್ವರಿ ಸ್ವಾಗತಿಸಿ, ಸಹ ಶಿಬಿರಾಧಿಕಾರಿ ನಿಶ್ಚಿತ್ ಆರ್.ಶೆಟ್ಟಿ ವಂದಿಸಿದರು. ರವಿಶಂಕರ ಬಿ. ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *