ಮಂಗಳೂರು: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿದರ್ೆಶಕರ ಚುನಾವಣೆಯ ಪ್ರಕ್ರಿಯೆಗಳ ಗೊಂದಲಗಳನ್ನು ಕೂಡಲೇ ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಬಿಜೆಪಿ ಜಿಲ್ಲೆಯ ವತಿಯಿಂದ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಿಗೆ ದಿನಾಂಕ 30.04.2014 ರಂದು ಮನವಿ ಸಲ್ಲಿಸಲಾಯಿತು.

bjp manavi
ಈ ಹಿಂದಿನ ಸಹಕಾರಿ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಮಹಾಸಭೆಯ ನೋಟೀಸಿನ ಜೊತೆಯಲ್ಲಿಯೆ ಸ್ಪಧರ್ಿಸುವ ಅಭ್ಯಥರ್ಿಗಳ ಅಜರ್ಿಯ ನಮೂನೆಯನ್ನು ಕೂಡಾ ಕಳುಹಿಸಲಾಗುತ್ತಿತ್ತು. ಇದೀಗ ದಿನಾಂಕ 25.5.2014 ರಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಚುನಾವಣೆಯು ನಡೆಯಲಿದ್ದು, ಸಂಘದ ಪ್ರತಿನಿಧಿ ನಿಯೋಜಿಸುವ ಅಜರ್ಿಯ ನಮೂನೆಯನ್ನು ಬ್ಯಾಂಕ್ ನಿಗದಿಪಡಿಸಿದ ಸ್ಥಳದಲ್ಲಿ ಕೇವಲ ಎರಡು ದಿನಗಳು ಮಾತ್ರ ನೀಡುವವರಿದ್ದು ಅದನ್ನು ಪಡೆದುಕೊಳ್ಳಲು ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಹೋಗಬೇಕಾಗಿದ್ದು ಹಾಗೂ ಅಜರ್ಿಯನ್ನು ಸಲ್ಲಿಸತಕ್ಕಂತಹ ಸಂದರ್ಭದಲ್ಲಿ ಚುನಾವಣೆಯಲ್ಲಿ ಭಾಗವಹಿಸುವ ಪ್ರತಿನಿಧಿ ಮತ್ತು ಆ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಗಳು ಹಾಜರಿರಬೇಕು.
ಅದೂ ಅಲ್ಲದೆ ಸಂಘದ ಪ್ರತಿನಿಧಿ ನಿಯೋಜಿಸುವ ಅಜರ್ಿಗಳನ್ನು ನೀಡಲು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧಿಕಾರಿಗಳನ್ನೇ ನೇಮಿಸಿದ್ದು ಅವರು ತಮಗೆ ಬೇಕಾದವರಿಗೆ ಮಾತ್ರ ಅಜರ್ಿ ನಮೂನೆಗಳನ್ನು ನೀಡುತ್ತಾರೆ ಹಾಗೂ ಹೆಚ್ಚಿನ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಸಂಘದ ಪ್ರತಿನಿಧಿ ನಿಯೋಜಿಸುವ ನಮೂನೆಗೆ ಕೋರಿಕೆ ಸಲ್ಲಿಸಿದಾಗ ಸದ್ರಿ ನಮೂನೆ ನೀಡದೆ ನಿರಾಕರಿಸಿರುತ್ತಾರೆ.
ಈ ರೀತಿಯ ಹೊಸ ಚುನಾವಣಾ ಪದ್ಧತಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿಲ್ಲವೆಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ. ಆದುದರಿಂದ ಚುನಾವಣಾಧಿಕಾರಿಗಳಾದ ತಾವು ಈ ಕೆಳಗಿನ ಅನಾನುಕೂಲತೆಗಳನ್ನು ಸರಿಪಡಿಸಬೇಕಾಗಿದೆ
1. ಸಂಘದ ಪ್ರತಿನಿಧಿ/ಡೆಲಿಗೇಟ್ ನಿಯೋಜಿಸುವ ನಮೂನೆಯನ್ನು ಪಡೆಯುವ ದಿನಾಂಕವನ್ನು ವಿಸ್ತರಿಸಬೇಕು. ಪ್ರಸ್ತುತ ಸಮಯಾವಕಾಶ ನೀಡದೆ ದಿನಾಂಕ 25-04-2014 ಅಂತಿಮ ದಿನಾಂಕವೆಂದು ಇರುತ್ತದೆ.
2.ಪ್ರತಿನಿಧಿಗಳು ನಿಯೋಜಿಸಿ ಸಲ್ಲಿಸಬೇಕಾದ ಮಾದರಿ ಅಜರ್ಿ ನಮೂನೆಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.
3. ಸದ್ರಿ ಅಜರ್ಿಗಳನ್ನು ಮುಖತಃ ಕೊಂಡು ಹೋಗುವ ವಿಷಯವನ್ನು ಹೊರತುಪಡಿಸಿ ಟಪ್ಪಾಲು/ಕೊರಿಯರ್ ಮೂಲಕ ಕಳುಹಿಸಿದರೂ ಸ್ವೀಕರಿಸಬೇಕು.
4. ಚುನಾವಣೆಯ ಮತದಾರರ ಪಟ್ಟಿ ತಯಾರಿಸುವ ಕೊನೆಗಳಿಗೆವರೆಗೂ ಈ ರೀತಿಯ ಅಜರ್ಿಗಳನ್ನು ಸ್ವೀಕರಿಸುವಂತಿರಬೇಕು.
5. ಮತದಾರರ ಪಟ್ಟಿ ತಯಾರಿಸುವ ಹೊತ್ತಿಗೆ ಪ್ರತಿನಿಧಿಗಳ ಕಡ್ಡಾಯ ಹಾಜರಾತಿ ಅಗತ್ಯವಿಲ್ಲ ಎಂಬುದನ್ನು ತಿಳಿಸಬೇಕು.
ಇದೆನ್ನೆಲ್ಲಾ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕೆ. ಪ್ರತಾಪಸಿಂಹ ನಾಯಕ್, ವಿಧಾನ ಪರಿಷತ್ ಸದಸ್ಯ ಕೆ. ಮೋನಪ್ಪ ಭಂಡಾರಿ, ಮಾಜಿ ಶಾಸಕರಾದ ಎನ್. ಯೋಗೀಶ್ ಭಟ್, ಪ್ರಧಾನ ಕಾರ್ಯದಶರ್ಿ ಸಂಜೀವ ಮಠಂದೂರು, ಬಿಜೆಪಿ ಸಹಕಾರಿ ಪ್ರಕೋಷ್ಠದ ಮಂಗಳೂರು ವಿಭಾಗ ಸಂಚಾಲಕರಾದ ಹರೀಶ್ ಆಚಾರ್ ಮತ್ತು ಜಿಲ್ಲಾ ಕಾರ್ಯದಶರ್ಿ ಶಾಂತಾ. ಆರ್ ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *