ಮುಂಬಯಿ:ಡಿ.2: ತುಳು-ಕನ್ನಡಿಗರ ಸಂಸ್ಥಾಪನೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್ ಕೋ. ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 83ನೇ ಶಾಖೆಯು ಇಂದಿಲ್ಲಿ ಬುಧವಾರ ಪುಣೆ ಅಲ್ಲಿನ ಶಿವಾಜಿ ನಗರದ ಗೋಲೆ ರಸ್ತೆಯಲ್ಲಿರುವ ಬುಟ್ಟೆ ಪಾಟೇಲ್ ವರ್ಟಿ ಟಕ್ಸ್ ಟವರ್ನಲ್ಲಿ ಶುಭಾರಂಭ ಗೊಳಿಸಲ್ಪಟ್ಟಿತು. ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ರಿಬ್ಬನ್ ಬಿಡಿಸಿ 83ನೇ ನೂತನ ಶಾಖೆಯನ್ನು ಸೇವಾರ್ಪಣೆ ಗೊಳಿಸಿದರು. ಬಿಲ್ಲವ ಸಮಾಜ ಸೇವಾ ಸಂಘ ಪುಣೆ ಅಧ್ಯಕ್ಷ ಸದಾಶಿವ ಎಸ್.ಸಾಲ್ಯಾನ್ ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಶಾಖೆಗೆ ಚಾಲನೆಯನ್ನಿತ್ತರು. ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲ್ಯಾನ್ ಎಟಿಎಂ ಸೇವೆ, ಬ್ಯಾಂಕ್ನ ಹಿರಿಯ ನಿರ್ದೆಶಕಿ ಪುಷ್ಫಲತಾ ಎನ್.ಸಾಲ್ಯಾನ್ ಲಾಕರ್ ಸೇವೆಗಳಿಗೆ ಚಾಲನೆ ನೀಡಿ ಶಾಖೆಯ ಪ್ರಗತಿಗೆ ಶುಭಕೋರಿದರು.


ಗೌರವ್ವಾನಿತ ಅತಿಥಿಗಳಾಗಿ ಶಿವಸಾಗರ್ ಹೊಟೇಲು ಸಮೂಹದ ಪಾಂಡುರಂಗ ಆರ್.ಪೂಜಾರಿ, ಬಂಟ್ಸ್ ಸಂಘ ಪುಣೆ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲಬೆಟ್ಟು, ಪುಣೆ ಹೋಟೆಲು ಓನರ್ಸ್ ಅಸೋಶಿಯೇಶನ್ ಅಧ್ಯಕ್ಷ ಗಣೇಶ್ ಶೆಟ್ಟಿ, ಬಿಲ್ಲವ ಧುರೀಣರುಗಳಾದ ಸುಂದರ್ ಎಂ.ಪೂಜಾರಿ, ಶ್ಯಾಮ ಸುವರ್ಣ, ಸದಾನಂದ ಪೂಜಾರಿ, ಪುಣೆ ಸಹಾಯಕ ಪೋಲಿಸ್ ಆಯುಕ್ತ ಪ್ರಭಾಕರ್ ದಾಂಬ್ಳೆ, ಲ್ಯಾಂಡ್ಲಾದ ಸುಭಾಶ್ ರಾಮಚಂದ್ರ ಮಾಳಿ, ಉದ್ಯಮಿಗಳಾದ ನಗ್ರಿಗುತ್ತು ರೋಹಿತ್ ಶೆಟ್ಟಿ, ಸಂಜಯ್ ಜೋಶಿ, ಹರೀಶ್ ಮೂಡಬಿದ್ರೆ, ವಿಶ್ವನಾಥ್ ಪೂಜಾರಿ, ಅತುಲ್ ಜೆ.ಜೋಶಿ, ಧನಂಜಯ ಭಾರ್ಗವ, ಸೋಮನಾಥ ಶೆಟ್ಟಿ, ಡಾ| ತನುಜ ಸುವರ್ಣ, ನ್ಯಾ| ಪಂಕಜ ದೇಡಿಯಾ, ಸುಭಾಶ್ ಕಿದ್ವಾಯಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಭಾರತ್ ಬ್ಯಾಂಕ್ನ ಸರ್ವೋನ್ನತಿಗೆ ಶುಭಾರೈಸಿದರು.
ಹಣಕಾಸು ಸ್ಪಂದನೆಯಿಂದ ಜನರ ಬದುಕು ಹಸನಾಗುವುದು. ಇದಕ್ಕೆ ಸರಿಸಾಟಿಯಾಗಿ ಸದಾ ಜನಪರ ಸೇವೆಯಲ್ಲಿ ಕಾರ್ಯನಿರತ ಭಾರತ್ ಬ್ಯಾಂಕ್ ಸಾಂಸ್ಕೃತಿಕ ನಗರಿ ಪುಣೆಗೆ 3ನೇ ಶಾಖೆಯೊಂದಿಗೆ ಪಾದಾರ್ಪಣೆಗೈ ದ ಭಾರತ್ ಬ್ಯಾಂಕ್ ಯಶಸ್ಸಿನತ್ತ ಸಾಗಲಿ ಎಂದು ಸದಾಶಿವ ಸಾಲ್ಯಾನ್ ಶುಭವಾಗಲಿ ಎಂದರು.
ಭಾರತ್ ಬ್ಯಾಂಕ್ ಬಹುತೇಕ ತುಳುಕನ್ನಡಿಗ ಹೊಟೇಲು ಉದ್ಯಮಿಗಳನ್ನು ಬೆಳೆಸಿದ ಬ್ಯಾಂಕ್ ಆಗಿದೆ. ಇವರ ಹಣಕಾಸು ಸಹಾಯದಿಂದ ನಮ್ಮಲ್ಲಿನ ಸಾವಿರಾರು ಯುವಕರು ಉದ್ಯಮಿಗಳಾಗಿ ಭವಿಶ್ಯ ರೂಪಿಸಿದ್ದಾರೆ. ಆದುದರಿಂದಲೇ ಭಾರತ್ ಬ್ಯಾಂಕ್ ಎಂದರೆ ನಮ್ಮ ಬ್ಯಾಂಕ್ ಎನ್ನುವ ಅಭಿಮತ ತುಳುಕನ್ನಡಿಗರದ್ದಾಗಿದೆ. ಅನ್ಯ ಸಮಾಜದವರೂ ಈ ಬ್ಯಾಂಕ್ನ ಲಾಭ ಪಡೆದು ಉದ್ಯಮಶೀಲರಾಗಿದ್ದಾರೆ. ಅಂತೆಯೇ ಪುಣೆ ನಿವಾಸಿ ಹೊಟೇಲು ಉದ್ಯಮಿಗಳಿಗೆ ವಿಶೇಷ ಸ್ಕೀಮ್ಗಳನ್ನು ನೀಡಿ ಪ್ರೇರೆಪಿಸುವಂತಾಗಲಿ ಎಂದು ಗಣೇಶ್ ಶೆಟ್ಟಿ ಆಶಯ ವ್ಯಕ್ತಪಡಿಸಿದರು.
ಸಂಜಯ್ ಜೋಶಿ ಮಾತನಾಡಿ ಸ್ನೇಹತ್ವವನ್ನೇ ಮೌಲ್ಯವಾಗಿರಿಸಿ ಸೇವೆಯಲ್ಲಿ ನಿರತ ಈ ಬ್ಯಾಂಕ್ನ ಕಾರ್ಯವೈಖರಿ ವಾಣಿಜ್ಯ ವಲಯಕ್ಕೆ ಮಾದರಿ ಆಗಿದೆ. ಇನ್ನೂ ಇದೇ ರೀತಿ ಮುನ್ನಡೆದು ಜನಪರ ಸೇವೆಗೆ ಸ್ಪಂದಿಸಲಿ ಎಂದು ಅಭಿನಂದಿಸಿದರು.
ಪುಣ್ಯನಗರಿಯಲ್ಲಿ ಮತ್ತೆ ನೂತನ ಶಾಖೆಯೊಂದಿಗೆ ಸೇವಾರಂಭಿಸಿದ ಭಾರತ್ ಬ್ಯಾಂಕ್ ಜಯ ಸುವರ್ಣರ ದೂರದೃಷ್ಠಿತ್ವದ ಈ ಬ್ಯಾಂಕ್ ಸುವರ್ಣಮಯವಾಗಿ ಬೆಳೆಯಲಿ ಎಂದು ಸುಭಾಶ್ ಮಾಳಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಗ್ರಾಹಕರನ್ನು ಸಂತೃಪ್ತಿಗೊಳಿಸಿ ಸೇವೆಗೆ ತಕ್ಕಂತೆ ಪಥಸಂಸ್ಥೆಗಳು ಮುನ್ನಡೆದಾಗ ಎಲ್ಲರ ಅಭ್ಯುದಯ ಸಾಧ್ಯವಾಗುವುದು. ಗ್ರಾಹಕರ ಲಾಭವೇ ಬ್ಯಾಂಕ್ನ ಆಸ್ತಿಯಾಗಿದೆ. ಇದು ದ್ವಿಪಥವಾಗಿ ಸಾಗಿದಾಗ ಸಮಾಜದ ಉನ್ನತಿಗೆ ಪೂರಕವಾಗುವುದು ಎಸಿಪಿ ಪ್ರಭಾಕರ್ ದಾಂಬ್ಳೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಬಿಲ್ಲವ ಸಮಾಜ ಮತ್ತು ಭಾರತ್ ಬ್ಯಾಂಕ್ನ್ನು ಸಮರ್ಥವಾಗಿ ಮುನ್ನಡೆಸಿದ ಕೀರ್ತಿ ಜಯ ಸುವರ್ಣರಿಗೆ ಸಲ್ಲುತ್ತದೆ. ಅವರ ದಕ್ಷ ನೇತೃತ್ವದಲ್ಲಿ 150ಕ್ಕೂ ಅಧಿಕ ಶಾಖೆಗಳು ರಾಷ್ಟ್ರವ್ಯಾಪಿ ಸೇವಾರ್ಪಣೆ ಗೊಳ್ಳಲಿ ಎಂದು ಸುಂದರ್ ಪೂಜಾರಿ ಶುಭೇಚ್ಛ ಕೋರಿದರು.
ಶ್ಯಾಮ್ ಸುವರ್ಣ ಮಾತನಾಡಿ ಮೇರಾ ಭಾರತ್ ಮಹಾನ್ ಆಗಲು ಸರ್ವರಿಗೂ ಉದ್ಯೋಗವಕಾಶದ ಅಗತ್ಯವಿದೆ. ಇಂದು ಪುಣೆಯಂತಹ ಐತಿಹಾಸಿಕ ಜಾಗದಲ್ಲಿ 3ನೇ ಶಾಖೆಯೊಂದಿಗೆ ತೆರೆಯಲ್ಪಟ್ಟಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಭಾರತ್ ಬ್ಯಾಂಕ್ನ ನೂತನ ಶಾಖೆಯಿಂದ ಪುಣೆ ನಿವಾಸಿಗಳಿಗೆ ಅಚ್ಚೇ ದಿನ್ ಬಂದಂತಾಗಿದೆ. ಇದನ್ನು ಪೂರೈಸಲು ಭಾರತ್ ಬ್ಯಾಂಕ್ ಸಶಕ್ತವಾಗಿ ಬೆಳೆಯಲಿ ಎಂದರು.
ಕಾರ್ಯಕ್ರಮದಲ್ಲಿ ಪಾಂಡುರಂಗ ಆರ್.ಪೂಜಾರಿ ಮತ್ತು ಲತಾ ಪಾಂಡುರಂಗ್ ಸದಾಶಿವ ಸಾಲ್ಯಾನ್ ಮತ್ತು ಜಯಂತಿ ಸದಾಶಿವ್, ಸುಂದರ್ ಪೂಜಾರಿ ಮತ್ತು ಭಾರತಿ ಸುಂದರ್, ಶ್ಯಾಮ ಸುವರ್ಣ ಮತ್ತು ನೂತನ ಶ್ಯಾಮ ಸುವರ್ಣ ಹಾಗೂ ಸುಭಾಶ್ ಮಾಳಿ ಅವರನ್ನು ಜಯ ಸುವರ್ಣ ಅವರು ಶಾಲು ಹೊದಿಸಿ, ಫಲಪುಷ್ಪ ಗುಪ್ಚಗಳನ್ನಿ ತ್ತು ಅಭಿವಂದಿಸಿದರು.
ಸಮಾರಂಭದಲ್ಲಿ ಬ್ಯಾಂಕ್ನ ನಿರ್ದೇಶಕರುಗಳಾದ ಯು.ಎಸ್ ಪೂಜಾರಿ, ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ಆರ್.ಡಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ಜ್ಯೋತಿ ಕೆ. ಸುವರ್ಣ, ಮಾಜಿ ನಿರ್ದೇಶಕ ಎನ್.ಎಂ ಸನೀಲ್, ಬ್ಯಾಂಕ್ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಅನಿಲ್ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶ್ರೀಮತಿ ಶೋಭಾ ದಯಾನಂದ್ ಉಪಸ್ಥಿತರಿದ್ದು, ಶಾಖೆಯ ಮುಖ್ಯಸ್ಥ ಸುಧೀರ್ ಎಸ್.ಪೂಜಾರಿ ಮತ್ತು ಉದ್ಯೋಗಸ್ಥ ಮಂಡಳಿಯ ರಾಬಿನ್ ಎಸ್.ಕುಮಾರ್, ಧರ್ಮೇದ್ರ ಬಿ.ಸುವರ್ಣ, ಸೂರಾಜ್ ದೇವ್ಕರ್, ತುಷಾರ್ ನಿಖಮ್, ಅಭಿಜಿತ್ ಯು.ಬಿಲ್ಲವ, ಹರೀಶ್ ಎಸ್.ಪೂಜಾರಿ ಅವರಿಗೆ ಪುಷ್ಫಗುಪ್ಚವನ್ನೀಡಿ ಗೌರಸಿದರು.
ಬ್ಯಾಂಕ್ನ ಅಭಿವೃದ್ಧಿ ಇಲಾಖಾಧಿಕಾರಿಗಳಾದ ಸುನೀಲ್ ಗುಜರನ್, ವಿಜಯ ಪಾಲನ್ ಮತ್ತು ಸ್ಥಾನೀಯ ಶಾಖೆಗಳ ಮುಖ್ಯಸ್ಥರು ಮತ್ತು ಸ್ಥಳಿಯ ನೂತನ ಗ್ರಾಹಕರು, ನೂರಾರು ಹಿತೈಷಿಗಳು ಉಪಸ್ಥಿತರಿದ್ದು ಶಾಖೆಯ ಪ್ರಗತಿಗೆ ಶುಭಕೋರಿದರು.
ಪುರೋಹಿತ ಶ್ರೀ ಶೇಖರ ಶಾಂತಿ ಉಳ್ಳೂರು ವಾಸ್ತುಪೂಜೆ, ಗಣಹೋಮ, ದ್ವಾರಪೂಜೆ ನೆರವೇರಿಸಿದರು. ಗಂಗಾಧರಕಲ್ಲಾಡಿಮತ್ತು ರಾಕೇಶ್ ಶಾಂತಿ ತೀರ್ಥಪ್ರಸಾದ ವಿತರಿಸಿದರು. ಸುಧೀರ್ ಎಸ್.ಪೂಜಾರಿ ಮತ್ತು ಸಂಗೀತಾ ಸುಧೀರ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿ ಸರ್ವರಿಗೂ ಸುಖಾಗಮನ ಬಯಸಿದರು. ಉಪ ಪ್ರಧಾನ ಪ್ರಬಂಧಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ ಬ್ಯಾಂಕ್ನ ಸ್ಥಾಪನೆ ಮತ್ತು ಬ್ಯಾಂಕ್ನ ಸುದೀರ್ಘ ಸೇವೆಯ ಮಾಹಿತಿಯನ್ನಿತ್ತು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕ ಪ್ರಬಂಧಕ ರಾಬಿನ್ ಎಸ್.ಕುಮಾರ್ ಧನ್ಯವದಿಸಿದರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್


















