ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನವರಾತ್ರಿಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರತೀ ದಿನ ಸಂಜೆ ಭಜನಾ ತಂಡಗಳು ಭಜನಾ ಸೇವೆ ನಡೆಸಿಕೊಡುತ್ತಿವೆ.
DSC_0459

DSC_0485
ಈಗಾಗಲೇ ಅ.13.ರಂದು ‘ಮಹಾಲಿಂಗೇಶ್ವರ ಭಜನಾ ಸಂಘ ಕುಂಜತ್ತೂರು’ ಇವರು, ಅ.14.ರಂದು ನಾಯ್ಕಾಪುವಿನ ‘ಶ್ರೀ ಶಾಸ್ತಾ ಭಜನಾ ಸಂಘ’ ಇವರ ಭಜನಾ ಸೇವೆ , ಅ.16. ರಂದು ಕುಂಟಾರು ಪ್ರಕಾಶ್ ಆಚಾರ್ಯ ಹಾಗೂ ಬಳಗದವರಿಂದ ಸಂಗೀತ ಕಾರ್ಯಕ್ರಮಗಳು ನಡೆದಿವೆ. ಅ.17 ರಂದು ಕಾಸರಗೋಡಿನ ಶ್ರೀಮಾತಾಅಮೃತಾನಂದಮಯೀ ಸಮಿತಿಯವರಿಂದ ಭಜನಾ ಸೇವೆ ಹಾಗೂ ಅ.18. ರಂದು ಪಂಜಿಕಲ್ಲು ಉದಯ ಆಚಾರ್ಯ ಬಳಗದವರ ಸಂಗೀತ ಕಾರ್ಯಕ್ರಮ ನಡೆಯಿತು.
ಅ. 19.ಸೋಮವಾರ ಬೆಳಿಗ್ಗೆ ಶ್ರೀ ಶಾರದಾ ಪ್ರತಿಷ್ಠಾ ಕಾರ್ಯಕ್ರಮ ಧಾರ್ಮಿಕ ವಿಧಿವಿದಾನಗಳೊಂದಿಗೆ ನಡೆಯಿತು. ಪ್ರತಿಷ್ಠೆಯ ನಂತರ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳು ಭಜನಾ ಸೇವೆ ನಡೆಸಿಕೊಟ್ಟರು. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಾರದಾ ಮಾತೆ ಹಾಗೂ ಶ್ರೀ ಗಾಯತ್ರೀ ಮಾತೆಯರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ

By suddi9

Leave a Reply

Your email address will not be published. Required fields are marked *