ಮುಂಬೈ: ಬಾಲಿವುಡ್ ಬಾದ್ ಶಾ ಎಂಬ ಹೆಗ್ಗಳಿಕೆ ಪಡೆದ ನಟ ಶಾರುಖ್ ಖಾನ್ ಆತ ತನ್ನ ಅಭಿನಯದ ಚಿತ್ರಗಳ ಮುಖಾಂತರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅದರಲ್ಲೂ ಕಲ್ ಹೋನ ಹೊ, ಓಂ ಶಾಂತಿ ಓಂ, ರಬ್ ನೆ ಬನಾದಿ ಜೋಡಿ, ಮೈ ನೆಮ್ ಇಸ್ ಖಾನ್ ನಂತಹ ಚಿತ್ರಗಳ ಮೂಲಕ ತಾವೆಷ್ಟು ಪ್ರತಿಭಾವಂತರು  ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಆ ಪಟ್ಟಿಗೆ ಕಳೆದ ವರ್ಷ ಬಿಡುಗಡೆ ಆದ ಚೆನ್ನೈ ಎಕ್ಸ್ಪ್ರೆಸ್ ಸಹ ಸೇರ್ಪಡೆ ಆಗುತ್ತದೆ.
shahrukh-khan-2013-25-81160
ಆ ಚಿತ್ರವೂ ಸಾಕಷ್ಟು  ಸುದ್ದಿ ಮಾಡಿತ್ತು ಗೆಲುವಿನ ಮೂಲಕ. ಉತ್ತರ ಭಾರತದ ರಾಜ್ಯಗಳಲ್ಲಿ ಆತನ ಬಗ್ಗೆ ಇರುವ ಕ್ರೇಜ್ ದಕ್ಷಿಣ   ಭಾರತಕ್ಕೂ ಹರಡುವ ಪ್ರಯತ್ನಕ್ಕೆ ಜೊತೆ ಆದದ್ದು ಚೆನ್ನೈ ಎಕ್ಸ್ ಪ್ರೆಸ್ ಚಿತ್ರ. ಅದೇ ರೀತಿ ಈಗ ಅವರ ಹೊಸ ಚಿತ್ರ ಹ್ಯಾಪಿ ನ್ಯೂ ಇಯರ್ ನ್ನು ಸಹಿತ ದಕ್ಷಿಣ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನದಲ್ಲಿ   ನಿರತವಾಗಿದೆ. ಅಂದರೆ ಈ ಚಿತ್ರವು ಕೇವಲ ಹಿಂದಿಯಲ್ಲಿ ಮಾತ್ರವಲ್ಲ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆಯಂತೆ  .ಈ ಚಿತ್ರದಲ್ಲಿ ಶಾರೂಖ್ ಖಾನ್ ಅಲ್ಲದೆ ದೀಪಿಕ ಪಡುಕೋಣೆ, ಅಭಿಷೇಕ್ ಬಚ್ಚನ್, ಬೊಮ್ಮನ್ ಇರಾನಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಸಿಗುತ್ತಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ಫರಾ ಖಾನ್.ಈ ಚಿತ್ರಕ್ಕೆ ಯಶ್ರಾಜ್ ಫಿಲಿಮ್ಸ್ ನವರು ಡಿಸ್ಟ್ರಿಬ್ಯೂಟ್ ಮಾಡಲು ಮುಂದೆ ಬಂದಿದ್ದಾರೆ.ದೀಪಾವಳಿ ಸಮಯದಲ್ಲಿ ಈ ಚಿತ್ರ ಬಿಡುಗಡೆ ಆಗುತ್ತದೆ.

By suddi9

Leave a Reply

Your email address will not be published. Required fields are marked *