ಬಂಟ್ವಾಳ: 2013-14ನೇ ಸಾಲಿ ನ13ನೇ ಹಣಕಾಸಿನ ಯೋಜನೆಯಡಿ 86 ಸಾವಿರ ಜಿ.ಪಂ. ಅನುದಾನದಲ್ಲಿ ಮತ್ತು ಅಮ್ಟಾಡಿ ಗ್ರಾಪಂನ 25 ರೂ ಅನುದಾನದಲ್ಲಿ ಅಮ್ಟಾಡಿ ಗ್ರಾಮದ ಮುಂಡೆಗುರಿ ಎಸ್.ಸಿ ಕಾಲೋನಿಯ ಬಾವಿ ನಿರ್ಮಾಣಕ್ಕೆ ಗುದ್ದಲಿಪೂಜೆಯನ್ನು ಜಿ.ಪಂ. ಸದಸ್ಯೆ ನಳಿನಿ ಬಿ. ಶೆಟ್ಟಿ ನೆರವೇರಿಸಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ಬಂಟ್ವಾಳ ಬಿಜೆಪಿ ಅಧ್ಯಕ್ಷ ಜಿ.ಆನಂದ, ಮಾಜಿ ಅಧ್ಯಕ್ಷೆ ಬಬಿತಾ ಕೋಟ್ಯಾನ್, ಅಮ್ಟಾಡಿ ಗ್ರಾ. ಸಮಿತಿ ಅಧ್ಯಕ್ಷ ಜಯ ಕೋಟ್ಯಾನ್, ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಯೋಗೀಶ್ ಸುವರ್ಣ, ಮೋಹಿನಿ, ರತಿ ಭಂಡಾರಿ ಮತ್ತು ಪ್ರಮುಖರಾದ ಸದಾನಂದ ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ವಿಜಯ, ಶ್ರೀನಿವಾಸ ಭಂಡಾರಿ, ನರಸಿಂಹ ಹೊಳ್ಳ, ಪ್ರಮೋದ್ ಮಾರ್ಲ ಮತ್ತಿತರರು ಉಪಸ್ಥಿತರಿದ್ದರು.
