ಮುಂಬಯಿ, ಡಿ.05: ಮಹಾನಗರದಲ್ಲಿನ ಹಿರಿಯ ಪತ್ರಕರ್ತ, ನ್ಯಾಯವಾದಿ ವಸಂತ ಎಸ್.ಕಲಕೋಟಿ ಅವರ ಅನುವಾದಿತ `ಟ್ರೊಜನ್ ಕುದುರೆ’ ಕೃತಿ ಇಂದಿಲ್ಲಿ ಶನಿವಾರ ಸಂಜೆ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಬಿಡುಗಡೆ ಗೊಂಡಿತು.

Vasant Kalkoti Book Release-C1

Vasant Kalkoti Book Release-1

Vasant Kalkoti Book Release-2

Vasant Kalkoti Book Release-3

Vasant Kalkoti Book Release-5

Vasant Kalkoti Book Release-6

Vasant Kalkoti Book Release-A1

Vasant Kalkoti Book Release-A2

Vasant Kalkoti Book Release-B1

Vasant Kalkoti Book Release-B2

ಅಭಿಜಿತ್ ಪ್ರಕಾಶನ ಮುಂಬಯಿ ಪ್ರಕಾಶಿತ `ಟ್ರೊಜನ್ ಕುದುರೆ’ ಕೃತಿಯನ್ನು ಕವಿ ಹಾಗೂ ಭಾರತ್ ಕೋ. ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ ಉಪ ಪ್ರಧಾನ ಪ್ರಬಂಧಕ ವಿವೇಕ್ ಎಸ್. ಶ್ಯಾನ್ಭಾಗ್ ಅವರು ಬಿಡುಗಡೆ ಗೊಳಿಸಿದರು. ಕರ್ನಾಟಕ ಸಂಘ ಮುಂಬಯಿ ಸಂಸ್ಥೆಯ ಸಹಯೋಗದಲ್ಲಿ ನಡೆಸಲ್ಪಟ್ಟ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ, ವಿಜ್ಞಾನಿ, ಗೋಕುಲ ಮಾಸಿಕದ ಸಂಪಾದಕ ಡಾ| ವ್ಯಾಸರಾಯ ನಿಂಜೂರು ವಹಿಸಿದ್ದರು.

60-70ರ ದಶಕದಲ್ಲಿ ಅನುವಾದಗೊಂಡ ಇಲ್ಲಿನ ಕಥೆಗಳು ಸಂವಾದದ ಮೂಲಕ ತೆರೆದು ಕೊಳ್ಳುತ್ತಾ ಓದುಗರಿಗೆ ಆಪ್ತವಾಗುತ್ತವೆ. ಅನುವಾದ ಒಂದು ರೀತಿಯ ನಾಜೂಕು ಕೆಲಸವಾಗಿದೆ. ಇಲ್ಲಿ ಭಾಷೆಯನ್ನು ದುಡಿಸಿಕೊಳ್ಳುವುದು ಮಹತ್ವದ್ದಾಗಿದೆ. ಅನುವಾದಕ್ಕೆ ಆತ್ಮ ಇರುವುದು ಭಾಷೆಯಲ್ಲಿ. ಇಲ್ಲಿ ಲೇಖಕ ಕಲಕೋಟಿ ಅವರು ಭಾಷೆ ದುಡಿಸಿಕೊಳ್ಳುವಲ್ಲಿ ಯಶಸ್ವೀ ಆಗಿದ್ದಾರೆ ಎಂದು ವಿವೇಕ್ ಶ್ಯಾನ್ಭಾಗ್ ಅಭಿಪ್ರಾಯ ಪಟ್ಟರು.

ವಸಂತ ಕಲ್ಕೋಟಿ ಅವರು ಓರ್ವ ಅತ್ಯಂತ ಸೃಜನಶೀಲ ವ್ಯಕ್ತಿತ್ವದ ಕತೆಗಾರ. ಅನುವಾದ ಯಾವೊತ್ತೂ ಭಾಷಾಂತರ ಆಗಬಾರದು. ಇಲ್ಲಿನ ಕಥೆಗಳೆಲ್ಲವೂ ಸೃಜನಶೀಲವಾಗಿ ಅನುವಾದ ಗೊಂಡಿವೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ವ್ಯಾಸರಾಯ ನಿಂಜೂರು ನುಡಿದರು. ಹಾಗೂ ಕೃತಿಕಾರ ವಸಂತ ಕಲಕೋಟಿ ಅವರನ್ನು ಶಾಲು ಹೊದೆಸಿ ಗೌರವಿಸಿದರು.

ಮರಾಠಿ, ಒರಿಯಾ ಹಾಗೂ ಹಿಂದಿ ಭಾಷೆಗಳಿಂದ ಅನುವಾದ ಗೊಂಡಿರುವ ಇಲ್ಲನ ಎಲ್ಲಾ ಕಥೆಗಳಲ್ಲಿ ವಸ್ತು, ಆಶಯ ಸರ್ವಕಾಲೀನವಾಗಿದೆ. ಈ ಕಥಾ ಸಂಕಲನವನ್ನು ಓದಿದಾಗ ಇಡೀ ಜಗದ ಸಾರ ಇಲ್ಲಿ ತುಂಬಿದೆಯೇ ಅನಿಸುತ್ತಿದೆ ಎಂದು ಕೃತಿ ಪರಿಚಯಿಸಿದ ಲೇಖಕಿ ಲತಾ ಸಂತೋಷ್ ಶೆಟ್ಟಿ ತಿಳಿಸಿದರು.

ನನ್ನ ಅನುಭವಗಳೇ ಕೃತಿಯ ಹಿಂದಿನ ಪ್ರೇರಣೆಯಾಗಿದೆ. ಇತರೇ ಭಾಷೆಗಳ ನೂರಾರು ಕಥೆಗಳನ್ನು ಓದಿ ಅವುಗಳನ್ನೆಲ್ಲಾ ಮನದಲ್ಲಿ ದುಡಿಸಿ ಅನುವಾದಿಸಿ ಈ ಕೃತಿಯನ್ನು ರಚಿಸಿದ್ದೇನೆ ಎಂದು ಕೃತಿಕಾರ ವಸಂತ ಕಲಕೋಟಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕರ್ನಾಟಕ ಸಂಘ ಮುಂಬಯಿ ಇದರ ಗೌರವ ಕೋಶಾಧಿಕಾರಿ ಎಂ.ಡಿ ರಾವ್, ಜೊತೆ ಕೋಶಾಧಿಕಾರಿ ಡಾ| ಈಶ್ವರ್ ಅಲೆವೂರು, ಉಮಾ ವಿ.ಕಲಕೋಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಡಾ| ಮಮತಾ ರಾವ್ ಮತ್ತು ಸುಶೀಲಾ ಎಸ್.ದೇವಾಡಿಗ ಅತಿಥಿಗಳನ್ನು ಪರಿಚಯಿಸಿದರು. ಕರ್ನಾಟಕ ಸಂಘದ ಗೌ| ಕಾರ್ಯದರ್ಶಿ  ಓಂದಾಸ್ ಕಣ್ಣಂಗಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಕರ್ನಾಟಕ ಸಂಘದ ಮಾಜಿ ಉಪಾಧ್ಯಕ್ಷ ಡಾ| ಭರತ್ ಕುಮಾರ್ ಪೊಲಿಪು, ಆರ್.ಬಿ ಹೆಬ್ಬಳ್ಳಿ, ಡಾ| ಎಸ್.ಕೆ ಭವಾನಿ, ಸಾ.ದಯಾ, ನ್ಯಾ| ಅಮಿತಾ ಎಸ್.ಭಾಗ್ವತ್, ಹೇಮಾ ಅಮೀನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಕಲಕೋಟಿ ಅವರನ್ನು ಅಭಿನಂದಿಸಿದರು.

ಚಿತ್ರ  ವರದಿ: ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *