ಕೈಕಂಬ: ಪೊಂಪೈ ದೇವಾಲಯದ ವಾರ್ಷಿಕೋತ್ಸವವು (ಸಾಂತ್‍ಮರಿ) ನ. 11ರಂದು ಬುಧವಾರದಂದು ಪೊಂಪೈ ಚರ್ಚ್ ನಲ್ಲಿ ನಡೆಯಿತು. ವಾರ್ಷಿಕೋತ್ಸವದ ದಿವ್ಯ ಪ್ರಾರ್ಥನೆಯನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕರಾದ ರೆ.ಫಾ ಪ್ಯಾಟ್ರಿಕ್ ರೊಡ್ರಿಗಸ್ ನೆರವೇರಿಸಿದರು.

ಪೇಜಾವರ ವಲಯದ ವಿಗಾರ್‍ವಾರ್ ರೆ.ಫಾ ರೆಮೀಜಿಯಸ್ ಆರನ್ನ ಹಾಗೂ ವಲಯದ ಇತರ ಧರ್ಮಗುರುಗಳು ಉಪಸ್ಥಿತರಿದ್ದರು.
ಬಲಿ ಪೂಜೆಯ ನಂತರ ಪಿ.ಯು.ಸಿ ಮತ್ತು ವೈ.ಸಿ.ಎಸ್ ಇದರ ಸದಸ್ಯರಿಂದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಾಗೂ ಭಕ್ತರು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.


















