ಮುಂಬಯಿ: ಕೆನಾರಾಯ್ಟ್‍ಸ್ ಯೂತ್ ಅಸೊಸಿಯೇಶನ್ ಮುಂಬಯಿ ಫಿಲ್ಮ್ಸ್ ಪ್ರೈವೇಟ್ಲಿ ಮಿಟೆಡ್ (ಕ್ಯಾಮ್) ಇದರ ಬ್ಯಾನರ್‍ನಲ್ಲಿ ಮೂಡಿಬರುತ್ತಿರುವ ಹೊಚ್ಚ ಹೊಸ ಕೊಂಕಣಿ ಚಲನಚಿತ್ರ `ನಶೀಬಾಚೊ ಖೇಳ್’ ಮುಹೂರ್ತ ಕಾರ್ಯಕ್ರಮ ಕಳೆದ ಶನಿವಾರ ಸಾಸ್ತಾನ ಪಾಂಡೇಶ್ವರ ಸಮೀಪ ಮೂಡಹಡು ಕುದ್ರುವಿನ ರಿಚಾರ್ಡ್ ಡಿ’ಸೋಜಾ ಅವರ ನಿವಾಸದಲ್ಲಿನಡೆಸಲ್ಪಟ್ಟಿತು. ಬಾರ್ಕೂರು ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ವೆಲೇರಿಯನ್ ಮೆಂಡೋನ್ಸಾ ಚಿತ್ರೀಕರಣಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಮರಾಠಿ, ಬೋಜ್‍ಪುರಿ, ಬಾಲಿವುಡ್ ಚಿತ್ರಗಳನ್ನು ನಿರ್ಮಿಸಿದ ಮುಂಬಯಿ ಉದ್ಯಮಿ ಹೆರಾಲ್ಡ್ (ಹ್ಯಾರಿ) ಫೆರ್ನಾಂಡಿಸ್ ನಿರ್ದೇಶನ ಮಾಡಲಿರುವ ಈ ಕೊಂಕಣಿ ಚಿತ್ರವು ಹೆಸರಾಂತ ಕೊಂಕಣಿ ರಂಗಪ್ರವೀಣ ಹೆನ್ರಿ ಡಿ’ಸಿಲ್ವಾಸುರತ್ಕಲ್ (ಮುಂಬಯಿ) ಅವರಚಿತ್ರಕಥೆಯಲ್ಲಿ ಮೂಡಿದ್ದು ಡಿ’ಸಿಲ್ವಾ ಅವರ ನಿರ್ಮಾಪಕತ್ವದಲ್ಲೇ ನಿರ್ಮಾಣಗೊಳ್ಳಲಿದೆ.

ಬಹುಮುಖ ಪ್ರತಿಭೆ ಎಲ್ಟೆನ್ ಮಸ್ಕರ್ಹೇನಸ್ ನಾಯಕ ನಟನಾಗಿ ಅಭಿನಯಿಸಲಿದ್ದು, ಹೆಸರಾಂತ ಗಾಯಕಿ ಎಸ್ಟ್‍ರ್ ನೊರೋನ್ಹಾ ನಾಯಕಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ತಾರಾಗಣದಲ್ಲಿ ರಂಜಿತ್ ಲೂವಿಸ್, ಪಾಂಡೇಶ್ವರ ಅಲ್ವಿನ್ ಅಂದ್ರಾದೆ, ಸುಜಾತಾ ಲೂವಿಸ್, ಅರುಣ್‍ರಾಜ್ ಮತ್ತಿತರ ಕಲಾವಿದರು ಅಭಿನಯಿಸಲಿದ್ದಾರೆ. ಕೊಂಕಣಿ ಚಿತ್ರರಂಗದಲ್ಲಿ ಕನ್ನಡ, ಹಿಂದಿ ಚಿತ್ರಗಳಷ್ಟು ಅದ್ದೂರಿ ಚಲನಚಿತ್ರಗಳು ತೆರೆಕಂಡಿಲ್ಲ. ಈ ಕೊರಗನ್ನು ದೂರ ಮಾಡುವ ಸಲುವಾಗಿ ಖ್ಯಾತ ನಟ-ನಟಿಯರು ಹಾಗೂ ನಿರ್ದೇಶಕರ ತಂಡದೊಂದಿಗೆ ಈ ಸದಭಿರುಚಿಯ, ಅದ್ದೂರಿ ಕೊಂಕಣಿ ಚಿತ್ರ ನಿರ್ಮಿಸಲಾಗುತ್ತಿದೆ. ಎಲ್ಲರೂ ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರ ಇದಾಗಿದ್ದು, ಪ್ರೀತಿ ಹಾಗೂ ನಿಗೂಢತೆ, ಗ್ರಾಮೀಣ ಬದುಕಿನ ಕಷ್ಟಸುಖಗಳ ಕತೆಯಾಗಿದೆ ಎಂದು ನಿರ್ಮಾಪಕ ಹೆನ್ರಿ ಡಿ’ಸಿಲ್ವಾ ಸುರತ್ಕಲ್ ತಿಳಿಸಿದ್ದಾರೆ. ಬಾರ್ಕೂರು, ಸಾಸ್ತಾನ ಮುಂತಾದ ಕರಾವಳಿಯ ಪ್ರದೇಶಗಳು ಹಾಗೂ ಮುಂಬಯಿ ನಗರದಲ್ಲಿ ಚಿತ್ರೀಕರಣ ಗೊಳಿಸಲಾಗುತ್ತಿದ್ದು, ಶೀಘ್ರವೇ ತೆರೆಕಾಣಲಿದೆ. ಮುಂಬಯಿಯಲ್ಲಿ 1975ರಲ್ಲಿ ಕೆನಾರಾಯ್ಟ್‍ಸ್ ಯೂತ್ ಅಸೊಸಿಯೇಶನ್ ಸಂಸ್ಥೆಯನ್ನು ಹುಟ್ಟುಹಾಕಿ ಆ ಮೂಲಕ `ಕಾಜ್ಹಾರ ಉಪ್ರಾಂತ್’ ಕೊಂಕಣಿಯ ಇತಿಹಾಸದಲ್ಲೇ ಪ್ರಪ್ರಥಮ ವಿಡಿಯೋ ಫಿಲ್ಮ್ ನಿರ್ಮಿಸಿದ ಕೀರ್ತಿಯನ್ನೊತ್ತ ಹೆನ್ರಿ ಡಿ’ಸಿಲ್ವಾಸುರತ್ಕಲ್ ಅವರು ಎಂಟು ವಿವಿಧ ಸ್ವರಚಿತ ನಾಟಕಗಳನ್ನು ನಿರ್ಮಿಸಿ ರಾಷ್ಟ್ರದಾದ್ಯಂತ ನೂರಾರು ಪ್ರದರ್ಶನಗಳನ್ನೀರುವರು. ತನ್ನ ಸಾರಥ್ಯದಲ್ಲಿ ಸಂಗೀತ ಯುಗದ ಗಾನಸುಧೆ (ಪ್ರಸ್ತುತ ಸ್ವರ್ಗಸ್ಥ) ಕೊಂಕಣ್ ಕೊಗುಳ್ ವಿಲ್ಫಿ ರೆಬಿಂಬಸ್ ಅವರ `ವಿಲ್ಫಿ ರೆಬಿಂಬಸ್ ಕೊಂಕಣಿ ನೈಟ್’ ಸಂಗೀತ ರಸಮಂಜರಿ ಕಾರ್ಯಕ್ರಮಗಳ ಯಶಸ್ವೀ 150ಕ್ಕೂ ಪ್ರದರ್ಶನಗಳನ್ನು ಕಲಾಭಿಮಾನಿಗಳಿಗೆ ಅವಕಾಶ ಕಲ್ಪಿಸಿರುವರು. ಡಿ’ಸಿಲ್ವಾರ ನಿರ್ಮಾಪಕತ್ವದಲ್ಲಿ ಕೆನಾರಾಯ್ಟ್‍ಸ್ ಯೂತ್ ಅಸೊಸಿಯೇಶನ್ ಮುಂಬಯಿ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್‍ನಡಿ `ನಶೀಬಾಚೊ ಖೇಳ್’ ಕೊಂಕಣಿ ಚಲನಚಿತ್ರ ಡಿಸೆಂಬರ್ ಮಧ್ಯಾಂತರದಲ್ಲಿ ಮುಂಬಯಿಯಾದ್ಯಂತ ಚಿತ್ರೀಕರಣಗೊಳ್ಳಲಿದೆ ಎಂದು ಚಿತ್ರನಿರ್ಮಾಣ ಸಂಸ್ಥೆ ತಿಳಿಸಿದೆ.


