ಮುಂಬಯಿ, ಅ.22: ಉಪನಗರ ಜೋಗೇಶ್ವರಿ ಪೂರ್ವದ ಪ್ರತಾಪ್ ನಗರದ ಶಾಂತಿದೇವಿ ತಿವಾರಿ ಚಾಲ್ನಲ್ಲಿನ ಕಲ್ಪವೃಕ್ಷ ಶ್ರೀ ಮಹಾಗಣಪತಿ ಹಾಗೂ ಶ್ರೀ ಭಗವತೀ ಮಂದಿರದಲ್ಲ್ಲಿ 2015ನೇ ವಾರ್ಷಿಕ ನವರಾತ್ರಿ ಮಹೋತ್ಸವವನ್ನು ಅದ್ದೂರಿಯಿಂದ ಸಂಭ್ರಮಿಸಲಾಯಿತು. ಇಂದಿಲ್ಲಿ ಗುರುವಾರ ವಿಜಯ ದಶಮಿ ದಿನ ಬೆಳಿಗ್ಗೆ ಶ್ರೀದೇವಿಗೆ ಪೂಜಾಧಿಗಳೊಂದಿಗೆ ವಿಜಯದಶಮಿ ಮಹಾಪೂಜೆ ನೆರವೇರಿಸಿ ಆರತಿಗೈದು ತೀರ್ಥಪ್ರಸಾದ ವಿತರಿಸಲಾಯಿತು.

Kalphavriksha Jogeshwari Navaratri-B4 Kalphavriksha Jogeshwari Navaratri-1

Kalphavriksha Jogeshwari Navaratri-2

Kalphavriksha Jogeshwari Navaratri-4

Kalphavriksha Jogeshwari Navaratri-B2

ಈ ಸಂದರ್ಭದಲ್ಲಿ ಮಂದಿರದ ಮೊಕ್ತೇಸರ ಸುಂದರ್ ಸಿ.ಕರ್ಕೇರ ಮತ್ತು ಶ್ರೀಮತಿ ಕುಶಾಲಕ್ಷೀ ಎಸ್.ಕರ್ಕೇರ, ಅಧ್ಯಕ್ಷ ಸೋಮನ್ ಕೆ.ನಾಯರ್, ಅರ್ಚಕ ರಾಜೇಶ್ ಎಸ್.ಕಕೇರ, ಮೋಹನ್ ಎನ್.ದೇವಾಡಿಗ, ಸಚಿನ್ ಪಿ.ಅಂಚನ್ ಸೇರಿದಂತೆ ಅತ್ಯಾಧಿಕ ಸಂಖ್ಯೆಯ ಭಕ್ತಧಿಗಳೆಲ್ಲರೂ ಶರನ್ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಸಿರಿಮುಡಿ, ಗಂಧಪ್ರಸಾದ ಸ್ವೀಕರಿಸಿ, ಶ್ರೀ ಭಗವತೀ ಅಮ್ಮನವರ ಕೃಪಾಕಟಾಕ್ಷಕ್ಕೆ ಪಾತ್ರರಾದರು. ಕಾರ್ಯಕ್ರಮ ದ ನಿಮಿತ್ತ ಮಹಾಪ್ರಸಾದ ಮತ್ತು ಅನ್ನಸಂತರ್ಪಣೆ ನೆರವೇರಿಸಲ್ಪಟ್ಟಿತು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *