ಬಜಪೆ: *ಬೊಲ್ಪುದ ಪರ್ಬ-2015* ದೀಪಾವಳಿ ಹಬ್ಬದ ಪ್ರಯುಕ್ತ ಮುಕ್ತ ಗೂಡುದೀಪ ಪ್ರದರ್ಶನ ರಂಗೋಲಿ ಬಿಡಿಸುವ ಕಾರ್ಯಕ್ರಮ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಳದಲ್ಲಿ ನ.8 ಭಾನುವಾರ ಸಂಜೆ 4 ರಿಂದ ನಡೆಯಲಿದೆ.
ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ ಹಗೂ ಇಲ್ಲಿನ ಶ್ರೀ ನಿರಂಜನ ಸ್ವಾಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಯಕ್ಷಮಿತ್ರರು ಸುಂಕದಕಟ್ಟೆ ಇವರ ಸಂಯೋಜನೆಯಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

ನೊಂದವಣಿಗೆ ನ.4 ಕೊನೆಯ ದಿನ:
ಗೂಡುದೀಪ ಹಾಗೂ ರಂಗೋಲಿ ಬಿಡಿಸುವ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವವರು ನ.4 ಬುಧುವಾರದ ಒಳಗಿನ ದೇವಳದ ಕಚೇರಿಯನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಬೇಕು. ದೂರವಾಣಿ ಸಂಖ್ಯೆ 0824-2252303,ಮೊಬೈಲ್-8105667370.ಭಾಗವಹಿಸುವ ಎಲ್ಲಾ ಗೂಡುದೀಪ ಹಾಗೂ ರಂಗೋಲಿ ಕಲಾವಿದರಿಗೂ ಸ್ಮರಣಿಯ , ಪ್ರಶಸ್ತಿ ಪತ್ರ,ಬಹುಮಾನ ನೀಡಿ ಗೌರವಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮ:-
ಬೊಲ್ಪುದ ಪರ್ಬ 2015ರ ಅಂಗವಾಗಿ ಭಕ್ತಿ ಗೀತೆ, ಭಾವಗೀತೆ, ಭರತನಾಟ್ಯ, ಜನಪದ ನೃತ್ಯ ಮತ್ತು ಕೊಳಲುವಾದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
*ರಾಧಾ ವಿಲಾಸ* ಯಕ್ಷ-ಗಾನ-ನಾಟ್ಯ ವೈಭವ:
ಸಂಜೆ 5.30ರಿಂದ ರಕ್ಷಿತ್ ಶೆಟ್ಟಿ ಪಡ್ರೆ ಇವರ ನಿರ್ದೇಶನದಲ್ಲಿ *ರಾಧಾ ವಿಲಾಸ* ಯಕ್ಷ-ಗಾನ-ನಾಟ್ಯ ವೈಭವ ಕರ್ಯಕ್ರಮ ಜರುಗಲಿದ್ಧು ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ, ವಿನಯ, ಚೈತನ್ಯ ಹಗೂ ಯಕ್ಷನಾಟ್ಯದಲ್ಲಿ ವರ್ಷಾ , ದಿಶಾ, ಸ್ಪಾರ್ತಿ , ಅದ್ವಿಕಾ, ಶ್ರವಣ್, ಸನ್ನಿ, ಶಿವಾನಿ ಹಗೂ ಆಧ್ಯ ಅವರು ಪಾಲ್ಗೊಳ್ಳಲಿದ್ಧಾರೆ.
*ಬೊಲ್ಪುದ ಪರ್ಬ*(ದೀಪಾವಳಿ) ಆಚರಣೆ ಕುರಿತಾಗಿ ಉಪನ್ಯಾಸ ನೀಡಲು ಜನಪದ ವಿದ್ವಾಂಸ ಡಾ|ಗಣೇಶ್ ಅಮೀನ್ ಸಂಕಮಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ಧಾರೆ ಎಂದು ಪ್ರಕಟಣೆ ತಿಳಿಸಿದೆ.
