ಮುಂಬಯಿ : ಭಾರತ್ ಬ್ಯಾಂಕ್, ವಿಲೆಪಾರ್ಲೆ ಶಾಖೆಯಲ್ಲಿ ಗ್ರಾಹಕರಿಗಾಗಿ ಅ. 21ರಂದು ಉಚಿತ ವೈದ್ಯಕೀಯ ಶಿಭಿರವನ್ನು ಏರ್ಪಡಿಸಲಾಯಿತು. ಈ ಶಿಭಿರವನ್ನು ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷ, ಹಾಲಿ ನಿರ್ದೇಶಕ, ವಾಸುದೇವ ಕೋಟ್ಯಾನ್ ಉಪಸ್ಥಿತಿಯಲ್ಲಿ ಹಿರಿಯ ಗ್ರಾಹಕ ಮೊಹಮ್ಮದ್ ಕೈಜರ್ ದೀಪ ಬೆಳಗಿಸಿ ಉದ್ಘಾಟಿಸಿದರು.

DSC_0039
DSC_0050

DSC_0054

DSC_0062
ವೈದ್ಯಕೀಯ ಶಿಭಿರವು ಮುಂಜಾನೆ ಪ್ರಾಂಭಗೊಂಡಿದ್ದು ಎಸ್.ಆರ್.ಎಲ್. ಡಯಗ್ನಾಸ್ಟಿಸ್ ನ ಸಹಯೋಗದಲ್ಲಿ ಬ್ಯಾಂಕಿನ ಅನೇಕ ಗ್ರಾಹಕರು ತಪಾಸಣೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ನಿರ್ದೇಶಕ ಚಂದ್ರಾ ನಿತ್ಯಾನಂದ, ಗ್ರಾಹಕರಾದ ಎಸ್.ಕೆ.ಸುಂದರ್, ಪಿ. ಕೃಷ್ಣ, ಹೋಟೇಲು ಉದ್ಯಮಿಗಳಾದ ಸುಂದರ್, ಚಂದ್ರಶೇಖರ ಎಸ್. ಶೆಟ್ಟಿ, ಸಿಎ ಅಶ್ವಜಿತ್ ಹೆಜಮಾಡಿ, ಭಾರತ್ ಬ್ಯಾಂಕ್, ವಿಲೆಪಾರ್ಲೆ ಶಾಖೆಯ ಎ.ಜಿ.ಎಂ. ಪ್ರಭಾಕರ ಪೂಜಾರಿ, ಉಪ ಪ್ರಭಂದಕರುಗಳಾದ ಉಮೇಶ್ ಜಿ. ಕೋಟ್ಯಾನ್, ಶುಭಲತಾ ಪೂಜಾರಿ, ಅಧಿಕಾರಿಗಳಾದ ಸಂಧ್ಯಾ ಪೂಜಾರಿ, ಸೀಮಾ ಪೂಜಾರಿ, ಜಯಶ್ರೀ ಬಂಗೇರ ಉಪಸ್ಥಿತರಿದ್ದರು.

ವಿಲೆಪಾರ್ಲೆ ಶಾಖೆಯ ಸಿಬ್ಬಂದಿಗಳಾದ ಮಹೇಶ್ ಕರ್ಕೇರ, ರಮೇಶ್ ಪೂಜಾರಿ, ನಿಶಾ ಪೂಜಾರಿ, ಜಯಪ್ರಕಾಶ್ ಬಂಗೇರ, ಮಮತಾ ಪೂಜಾರಿ, ಸಂತೋಷ್ ಪೂಜಾರಿ, ಅಶ್ವಿನಿ ಪೂಜಾರಿ, ಪೂಜಾ ಶಿಮಂತೂರು, ಸುಜಾತಾ ಕೋಟ್ಯಾನ್, ಶ್ರೀನಾಥ್ ಪೂಜಾರಿ ಸಂದೇಶ್ ವಿಪುಲ್ ಮೊದಲಾದವರು ಈ ಶಿಭಿರದ ಯಶಸ್ವಿಗೆ ಸಹಕರಿಸಿದರು.

ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

By suddi9

Leave a Reply

Your email address will not be published. Required fields are marked *