ಬಜ್ಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ಕಾರ್ಗೊ ಸಾಮರ್ಥ್ಯವನ್ನು ಅಭಿವದ್ಧಿಪಡಿಸುವ ನಿಟ್ಟಿನಲ್ಲಿ ಇದೀಗ ಕೋಲ್ಡ್ ಸ್ಟೋರೇಜ್ ಘಟಕ ಆರಂಭಿಸಿರುವುದರಿಂದ ಇಲ್ಲಿನ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚಿದಂತಾಗಿದೆ. ರಫ್ತು ಹಾಗೂ ಆಮದು ವ್ಯವಹಾರ ವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಮಾನ ನಿಲ್ದಾಣಗಳ ಪ್ರಾಧಿಕಾರದ ಹಿರಿಯ ವಿಚಕ್ಷಣಾ ಅಧಿಕಾರಿ ಉಕ್ಮಾ ಶ್ರೀವಾಸ್ತವ್ ಹೇಳಿದರು.
12
ಅವರು ಗುರುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ಕಾರ್ಗೊ ನಿಲ್ದಾಣದಲ್ಲಿ 5 ಮೆಟ್ರಿಕ್ ಟನ್ ಸಾಮರ್ಥ್ಯದ ಆತ್ಯಾಧುನಿಕ ಕೋಲ್ಡ್ ಸ್ಟೋರೇಜ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ವಿಮಾನ ನಿಲ್ದಾಣ ನಿರ್ದೇಶಕ ಜೆ.ಟಿ. ರಾಧಾಕಷ್ಣ, ನಾನಾ ನಿಲ್ದಾಣಗಳ ಮುಖ್ಯಸ್ಥರಾದ ಟಿ.ಎಫ್.ಮೂಸಾ, ಬಾಲಚಂದ್ರನ್, ಎಂ.ವಿ. ಪ್ರಾನ್ಸಿಸ್, ಅನ್ಬುರಸು, ಏರ್‌ಕಾರ್ಗೋ ವಿಭಾಗದ ಪ್ರಭಾರ ಅಧಿಕಾರಿ ವಿ.ಎಂ.ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು. ಇದೀಗ ಆತ್ಯಾಧುನಿಕ ಕೋಲ್ಡ್ ಸ್ಟೋರೇಜ್ ಘಟಕದ ಅನುಷ್ಠಾನದೊಂದಿಗೆ ಮಂಗಳೂರು ವಿಮಾನ ನಿಲ್ದಾಣದ ಏರ್‌ಕಾರ್ಗೊ ಮೂಲಕ ಯಾವುದೇ ರೀತಿಯ ವಸ್ತುಗಳ ರಫ್ತು ಹಾಗೂ ಆಮದು ವ್ಯವಹಾರ ಅವಕಾಶ ಹೆಚ್ಚಾಗಿದೆ.

By suddi9

Leave a Reply

Your email address will not be published. Required fields are marked *