ಮುಂಬಯಿ: ಕನ್ನಡ ಅಭಿಮಾನಿಗಳೇ, ಕನ್ನಡ ಬಂಧುಗಳೇ, ಕನ್ನಡ ನಾಡಿನ ಮಣ್ಣಿನ ಮಕ್ಕಳೇ, ವಿದ್ಯಾ ಪ್ರಸಾರಕ ಮಂಡಳವು ಪ್ರತಿ ವರ್ಷದಂತೆ ಈ ಶೈಕ್ಷಣಿಕ ವರ್ಷವೂ ಸಹ ಸುವರ್ಣ ಮಹೋತ್ಸವ ಚಲಿತ ಫಲಕಕ್ಕಾಗಿ ಅಂತರ್ ಶಾಲಾ ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗಾಗಿ ಪ್ರತಿಭಾ ಸ್ಪರ್ಧೆಯನ್ನು ಇದೇ ಬರುವ ಡಿ.14ನೇ ಸೋಮವಾರ ಹಮ್ಮಿಕೊಳ್ಳಲಾಗಿದೆ.

ಆ ಪ್ರಯುಕ್ತ ಮುಂಬಯಿಯ ನಗರ-ಉಪನಗರದಲ್ಲಿರುವ ಸರ್ವ ಕನ್ನಡ ಮಾಧ್ಯಮದ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಈ ಸ್ಪರ್ಧಾ  ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರಂಭಕ್ಕೆ ಶೋಭೆ ತಂದು ಯಶಸ್ವಿಗೊಳಿಸಬೇಕೆಂದು ವಿದ್ಯಾ ಪ್ರಸಾರಕ ಮಂಡಳವು ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಂಡಿದೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಶಿಕ್ಷಕ ಪ್ರತಿನಿಧಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಕೊಡಲಾಗುವುದು. ಪ್ರಾಥಮಿಕ ವಿಭಾಗದಲ್ಲಿ ದಾಸರ ಪದ, ಚಿತ್ರಕಲಾ ಮತ್ತು ಛದ್ಮವೇಷ ಸ್ಪರ್ಧೆ  ಇದ್ದರೆ, ಹಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ವಿಭಾಗದಲ್ಲಿ ಭಾಷಣ ಸ್ಪರ್ಧೆ , ಭಾವಗೀತೆ, ಸಮೂಹಗೀತೆಗಳ ಸ್ಪರ್ಧೆ ಗಳನ್ನು ಆಯೋಜಿಸಲಾಗಿದೆ. ಮಹಾನಗರದಲ್ಲಿನ ಸರ್ವ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಪ್ರಕಾಶಮಯ ಗೊಳಿಸಿ ಬಹುಮಾನಗಳನ್ನು ಪಡೆಯುವಂತೆ ವಿದ್ಯಾ ಪ್ರಸಾರಕ ಮಂಡಳವು ಈ ಮೂಲಕ ವಿನಂತಿಸಿದೆ.

Mrs Nirupa Jorapur

Headmistress: VPM KHS & Junior College

Mithagar Road, Mulund (E), Mumbai 400081

 

By suddi9

Leave a Reply

Your email address will not be published. Required fields are marked *