ಜಿಲ್ಲೆಯಲ್ಲಿ ಕಬಡ್ಡಿಗೆ   ಪ್ರೋತ್ಸಾಹದ ಕೊರತೆಯಿಲ್ಲ : ರವಿ ಶೆಟ್ಟಿ
ಮುಂಬಯಿ : ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಬಂಟ್ವಾಳ ಇದರ 32ನೇ ವಾರ್ಷಿಕ ತುಳುನಾಡಶ್ರೀ ಪ್ರಶಸ್ತಿ ಕಬ್ಬಡಿ ಪಂದ್ಯಾಟವು ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಶನ್ ಸಹಭಾಗಿತ್ವ ಹಾಗೂ ಸ್ವಸ್ತಿಕ್ ಫ್ರೆಂಡ್ಸ್‍ನ ಸ್ಥಾಪಕಾಧ್ಯಕ್ಷ ಹಾಗೂ ದ.ಕ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಕಳೆದ ಭಾನುವಾರ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಸಲ್ಪಟ್ಟಿತು. ಪ್ರೊ ಕಬಡ್ಡಿ ಲೀಗ್ ಟೂರ್ನಿ ಪಂದ್ಯಾಟದಲ್ಲಿ ಚಾಂಪಿಯಾನ್ ವಿಜೇತ ಯು ಮುಂಬಯಿ ತಂಡದ ಕನ್ನಡಿಗ ಕೋಚ್, ಅಂತಾರಾಷ್ಟ್ರೀಯ ಕಬಡ್ಡಿ ತರಬೇತುದಾರ ರವಿ ಶೆಟ್ಟಿ ಪಂದ್ಯಾಟವನ್ನು ಉದ್ಘಾಟಿಸಿದರು.

Punjalkatte Kabaddi-A1

Punjalkatte Kabaddi-A2ರವಿ ಶೆಟ್ಟಿ ಮಾತನಾಡಿ ದ.ಕ. ಜಿಲ್ಲೆಯಲ್ಲಿ ಕಬಡ್ಡಿ ಆಟಕ್ಕೆ  ಪ್ರೋತ್ಸಾಹದ ಕೊರತೆಯಿಲ್ಲ. ಆದರೆ ಪರಿಣಿತ ಆಟಗಾರರ ಕೊರತೆ ಇದೆ .ಜಿಲ್ಲೆಯಲ್ಲಿ ಕಬಡ್ಡಿ ಪಂದ್ಯಗಳು ಹೆಚ್ಚು ನಡೆಯುತ್ತಿದ್ದರೂ ಪ್ರತಿಭಾನ್ವಿತ ಆಟಗಾರರ ಗುರುತಿಸುವಿಕೆಯಲ್ಲಿ ಹಿನ್ನಡೆ ಉಂಟಾಗಿದೆ. ಕಬಡ್ಡಿ ಆಟಗಾರರು ಹೆಚ್ಚು ಆಟದಲ್ಲಿ ತೊಡಗಿಸಿಕೊಳ್ಳ ಬೇಕು.ಅದರ ಪ್ರತಿಫಲವಾಗಿ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದ ಅವರು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಕಬಡ್ಡಿಯಲ್ಲಿ ಜಿಲ್ಲೆಯ ಪ್ರತಿಭೆಗಳು ಹೆಚ್ಚು ಕಾಣುವಂತಾಗಲಿ ಎಂದರು.

ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಕ್ರೀಡೆಯಾಗಿಯೇ ಉಳಿದಿದ್ದ ಕಬಡ್ಡಿಗೆ ಇಂದು ರಾಷ್ಟ್ರೀಯ ಸ್ಥಾನಮಾನ ದೊರಕಿದ್ದು ಉತ್ತುಂಗ ಮಟ್ಟಕ್ಕೇರಿದೆ.ಕಬಡ್ಡಿ ಕ್ರೀಡಾಪಟುಗಳನ್ನು ಗುರುತಿಸಿ  ಪ್ರೋತ್ಸಾಹಿಸುವ ಸ್ಥಿತಿ ನಿರ್ಮಾಣ ಗೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಅವರು ಕ್ರೀಡಾಜ್ಯೋತಿಯನ್ನು ಬೆಳಗಿಸಿದರು.ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ಉಡುಪ, ಬಂಟ್ವಾಳ ತಾ| ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಸುಧಾಕರ ಸಾಲಿಯಾನ್, ಇರ್ವತ್ತೂರು ಗ್ರಾ.ಪಂ. ಅಧ್ಯಕ್ಷೆ ಸುಜಾತ ಪ್ರಕಾಶ್, ಪಿಲಾತಬೆಟ್ಟು ವ್ಯ.ಸೇ.ಸ.ಬ್ಯಾಂಕ್ ಅಧ್ಯಕ್ಷ ಸುಂದರ ನಾಯ್ಕ, ಪಿಲಾತಬೆಟ್ಟು ಗ್ರಾ.ಪಂ.ಉಪಾಧ್ಯಕ್ಷೆ ಲಕ್ಷ್ಮಿ ಜೆ. ಬಂಗೇರ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಸೀತಾರಾಮ ಹೆಗ್ಡೆ ಹೊಸಮನೆ , ವಗ್ಗ ಉದ್ಯಮಿ ಸ್ಟಾ ್ಯನಿ ಲೋಬೊ,ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ಉದ್ಯಮಿ ಓಂ ಪ್ರಸಾದ್,ಮುಂಡಾಜೆ ಗ್ರಾ.ಪಂ.ಸದಸ್ಯ ಅಬ್ದುಲ್ ರಜಾಕ್, ವಾಮದಪದವು ವ್ಯ.ಸೇ.ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ,ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಮಾಜಿ ಅಧ್ಯಕ್ಷ ಬೂಬ ಸಪಲ್ಯ,ಮಡಂತ್ಯಾರು ಗ್ರಾ.ಪಂ. ಮಾಜಿ ಸದಸ್ಯ ರಾಜಶೇಖರ ಶೆಟ್ಟಿ ,ಕಾವಳಮೂಡೂರು ಗ್ರಾ.ಪಂ.ಸದಸ್ಯ ಮೋಹನ ಆಚಾರ್ಯ,ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ,ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಬಡ್ಡಿ ಪಂದ್ಯಾಟದ ಸಂಚಾಲಕ ರಾಜೇಶ್ ಪುಳಿಮಜಲು,ಸಹ ಸಂಚಾಲಕ ಸಂತೋಷ ಮೂರ್ಜೆ, ರತ್ನಾಕರ ಪಿ.ಎಂ, ಮುಂಬಯಿ ಪತ್ರಕರ್ತ ರೋನ್ಸ್ ಬಂಟ್ವಾಳ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಬಡ್ಡಿ ಕೋಚ್ ರವೀಶ್ ಶೆಟ್ಟಿ ಮತ್ತು ಯು ಮುಂಬಾ   ಪ್ರೊ ಕಬಡ್ಡಿ ಆಟಗಾರರಾದ ಶಬೀರ್ ಬಾಪು ಮತ್ತು ಜೀವ ಕುಮಾರ್, ಕ್ರೀಡಾಪಟು ಸತೀಶ್ ಕುಮಾರ್ ಶೆಟ್ಟಿ ವೇಣೂರು ಮತ್ತು ನಿವೃತ್ತ ಕಂದಾಯ ನಿರೀಕ್ಷಕ ಸಾಧು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ದಿವಾಕರ ದಾಸ್ ಕಾವಳಕಟ್ಟೆ ಅವರನ್ನು ಸಮ್ಮಾನಿಸಲಾಯಿತು. ಜಿಲ್ಲಾ ಕಬಡ್ಡಿ ತೀರ್ಪುಗಾರರ ಸಮಿತಿ ಸಂಚಾಲಕ ಫ್ರಾನ್ಸಿಸ್ ವಿ.ವಿ.ಅವರು ಅಭಿನಂದನೆಗೈದರು.

ತುಳುನಾಡಶ್ರೀ ಪ್ರಶಸ್ತಿ ಕಬಡ್ಡಿ ಪಂದ್ಯಾಟದ ಸಮಾರೋಪದಲ್ಲಿ ಸಂಸ್ಕಾರಭಾರತಿ ಲೋಕ ಕಲಾ ವಿಭಾಗ ಸಂಚಾಲಕ ದಯಾನಂದ ಜಿ. ಕತ್ತಲ್‍ಸಾರ್, ದ.ಕ.ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ, ಮುಂಬಯಿಯ ಉದ್ಯಮಿಗಳಾದ ಸುರೇಶ್ ಶೆಟ್ಟಿ ನಂದಿಲ, ವಸಂತ ಶೆಟ್ಟಿ ಅರ್ಕೆದೊಟ್ಟು, ಬೆಂಗಳೂರು ಉದ್ಯಮಿ ವಸಂತ ಹೆಗ್ಡೆ, ನ್ಯಾಯವಾದಿ ನವನೀತ ಹಿಂಗಾಣಿ, ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಜಿಲ್ಲಾ ಕ್ರೀಡಾ ಸಂಸ್ಥೆಯ ಕಾರ್ಯದರ್ಶಿ ಪುರುಷೋತ್ತಮ,ರಾಷ್ಟ್ರೀಯ ತೀರ್ಪುಗಾರ ಕೃಷ್ಣಪ್ಪ,ಜಿ.ಪಂ.ಸದಸ್ಯೆ ತುಳಸಿ ಹಾರಬೆ, ತಾ.ಪಂ.ಸದಸ್ಯ ವಿನಯ ನಾಯಕ್,ಉದ್ಯಮಿ ಸಂಪತ್ ಸುವರ್ಣ, ಜಿಲ್ಲಾ ಕಬಡ್ಡಿ ತೀರ್ಪುಗಾರರ ಸಮಿತಿ ಸಂಚಾಲಕ ಫ್ರಾನ್ಸಿಸ್ ವಿ.ವಿ., ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಬಡ್ಡಿ ಪಂದ್ಯಾಟದ ಸಂಚಾಲಕ ರಾಜೇಶ್ ಪುಳಿಮಜಲು, ಸಹ ಸಂಚಾಲಕ ಸಂತೋಷ ಮೂರ್ಜೆ ಉಪಸ್ಥಿತರಿದ್ದು, ಬಹುಮಾನ ವಿತರಿಸಿದರು.

ಫ್ರೆಂಡ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ.ಅವರು ಸ್ವಾಗತಿಸಿದರು.ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಸ್ತಾವಿಸಿದರು. ಭರತ್‍ರಾಜ್ ಜೈನ್ ಮತ್ತು ಶೌಕತ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಯರಾಜ್ ಅತ್ತಾಜೆ ವಂದಿಸಿದರು.

 

By suddi9

Leave a Reply

Your email address will not be published. Required fields are marked *