ಬಂಟ್ವಾಳ; ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡುವ ಮೊದಲ ಶಾಲೆ ಅಂಗನವಾಡಿ. ಅದು ಸುಂದರವಾಗಿದ್ದರೆ ಅಲ್ಲಿ ನೀಡುವ ಶಿಕ್ಷಣವೂ ಸುಂದರಮಯವಾಗಿರುತ್ತದೆ. ಹೌದು ಇಂತಹಾ ಒಂದು ಮಾದರಿ ಅಂಗನವಾಡಿಯ ಯಶೋಗಾಥೆ ಇಲ್ಲಿದೆ. ಶಂಭೂರು ಗ್ರಾಮದ ಈ ಅಂಗನವಾಡಿ ತಾಲೂಕಿನಲ್ಲಿಯೇ ಅತ್ಯುತ್ತಮ ಅಂಗನವಾಡಿಯಾಗಿ ಮೂಡಿ ಬರುತ್ತಿದೆ. ಮಕ್ಕಳನ್ನು ಆಕರ್ಷಿಸುವ ಎಲ್ಲಾ ಬಗೆಯ ಸೌಕರ್ಯಗಳು ಇಲ್ಲಿದ್ದು ಇದೀಗ ಎಲ್ಲರ ಗಮನಸೆಳೆಯುತ್ತಿದೆ. ಇಲ್ಲಿರುವ ಸುಸಜ್ಜಿತ ಅಡುಗೆ ಕೋಣೆ ಮಕ್ಕಳಿಗೆ ಉತ್ತಮ ಆರೋಗ್ಯದ ಆರೈಕೆ ನೀಡಿದರೆ, ಇಲ್ಲಿರುವ ಗೋಡೆಯ ಚಿತ್ರಗಳು ಮಕ್ಕಳಿಗೆ ಬುದ್ದಿಮಾಥನ್ನು ಭೋಧಿಸುತ್ತಿದೆ. ಜೊತೆಗೆ ಇಲ್ಲಿನ ಆಟ-ಪಾಠಗಳು ಮಕ್ಕಳಿಗೆ ಮಾನಸಿಕ ಸ್ಥೈರ್ಯವನ್ನು ತುಂಬಿಕೊಡುತ್ತಿದೆ.
3 (1)

5 (1)

7 (1)

8 (1)

1 (1)
ಶಂಭೂರು ಗ್ರಾಮ ತಾಲೂಕಿನ ತೀರಾ ಗ್ರಾಮೀಣ ಪ್ರದೇಶದಲ್ಲಿದೆ. ಆದರೆ ಸ್ಥಳೀಯ ಊರವರ ಸಹಕಾರದೊಂದಿಗೆ ಇಲ್ಲಿನ ಅಂಗನವಾಡಿಯಲ್ಲಿ ದೊಡ್ಡ ಕ್ರಾಂತಿಯೇ ನಡೆದಿದ್ದು, ಪ್ರತಿಯೊಂದೂ ಕೂಡ ಅಚ್ಚುಕಟ್ಟಾಗಿ ಸಂಯೋಜನೆ ಗೊಂಡಿದೆ. ತಾ.ಪಂ. ಹಾಗೂ ಜಿ.ಪಂ. ಅನುದಾನದ ನೆರವಿನಿಂದ ಆರ್ಸಿಸಿ ಕಟ್ಟಡ ರಚನೆಯಾಗಿದ್ದರೆ, ಅಂಘಳಕ್ಕೆ ಇಂಟರ್ ಲಾಕ್ ಅಳವಡಿಸಿ ಮಕ್ಕಳ ಆಟಕ್ಕೆ ಅತ್ಯುತ್ತಮ ವ್ಯವಸ್ಥೆಯಿದೆ. ಅಂಗನವಾಡಿಯ 4 ಸ್ತ್ರೀ ಶಕ್ತಿ ಗುಂಪುಗಳಲ್ಲಿ 80 ಮಂದಿ ಮಹಿಳಾ ಸದಸ್ಯೆಯರಿದ್ದು ಎಲ್ಲರೂ ಅತ್ಯುತ್ತಮ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೆಲ್ಲರ ಮೀಟಿಂಗ್ ಗೆ ಸುಂದರವಾದ ವರಾಂಡದ ವ್ಯವಸ್ಥೆ ಇಲ್ಲಿದ್ದು, ಟೈಲ್ಸ್ ನ ನೆಲಹಾಸು ತಂಪನೆಯ ಅನುಭವ ನೀಡುತ್ತದೆ. ಗೋಡೆಯ ಮೇಲೆ ಪ್ರತೀ ವಾರದ ಬೋಧನೆಯ ವಿಚಾರಗಳು ಚಿತ್ರ ರೂಪದಲ್ಲಿದ್ದರೆ, ಕೇಂದ್ರದಲ್ಲಿ ಮಕ್ಕಳ ಪೋಷಣೆಗೆ ಸಿಗುವ ಆಹಾರ ವೈವಿಧ್ಯಗಳ ದೊಡ್ಡ ಪಟ್ಟಿಯೇ ಗೋಡೆಗಳ ಮೇಲೆ ಅನಾವರಣ ಗೊಂಡಿದೆ. ಮಕ್ಕಳಿಗೆ ಪೌಷ್ಠಿಕ ಆಹಾರ ಸಿದ್ದಗೊಳ್ಳುವ ಅಡುಗೆ ಕೋಣೆ ನೋಡುವಾಘಲೇ ಮನದುಂಬಿ ಬರುತ್ತದೆ.ಸ್ತ್ರೀ ಶಕ್ತಿ ಗುಂಪು, ಸಮುದಾಯ ಹಾಗೂ ದಾನಿಗಳ ನೆರವಿನಿಂದ ಶಂಭೂರು ಅಂಗನವಾಡಿ ಮಾದರಿಯಾಗಿ ರೂಪಗೊಂಡಿದ್ದು, ಸಮವಸ್ತ್ರದಲ್ಲಿರುವ ಮಕ್ಕಳು ವಿಶೇಷ ಗಮನ ಸೆಳೆಯುತ್ತಾರೆ. ಕ್ರಿಯಾಶೀಲ ಅಂಗನವಾಡಿ ಕಾರ್ಯಕರ್ತೆ ಪ್ರೇಮ ಹಾಗೂ ಸಹಾಯಕಿ ಸುನೀತಾ ಅವರ ಎಲ್ಲಾ ಸದಾಶಯದ ಹಂಬಲಗಳಿಗೆ ಬಾಲವಿಕಾಸ ಸಮಿತಿಯ ಅಧ್ಯಕ್ಷ ಉದಯ ಅವರು ಬೆಂಬಲ ನೀಡಿ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಒಟ್ಟಿನಲ್ಲಿ ಮಾದರಿಯಾಗಿ ರೂಪುಗೊಂಡಿರುವ ಶಂಭೂರು ಅಂಗನವಾಡಿಯ ಬಗ್ಗೆ ಮೇಲ್ವಿಚಾರಕಿ ಶಾಲಿನಿಯವರು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ

By suddi9

Leave a Reply

Your email address will not be published. Required fields are marked *