ಸ್ವಸ್ಥತೆಯ ರಹಸ್ಯವನ್ನು ತಿಳಿದು ಬಾಳಿರಿ: ವಿ.ಆರ್ ಕೋಟ್ಯಾನ್
ಮುಂಬಯಿ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ ವಿಲೇಪಾರ್ಲೆ ಪಶ್ಚಿಮದ ಶಾಖೆಯಲ್ಲಿ ಇಂದಿಲ್ಲಿ ಧಮಾರ್ಥ ಆರೋಗ್ಯ ತಪಾಸನಾ ಶಿಬಿರ ಆಯೋಜಿಸಲಾಗಿದ್ದು ಭಾರತ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ಮಾಜಿ ಕಾರ್ಯಾಧ್ಯಕ್ಷ, ಹಾಲಿ ನಿರ್ದೇಶಕ ವಿ.ಆರ್ ಕೋಟ್ಯಾನ್ ಶಿಬಿರವನ್ನು ಉದ್ಘಾಟಿಸಿದರು. ಆರೋಗ್ಯಕ್ಕೆ ಪುರಾತನ ಔಷಧಿಗಳೇ ಮಾದರಿ ಆಗಿದೆ. ತಿನ್ನುವ ಆಹಾರ ಮತ್ತು ಶ್ರಮದ ಸತ್ಯಾಸತ್ಯತೆ ಅರಿತು ಸ್ವಸ್ಥತೆಯ ರಹಸ್ಯವನ್ನು ತಿಳಿದು ಬಾಳಿದಾಗಲೇ ಆರೋಗ್ಯಭಾಗ್ಯ ಫಲಿಸುವುದು. ಆರೋಗ್ಯವೊಂದಿದ್ದರೆ ಬದುಕು ಭಾಗ್ಯದಾಯಕವಾಗುತ್ತದೆ ಎಂದು ವಿ.ಆರ್‍ಕೋಟ್ಯಾನ್ ತಿಳಿಸಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಬಿ.ಕೆ ಸಂಜೀವ, ದಮಯಂತಿ ಬಿ.ಸುವರ್ಣ, ಭೋಜ ಸಿ.ಸಾಲ್ಯಾನ್, ರೋಹಿತ್ ಕಾಮತ್, ನಾಗೇಶ್ ಸುವರ್ಣ, ಬ್ಯಾಂಕ್‍ನ ಉಪ ಪ್ರಧಾನ ಪ್ರಬಂಧಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ, ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಮೇಶ್ ಟಿ. ಪೂಜಾರಿ, ಗ್ರಾಹಕರುಗಳಾದ ರವೀಂದ್ರ ಬುಸಾ, ಅಶೋಕ್ ಕೋಟ್ಯಾನ್, ಎರಿಕ್ ಲೂಯಿಸ್, ವಿಪುಲ್ ಚೋಕ್ಸಿ, ಬ್ಯಾಂಕ್‍ನ ಸಿಬ್ಬಂದಿಗಳಾದ ಲತೀಕಾ ತೋನ್ಸೆ, ಉಮಾ ಆರ್.ಕಾಮತ್, ಸುಧಾಕರ್ ಪೂಜಾರಿ ಮತ್ತು ರಾಖೇಶ್ ಎಂ.ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಸ್ಪೆಶಿಯಲಿಟಿ ರೆನ್‍ಬ್ಯಾಕ್ಸಿ ಲಿಮಿತೆಡ್ (ಎಸ್‍ಆರ್‍ಎಲ್) ಸಂಸ್ಥೆಯ ಡಾ| ಮಹ್ಮದ್ ಫಥೆವುದ್ಧೀನ್ ಮತ್ತು ಡಾ| ಪೂಜಾ ಸಳುಂಕೆಶಿಬಿರವನ್ನು ನೆರವೇರಿಸಿದ್ದು, ಶಾಖಾ ಮುಖ್ಯಸ್ಥ ಸಂಪತ್ ಎ.ಪೂಜಾರಿ ಸ್ವಾಗತಿಸಿದರು. ಸಹಾಯಕ ವ್ಯವಸ್ಥಾಪಕಿ ಸರೋಜಾ ವಿ.ಸುವರ್ಣ ಧನ್ಯವದಿಸಿದರು.



