ಮುಂಬಯಿ, ಡಿ.17: ಬೃಹನ್ಮುಂಬಯಿಯಲ್ಲಿ ಸೇವಾ ನಿರತ ಭಂಡಾರಿ ಸೇವಾ ಸಮಿತಿ (ರಿ.) ಇದರ ನೂತನ ಕಚೇರಿಯಲ್ಲಿ ಶ್ರೀ ಸತ್ಯ ನಾರಾಯಣ ಮಹಾ ಪೂಜೆ ಮತ್ತು ವಾಷರ್ಿಕೋತ್ಸವ ಸಮಾರಂಭವು ಇದೇ ಡಿ.27ನೇ ಆದಿತ್ಯವಾರ ಬೆಳಿಗ್ಗೆ 9.30 ಗಂಟೆೆಯಿಂದ ಮುಲುಂಡ್ ಪಶ್ಚಿಮದಲ್ಲಿನ ರೈಲ್ವೇ ಸ್ಟೇಷನ್ನ ಸಮೀಪದ ಝೇವೆರ್ ರೋಡ್ನಲ್ಲಿರುವ ಲಕ್ಷ್ಮೀ  ಸದನ್ ಕಟ್ಟಡದ ತಳಮಹಡಿಯಲ್ಲಿ ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಉಪಾಧ್ಯಕ್ಷರುಗಳಾದ ನ್ಯಾ| ಆರ್.ಎಂ ಭಂಡಾರಿ ಮತ್ತು ಸದಾನಂದ ಕೆ.ಭಂಡಾರಿ ತಿಳಿಸಿದ್ದಾರೆ.

4-Shivarama K. BHandary

1-Shivaram Shetty(A)

3-Suresh S. Bhandary

ಅಂದು ಮಧ್ಯಾಹ್ನ 2.00 ಗಂಟೆಗೆ ವಾರ್ಷಿಕೋತ್ಸವ ಸಮಾರಂಭವು ಮುಲುಂಡ್ ಪಶ್ಚಿಮದಲ್ಲಿನ ರೈಲ್ವೇ ಸ್ಟೇಷನ್ನ ಸನಿಹದ ಝೇವೆರ್ ರೋಡ್ನಲ್ಲಿನ ಸರಸ್ವತಿವಾಡಿ ಅಲ್ಲಿನ ಶ್ರೀಕುಚ್ ದೇಶಿಯ ಸರಸ್ವತ್ ಬ್ರಾಹ್ಮಿಣ್ ಮಹಾಸ್ಥಾನ ಟ್ರಸ್ಟ್ ಸಭಾಗೃಹದಲ್ಲಿ ನೇರವೇರಲಿದ್ದು, ಅಧ್ಯಕ್ಷ ನ್ಯಾ| ಶೇಖರ್ ಎಸ್. ಭಂಡಾರಿ ಚಾಲನೆ ನೀಡಲಿದ್ದು, ಬಳಿಕ ಸಮಾಜದ ಸದಸ್ಯರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಉಡುಪಿಯ ಜಯಶೀಲ ಭಂಡಾರಿ ಮತ್ತು ಬಳಗದವರಿಂದ `ತೆಲಿಕೆ, ನಲಿಕೆ ಬೊಕ್ಕ ಟೈಟಾನಿಕ್ ಅಜ್ಜಿ’ ಹಾಸ್ಯ ಪ್ರಹಸನ ಕಾರ್ಯಕ್ರಮ ನಡೆಯಲಿದೆ.

ಸಂಜೆ 4.00 ಗಂಟೆಯಿಂದ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಸಲಾಗುವುದು. ಮುಖ್ಯ ಅತಿಥಿಯಾಗಿ ಕಚ್ಚೂರು ಶ್ರೀನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಅಧ್ಯಕ್ಷ ಮತ್ತು ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ, ಗೌರವ ಅತಿಥಿಗಳಾಗಿ ಶಿವಾ’ಸ್ ಹೇರ್ ಡಿಸೈನರ್ಸ್  ಪ್ರೈವೇಟ್ ಲಿಮಿಟೆಡ್ನ ಕಾರ್ಯಾಧ್ಯಕ್ಷ ಶಿವರಾಮ್ ಕೆ.ಭಂಡಾರಿ, ಮುಲುಂಡ್ ನ  ಉದ್ಯಮಿ ಅಶೋಕ್ ಶಿವಣ್ಣ ಭಂಡಾರಿ, ಮಾಜಿ ಅಧ್ಯಕ್ಷರುಗಳಾದ ಮಾಧವ ಆರ್.ಭಂಡಾರಿ, ನ್ಯಾ| ಸುಂದರ್ ಜಿ.ಭಂಡಾರಿ, ಬಾಲಕೃಷ್ಣ ಪಿ.ಭಂಡಾರಿ, ನ್ಯಾ| ಬಾಲಕೃಷ್ಣ ಪುತ್ತೂರು ಪುಣೆ ಆಗಮಿಸಲಿದ್ದಾರೆ.

ಬಳಿಕ ಸಂಘದ ಸದಸ್ಯರಿಂದ `ಸಂಘದ ಕಲೇಕ್ಷನ್’ ತುಳು ನಾಟಕವನ್ನು ಪ್ರದರ್ಶಿಸಲಿದೆ ಎಂದು ಗೌ| ಕೋಶಾಧಿಕಾರಿ ರಮೇಶ್ ವಿ.ಭಂಡಾರಿ ತಿಳಿಸಿದ್ದಾರೆ. ಬೃಹನ್ಮುಂಬಯಿ, ಉಪನಗರಗಳು ಸೇರಿದಂತೆ ಮಹಾರಾಷ್ಟ್ರ ರಾಜ್ಯದಾದ್ಯಂತ ನೆಲೆಯಾಗಿರುವ ಭಂಡಾರಿ ಸಮಾಜದ ಸರ್ವ ಬಾಂಧವರು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ವಾರ್ಷಿಕೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸುವಂತೆ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ  ವಿಜಯ ಆರ್.ಭಂಡಾರಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಲಿತಾ ವಿ. ಭಂಡಾರಿ ಮತ್ತು ಸರ್ವಪದಾಧಿಕಾರಿಗಳು ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *