ಬಜಪೆ: ಯಕ್ಷಗಾನ -ನಾಟ್ಯ-ಕಲಾ ಪ್ರಿಯೆ ಕಟೀಲು ದುರ್ಗೆಯ ಸನ್ನಿಯಲ್ಲಿ ವಿಜ್ರಂಭಿಸಿದ ಮೂರು ದಿನಗಳ ಮುದ್ದು ಮಕ್ಕಳ ಯಕ್ಷಗಾನ ಕಲಾಪರ್ವ ಹಲವು ವಿಶೇಷನಗಳೊಂದಿಗೆ ಸಂಪನ್ನಗೊಂಡಿತು.

ಪೂರ್ವರಂಗದ ಪ್ರಕಾರಗಳಾದ ಕೋಡಂಗಿ, ಬಾಲಗೋಪಾಲ, ಚಂದಭಾಮಾ, ರಂಗ-ರಂಗಿನಾಟ, ಅರ್ಧನಾರೀಶ್ವರ, ಪಣ್ಮಖ ಸುಭ್ರಾಯ, ಚಪ್ಪರ ಮಂಚ, ಶ್ರೀ ಕೃಷ್ಣ -ಶ್ರೀ ರಾಮ- ಹನುಮಂತ, ರಾಮಣ ಮುಖ್ಯ ಸ್ತ್ರೀ ವೇಷ, ಹೆಣ್ಣು ಬಣ್ಣದ ವೇಷದ ಒಡ್ಡೋಲಗ… ಹೀಗೆ ಇನ್ನೂ ಅನೇಕವಾಗಿ ವಿಭಿನ್ನ ಪ್ರಯೋಗಗಳನ್ನು ಪ್ರಸ್ತುತ ಪಡಿಸುವಲ್ಲಿ ಮೇಳದ ನಾಟ್ಯ ಗುರು ರಾಜೇಶ್ ಐ.ಕಟೀಲು ಅವರ ಸಮರ್ಥ ನಿರ್ದೇಶನ ಶ್ಲಾಘನೀಯವೆನಿಸಿತು.
ಪುಟಾಣಿಗಳ ಯಕ್ಷಗಾನ-ಗಾನ ವೈಭವ:
ತಂಡದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಯಕ್ಷಗಾನದ ಗಾನ ವೈಭವ ಚೆಂಡೆ ಜುಗುಲ್ ಬಂದಿ ಉತ್ತಮವಾಗಿ ಮೂಡಿ ಬಂದಿದೆ.
ದುರ್ಗಾ ಮಕ್ಕಳ ಮೇಳದಲ್ಲಿ ಅಭ್ಯಾಸ ಮಾಡುವ ಎಲ್ಲಾ 200 ಮಕ್ಕಳೂ ಕೂಡಾ ರಂಗಸ್ಥಳವೇರಿ ಸಾಂದರ್ಭಿಕ ಪ್ರದರ್ಶನ ನೀಡಿದ್ದಾರೆ
ಕಿರಾತಕನ ಪಡೆಯಾ ಅಬ್ಬರದ ಪ್ರವೇಶ:
*ಶಶಿಪ್ರಭಾ ಪರಿಣಯ* ಯಕ್ಷಗಾನದಲ್ಲಿ ಕಿರಾತಕನ ಪ್ರವೇಶ ಸಂದರ್ಭವನ್ನು ಅತ್ಯಂತ ವೈಶಿಷ್ಟಪೂರ್ಣವಾಗಿ ಸಂಯೋಜಿಸಲಾಗಿತ್ತು. 25ಕ್ಕೂ ಹೆಚ್ಚು ಮಕ್ಕಳು ಕಿರಾತನ ಸಹಚರರಾಗಿ ರಂಗವೇರಿ ರಂಗೇರಿಸಿದರು. ಇದಕ್ಕೂ ಮೊದಲು ರಂಗಸ್ಥಳದ ಹೊರಗೆ ಅಗ್ನಿಯ ಸುತ್ತ ಕಿರಾತಕ ಪಡೆಯ ಕುಣಿತವೂ ಗಮನ ಸೆಳೆಯಿತು. ಈ ಪ್ರದರ್ಶನ ಸುಮಾರು ಅರ್ಧಗಂಟೆಯಷ್ಟು ಜರಗಿತು.
86 ಬಾಲಕಿಯರು, 79 ಬಾಲಕರು
ಕಟೀಲು ದುರ್ಗಾ ಮಕ್ಕಳ ಮೇಳದ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಮೂರು ದಿನಗಳ ಕಲಾ ಪರ್ವದಲ್ಲಿ 86 ಬಾಲಕಿಯರು, 79 ಬಾಲಕರು, ಮೂವರು ಮಹಿಳಾ ಭಾಗವತರು (ಲೀಲಾವತಿ ಬೈಪಡಿತ್ತಾಯ, ಭವ್ಯಶೀ ಮಂಡೆಕೋಲು, ಅಮೃತಾ) ಪಾಲ್ಗೊಂಡಿದ್ದರು.



