- ಕೈಕಂಬ: ಮಂಗಳೂರು ಗಂಜಿಮಠ ಗ್ರಾಮದ ಗುರುಪುರ ಕೈಕಂಬದ ಮಾರ್ಕೆಟ್ ಬಳಿ ಇದ್ದ ಕ್ಯಾಂಟಿನ್ ಗೆ ಬೆಂಕಿ ಹಚ್ಚಿದ ಘಟನೆ ಭಾನುವಾರ ತಡ ರಾತ್ರಿ ಸಂಭವಿಸಿದೆ. ಕ್ಯಾಂಟೀನ್ ಶಂಕರ ಸ್ವಾಮಿ ಎಂಬಾತನಿಗೆ ಸೇರಿದೆ ಎಂದು ತಿಳಿದು ಬಂದಿದೆ. ಎಂದಿನಂತೆ ಶಂಕರ ಸ್ವಾಮಿ ಕ್ಯಾಂಟಿನ್ ವ್ಯಾಪರ ಮುಗಿಸಿ ರಾತ್ರಿ ಬೀಗ ಹಾಕಿ ಮನೆಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ಕ್ಯಾಂಟೀನ್ ಇದ್ದ ಜಾಗ ಗಂಜಿಮಠ ಗ್ರಾಮಪಂಚಾಯತ್ಗೆ ಒಳಪಟ್ಟಿದೆ ತಗಡು ಸೀಟ್ ಹಾಕಿಕೊಂಡು ಸಣ್ಣ ವ್ಯಾಪಾರ ಆರಂಬಿಸಿದ ಶಂಕರ ಸ್ವಾಮಿ ಬಂದ ವ್ಯಾಪಾರದಲ್ಲಿಯೇ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಇದೀಗ ಅದಕ್ಕು ದುಷ್ಕರ್ಮಿಗಳು ಗಲಾಟೆ ಎಬ್ಬಿಸಲು ಬೆಂಕಿ ಹಚ್ಚಿ ಅದರ ಲಾಭವನ್ನು ಪಡೆಯಲು ಈ ಕ್ರತ್ಯ ಎಸಗಿರಬುದೆಂದು ಅಂದಾಜಿಸಲಾಗಿದೆ . ಬೆಂಕಿಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಕ್ಯಾಂಟೀನ್ ನಲ್ಲಿದ್ದ ಸಿಲಿಂಡರ್ ಗ್ಯಾಸ್ ಗೆ ಬೆಂಕಿ ತಗಲಿದ್ದರೆ ಭಾರಿ ಅನಾಹುತ ಸಂಬವಿಸುತ್ತಿತ್ತು. ಇನ್ನಿತರ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿ ನಷ್ಟ ಸಂಬವಿಸಿದೆ, ಬಜಪೆ ಪೋಲಿಸರು ಸ್ಥಳಕ್ಕಾಗಮಿಸಿ ಪರೀಶೀಲನೆ ನಡೆಸಿದ್ದಾರೆ.

