ಬಜಪೆ: ಬೊಲ್ಪುದ ಪರ್ಬ-2015 ದೀಪಾವಳಿ ಹಬ್ಬದ ಪ್ರಯುಕ್ತ ಮುಕ್ತ ಗೂಡುದೀಪ ಪ್ರದರ್ಶನ ರಂಗೋಲಿ ಬಿಡಿಸುವ ಕಾರ್ಯಕ್ರಮ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಳದಲ್ಲಿ ನ.8 ಭಾನುವಾರ ಸಂಜೆ 4 ರಿಂದ ನಡೆಯಲಿದೆ.
ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ ಹಗೂ ಇಲ್ಲಿನ ಶ್ರೀ ನಿರಂಜನ ಸ್ವಾಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಯಕ್ಷಮಿತ್ರರು ಸುಂಕದಕಟ್ಟೆ ಇವರ ಸಂಯೋಜನೆಯಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ನೊಂದವಣಿಗೆ ನ.4 ಕೊನೆಯ ದಿನ:
ಗೂಡುದೀಪ ಹಾಗೂ ರಂಗೋಲಿ ಬಿಡಿಸುವ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವವರು ನ.4 ಬುಧುವಾರದ ಒಳಗಿನ ದೇವಳದ ಕಚೇರಿಯನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಬೇಕು. ದೂರವಾಣಿ ಸಂಖ್ಯೆ 0824-2252303,ಮೊಬೈಲ್-8105667870.ಭಾಗವಹಿಸುವ ಎಲ್ಲಾ ಗೂಡುದೀಪ ಹಾಗೂ ರಂಗೋಲಿ ಕಲಾವಿದರಿಗೂ ಸ್ಮರಣಿಯ , ಪ್ರಶಸ್ತಿ ಪತ್ರ,ಬಹುಮಾನ ನೀಡಿ ಗೌರವಿಸಲಾಗುವುದು.

ಸಾಂಸ್ಕøತಿಕ ಕಾರ್ಯಕ್ರಮ:-
ಬೊಲ್ಪುದ ಪರ್ಬ 2015ರ ಅಂಗವಾಗಿ ಭಕ್ತಿ ಗೀತೆ, ಭಾವಗೀತೆ, ಭರತನಾಟ್ಯ, ಜನಪದ ನೃತ್ಯ ಮತ್ತು ಕೊಳಲುವಾದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಧಾ ವಿಲಾಸ ಯಕ್ಷ-ಗಾನ-ನಾಟ್ಯ ವೈಭವ:
ಸಂಜೆ 5.30ರಿಂದ ರಕ್ಷಿತ್ ಶೆಟ್ಟಿ ಪಡ್ರೆ ಇವರ ನಿರ್ದೇಶನದಲ್ಲಿ ರಾಧಾ ವಿಲಾಸ ಯಕ್ಷ-ಗಾನ-ನಾಟ್ಯ ವೈಭವ ಕರ್ಯಕ್ರಮ ಜರುಗಲಿದ್ಧು ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ, ವಿನಯ, ಚೈತನ್ಯ ಹಗೂ ಯಕ್ಷನಾಟ್ಯದಲ್ಲಿ ವರ್ಷಾ, ದಿಶಾ, ಸ್ಪಾರ್ತಿ, ಅದ್ವಿಕಾ, ಶ್ರವಣ್, ಸನ್ನಿ, ಶಿವಾನಿ ಹಗೂ ಆಧ್ಯ ಅವರು ಪಾಲ್ಗೊಳ್ಳಲಿದ್ಧಾರೆ.
ಬೊಲ್ಪುದ ಪರ್ಬ(ದೀಪಾವಳಿ) ಆಚರಣೆ ಕುರಿತಾಗಿ ಉಪನ್ಯಾಸ ನೀಡಲು ಜನಪದ ವಿದ್ವಾಂಸ ಡಾ|ಗಣೇಶ್ ಅಮೀನ್ ಸಂಕಮಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ಧಾರೆ.

By suddi9

Leave a Reply

Your email address will not be published. Required fields are marked *