ಮುಂಬಯಿ: ಡಿ. ರಂಗನಟ, ತುಳುವೆರೆ ಉಡಲ್ ಜೋಡುಕಲ್ಲು ತಂಡದ ರೂವಾರಿ ಸುರೇಶ್ ಶೆಟ್ಟಿ ಜೋಡುಕಲ್ಲು ಅವರ ವ್ಯವಸ್ಥಾಪಕತ್ವದಲ್ಲಿ ಕಳೆದ ಸೋಮವಾರ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಡಾ| ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಅಧ್ಯಕ್ಷ ಮತ್ತು ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ ಅಧ್ಯಕ್ಷತೆತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಲಾ ಸಂಘಟಕ, ಉದಯೋನ್ಮುಖ ಪತ್ರಕರ್ತ ಪ್ರಭಾಕರ್ ಬೆಳುವಾಯಿ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಲಾಜಗತ್ತು ಸಂಸ್ಥೆಯ ಸಂಸ್ಥಾಪಕ ತೋನ್ಸೆ ವಿಜಯಕುಮಾರ್ ಶೆಟ್ಟಿ, ಗೌರವ ಅತಿಥಿಗಳಾಗಿ ವಾಸ್ತು ಶಾಸ್ತ್ರಜ್ಞ ಪಂಡಿತ್ ನವೀನ್ಚಂದ್ರ ಸನಿಲ್, ಎಸ್.ಟಿ ವಿಜಯಕುಮಾರ್ ತಿಂಗಳಾಯ, ರಮೇಶ್ ರೈ, ಸಂಜೀವ ಎಸ್.ಶೆಟ್ಟಿ, ಉದಯ ಶೆಟ್ಟಿ ಪೇಜಾವರ, ಸಂತೋಷ್ ಶೆಟ್ಟಿ, ಪ್ರಸಾದ್ ಸಾಲ್ಯಾನ್, ಹರೀಶ್ ಉದ್ಯಾವರ್, ನಟರಾಜ್ ಕಾಂಚನ್, ಶ್ರದ್ಧಾ ಸಾಲ್ಯಾನ್, ಸುರೇಶ್ ಶೆಟ್ಟಿ ಕೇದಗೆ, ಪ್ರವೀಣ್ ಬಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ಪ್ರಭಾಕರ್ ಬೆಳುವಾಯಿ, ಶೋಧನಾ ಪ್ರಭಾಕರ್ (ಪತ್ನಿ) ಮತ್ತು ಸುಪುತ್ರ ಮಾ| . ಪಿ.ಬೆಳುವಾಯಿ ಅವರೊಂದಿಗೆ ಪರಿವಾರ ಸಹಿತ ಹಾಗೂ ತುಳುವೆರೆ ಉಡಲ್ ಜೋಡುಕಲ್ಲು ಕಲಾವಿದರ ಬಳಗದ ಲೇಖಕ, ರಂಗಕರ್ಮಿ ನವೀನ್ ಸಾಲ್ಯಾನ್ ಪಿತ್ರೋಡಿ ಅವರನ್ನೂ ಪೇಟ ತೊಡಿಸಿ, ಶಾಲು ಹೊದಿಸಿ,ಫಲಪುಷ್ಪ ನೆನಪಿನ ಕಾಣಿಕೆ, ಸನ್ಮಾನ ಪತ್ರದೊಂದಿಗೆ ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದ ಅಂಗವಾಗಿ ಮದ್ಮೆ ಒಂಜಿ ಅಂಡ್ಗೆತ್ತಾ ತುಳು ಹಾಸ್ಯಮಯ ನಾಟಕ ಪ್ರದರ್ಶನ ಪ್ರದರ್ಶಿಸಲ್ಪಟ್ಟಿತು.

