ಮುಂಬಯಿ. ಖ, 02: ಕಾಸರಗೋಡುವಿನ ಮಳ್ಹರ್ ಧಾರ್ಮಿಕ ಮತ್ತು ಲೌಕಿಕ ವಿದ್ಯಾ ಸಂಸ್ಥೆಯ ಮುಂಬಯಿ ಸಮಿತಿ ಮಾಸ ನಡೆಸಿ ಬರುವ ಸ್ವಲಾತ್ ಮಜ್ಲಿಸಿನ 2ನೇ ವಾರ್ಷಿಕ ಹಾಗೂ ಸಯ್ಯದ್ ಉಮರುಲ್ ಫಾರೂಖ್ ಅಲ್-ಬುಖಾರಿ ಪೋಸೊಟ್ ತಂಜಳ್ ಅನುಸ್ಮರಣೆ ಡಿ, 5 ಶನಿವಾರ ಸಂಜೆ 5ಗಂಟಗೆ ದಾದರ್ ಪೂರ್ವದ ಲತ್ವೀಫಿಯ ಸುನ್ನಿ ಮಸೀದಿ ವಠಾರದಲ್ಲಿ ನಡೆಯಲಿದೆ.

ಮಳ್ಹರ್ ಸಯ್ಯದ್ ಅಹ್ಮದ್ ಜಲಾಲುದ್ದೀನ್ ಅಲ್-ಬುಖಾರಿ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಕಡಲೊಂಡಿ ಸಯ್ಯದ್ ಅಬ್ದುರಹ್ಮಾನ್ ಶಹೀರ್ ಅಲ್-ಬುಖಾರಿ ಉದ್ಘಾಟಿಸಲ್ಲಿದ್ದಾರೆ. ಕಡಲುಂಡಿ ಸಯ್ಯದ್ ಶಿಹಾಬುದ್ದೀನ್ ಅಲ್-ಬುಖಾರಿ ಮುಖ್ಯ ಪ್ರಭಾಷಣ ಗೈಯಲ್ಲಿದ್ದಾರೆ.
ಕರ್ನಾಟಕ ಸರಕಾರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್, ಖ್ಯಾತ ನಾತ್ ಶರೀಫ್ ಗಾಯಕ ಮುಈನುದ್ದೀನ್ ಬೆಂಗಳೂರು, ಮುಂಬೈ ಖಾಝಿ ಮುಫ್ತಿ ಮಹ್ಮೂದ್ ಅಖ್ತರ್ ಅಲ್-ಖಾದಿರಿ, ಹಸರ್ ಮುಸ್ಲಿಯರ್ ಮುಂಬ್ರ, ಮುಫ್ತಿ ರಫೀಖ್ ಸಅದಿ, ಮುಫ್ತಿ ಶರೀಫ್ ನಿಝಾಮಿ, ಸ್ಥಳಿಯ ಖತೀಬ್ ಮೊಹಮ್ಮದ್ ಜಲಾಲುದ್ದೀನ್ ಜಿಸ್ತಿ, ಮೊಹಮ್ಮದ್ ಇರ್ಫಾನ್ ಜಿಸ್ತಿ, ಬೋಂಬೆ ಕೇರಳ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎಂ ಕೆ ಉರುಮಿ, ಕೊಡರ್ವ ಸೆಂಟರ್ ಕಾರ್ಯದರ್ಶಿ ಟಿ.ವಿ.ಕೆ ಅಬ್ದುಲ್ಲ, ಹಸನ್ ಕುಂಞ ಮಳ್ಹರ್
ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಿದ್ದೀಖ್ ಮೌಲಾನ ಪತ್ರಿಕ ಪ್ರಕಟಣೆಗೆ ತಿಳಿಸಿದ್ದಾರೆ.

