ಮುಂಬಯಿ: ಬಿಲ್ಲವರ ಅಸೋಸಿಯೇಶನ್, ಅಂಧೇರಿಯ ಸ್ಥಳೀಯ ಸಮಿತಿಯ ವತಿಯಿಂದ ಡಿ. 12ರಂದು ಸಮಿತಿಯ ಕಚೇರಿಯ ಹೊರ ಆವರಣದಲ್ಲಿ “ಗುಂಡೆದ ಗುಳಿಗೆ” ಯಕ್ಷಗಾನವನ್ನು ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರು ಪ್ರಸ್ತುತಪಡಿಸಿದರು.
ಈ ಮಧ್ಯೆ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವರ ಅಸೋಸಿಯೇಶನ್ ನ ಅಧ್ಯಕ್ಷ ನಿತ್ಯಾ ನಂದ ಡಿ. ಕೋಟ್ಯಾನ್ ವಹಿಸಿದ್ದು ಸ್ಥಳೀಯ ಸಮಿತಿಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ದಯಾನಂದ ಪೂಜಾರಿ, ಬಲರಾಜ್ ಕರ್ಕೇರ, ಪದ್ಮನಾಭ ಪೂಜಾರಿ, ಸಂಘಟಕ ಭಾಸ್ಕರ ಸುವರ್ಣ ಸಸಿಹಿತ್ತ್ಲು ಆಗಮಿಸಿದ್ದರು.
ಅಂಧೇರಿ ಸ್ಥಳೀಯ ಸಮಿತಿಯ ಕಾರ್ಯಾ ಧ್ಯಕ್ಷ ರವೀಂದ್ರ ಎಸ್. ಕೋಟ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಇತರ ಪದಾಧಿಕಾರಿಗಳು, ಸದಸ್ಯರುಗುಳು ಹಾಗೂ ಬಿಲ್ಲವರ ಅಸೋಸಿಯೇಶನ್ ಇತರ ಗಣ್ಯರು ಉಪಸ್ಥಿತರಿದ್ದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್



