ಮುಂಬಯಿ: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಸಂಸ್ಥೆಯು ಬೋರಿವಿಲಿ ಸಂಸದ ಗೋಪಾಲ ಸಿ.ಶೆಟ್ಟಿ ಅವರ ನೇತೃತ್ವದಲ್ಲಿ ರೈಲ್ವೇ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಗೈದು ಮಾತುಕತೆ ನಡೆಸಿತು.
ಕಳೆದ ಸೋಮವಾರ ಬೊರಿವಲಿ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದ ಸಚಿವ ಪ್ರಭು ಅವರನ್ನು ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಸಂಘದ ಸ್ಥಾಪಕ ಗೌರವಾಧ್ಯಕ್ಷ ವಿರಾರ್ ಶಂಕರ್ ಬಿ.ಶೆಟ್ಟಿ ನೇತೃತ್ವದ ನಿಯೋಗವು ಉಪನಗರ ಪಶ್ಚಿಮ ರೈಲ್ವೇಯ ಯಾತ್ರಿಗಳ ಅನುಕೂಲಕ್ಕಾಗಿ ವಸಾಯಿ ರೋಡ್ ಜಂಕ್ಷನ್ ರೈಲ್ವೇ ಸ್ಟೇಶನ್‍ನಿಂದ ಈ ರೈಲು ಸೇವೆ ಕೊಂಕಣ ಮಾರ್ಗವಾಗಿ ಆರಂಭಿಸಲಾದ ವಸಾಯಿ ರೋಡ್-ಮಂಗಳೂರು ಗಣಪತಿ ಉತ್ಸವ ವಿಶೇಷ ರೈಲನ್ನು ಖಾಯಂ ಗೊಳಿಸುವಂತೆ ಸಚಿವರನ್ನು ಒತ್ತಾಯಿಸಿತು.
ಸಂಘದ ಅಧ್ಯಕ್ಷ ಶಿಮಂತೂರು ಚಂದ್ರಹಾಸ ಶೆಟ್ಟಿ ಅವರ ನಿರಂತರ ಹೋರಾಟ ಬರವಣಿಗೆ, ಮನವಿಗಳ ಬಗ್ಗೆ ಶಂಕರ್ ಶೆಟ್ಟಿ ಸಚಿವರಲ್ಲಿ ತಿಳಿಸಿದ್ದು ಮುಂಬಯಿ ಪಶ್ಚಿಮದ ನೆಲೆಯಾದ ಜನತೆಯ ಅನುಕೂಲಕ್ಕಾಗಿ ರೈಲ್ವೇ ಸಚಿವಾಲಯವು ಕ್ರಮಕೈಗೊಳ್ಳುವಂತೆ ತಿಳಿಸಿತು.
ಈ ಸಂದರ್ಭದಲ್ಲಿ ಸಂಸದ ಗೋಪಾಲ ಸಿ.ಶೆಟ್ಟಿ, ದ್ದು ಸಂಘದ ಸಲಹಾಗಾರ ಎರ್ಮಾಳ್ ಹರೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶೀಲಾ ಶೆಟ್ಟಿ, ಉಪಾಧ್ಯಕ್ಷ ಪ್ರೇಮನಾಥ ಕೋಟ್ಯಾನ್, ಜೊತೆ ಕಾರ್ಯದರ್ಶಿ ರಜಿತ್ ಸುವರ್ಣ, ಸುರೇಶ್ ಗಂಧರ್ವ ಮತ್ತಿತರರು ಉಪಸ್ಥಿತರಿದ್ದರು.
