ಮುಂಬಯಿ: ಕರ್ನಾಟಕ ಸಂಘ ಶಾರ್ಜಾ ಮತ್ತು ಹೃದಯವಾಹಿನಿ ಮಂಗಳೂರು ಸಂಸ್ಥೆಗಳ ಜಂಟಿ ಆಯೋಜಕತ್ವದಲ್ಲಿ 12ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವು ಇತ್ತೀಚಿಗೆ ಶಾರ್ಜಾದಲ್ಲಿ ನೇರವೇರಿಸಲ್ಪಟ್ಟಿತು.

ಸಮ್ಮೇಳನದಲ್ಲಿ ಸಾಹಿತ್ಯ ಗೋಷ್ಟಿ, ಕವಿಗೋಷ್ಠಿ, ಮಾಧ್ಯಮ ಗೋಷ್ಠಿ, ಅನಿವಾಸಿ ಕನ್ನಡಿಗರ ಗೋಷ್ಠಿ ಇತ್ಯಾದಿ ಕಾರ್ಯಕ್ರಮಗಳು ನೇರವೇರಿಸಲ್ಪಟ್ಟಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯರೂಪಕ ಸೇರಿದಂತೆ ಕಲೆಗಳ ಪ್ರದರ್ಶನಗಳನ್ನೂ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕರ್ನಾಟಕದಾದ್ಯಂತ ಅನೇಕ ಕಲಾವಿದ ತಂಡಗಳು ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ತೋರ್ಪಡಿಸಿ ಕನ್ನಡಾಂಭೆಯ ಮೆರಗನ್ನು ಮೆರೆದರು.
ಕವಿಗೋಷ್ಠಿಯಲ್ಲಿ ಸುಮಾರು 8 ಕವಿಗಳು ಭಾಗವಹಿಸಿದ್ದು, ಮುಂಬಯಿ ಮಹಾನಗರದಲ್ಲಿನ ಸಮಾಜ ಸೇವಕಿ, ಪ್ರಭಾ ಎನ್.ಸುವರ್ಣ ಅವರು ಭಾಗವಹಿಸಿ ತಮ್ಮ ಕವಿತೆಯನ್ನು ಪ್ರಸ್ತುತ ಪಡಿಸಿದರು. ದೇಶವಿದೇಶಗಳಲ್ಲಿ ಅನೇಕ ಕವಿ ಸಮ್ಮೇಳನಗಳಲ್ಲಿ ಭಾಗವಹಿಸಿದ್ದು ಪ್ರಭಾ ಸುವರ್ಣರು ಶಾಲಾ-ಕಾಲೇಜು ದಿನಗಳಿಂದಲೇ ಸಂಗೀತ ಹಾಗೂ ಕವಿತೆ ಬರೆಯುವ ಅಭಿರುಚಿ ಇಟ್ಟುಕೊಂಡಿದ್ದರು. ಬಹುಮುಖ ಪ್ರತಿಭೆಯುಳ್ಳವರಾಗಿದ್ದು, ಸುಮಾರು 100ಕ್ಕೂ ಹೆಚ್ಚು ತುಳು-ಕನ್ನಡ ಹಾಗೂ ಹಿಂದಿ ಪದ್ಯಗಳನ್ನು ನಿರರ್ಗಳವಾಗಿ ಹಾಡುತ್ತಾ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುವರು.
ಸಮ್ಮೇಳನದಲ್ಲಿ ಮುಂಬಯಿಯಲ್ಲಿನ ಹೆಸರಾಂತ ಸಮಾಜ ಸೇವಕ ದಂಪತಿಗಳಾದ ಎನ್.ಪಿ ಸುವರ್ಣ ಮತ್ತು ಪ್ರಭಾ ಎನ್ ಸುವರ್ಣ (ಮುಂಬಯಿ) ಅವರನ್ನು ಗೌರವಿಸಲಾಯಿತು. ಹೃದಯವಾಹಿನಿ ಬಳಗದ ಮುಖ್ಯಸ್ಥ ಮಂಜುನಾಥ ಸಾಗರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
