ಕನ್ನಡ ಚಲನ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಅರವತ್ತೊಂದನೆ ರಾಷ್ಟ್ರ ಪ್ರಶಸ್ತಿಯನ್ನು ಇತ್ತೀಚೆಗೆ ಪ್ರಕಟ ಮಾಡಲಾಯಿತು. ಅದರಲ್ಲಿ ಕನ್ನಡದ ಹೆಮ್ಮೆಯ ನಿರ್ದೇಶಕ ಪಿ. ಶೇಷಾದ್ರಿ ಅವರ ಚಿತ್ರ ಡಿಸೆಂಬರ್ 1 ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿದೆ.

d1

ಡಿಸೆಂಬರ್ 1 ಕನ್ನಡ ಚಿತ್ರಕ್ಕೆ ಒಂದು ಲಕ್ಷ ರೂಪಾಯಿ ನಗದು ಮತ್ತು ರಜತ ಕಮಲ ದೊರಕಲಿದೆ.ಈ ಚಿತ್ರದ ನಿರ್ಮಾಣ- ನಿರ್ದೇಶನವನ್ನು ಪಿ. ಶೇಷಾದ್ರಿ ಮಾಡಿದ್ದಾರೆ. ಪ್ರಕೃತಿ , ಅಷ್ಟು ಚಿತ್ರಗಳು ಸಹ ಕ್ರಮವಾಗಿ 50 ಸಾವಿರ ನಗದನ್ನು ಮತ್ತು ರಜತ ಕಮಲವನ್ನು ಪಡೆದಿದ್ದಾರೆ. ಡಾ. ಗಿರೀಶ್ ಕಾಸರವಳ್ಳಿ ಅವರು ಸ್ಪೆಶಲ್ ಜೂರಿ ಅವಾರ್ಡ್ ಪಡೆದಿದ್ದಾರೆ. ಅವರಿಗೂ ಸಹ ರಜತ ಕಮಲದ ಗೌರವ ಸಂದಿದೆ. ಕೊಂಕಣಿ ಭಾಷೆಯ ಬಗ ಬೀಚ್ ಚಿತ್ರಕ್ಕೂ ಸಹ ರಜತ ಕಮಲ ಸಿಕ್ಕಿದೆ. ಇದನ್ನು ಶ್ರಾವಣಿ ನಿರ್ಮಿಸಿದ್ದಾರೆ, ಲಕ್ಷ್ಮಿಕಾಂತ್ ಶೆಟ್ಗೊಂಕರ್ ನಿರ್ದೇಶಿಸಿದ್ದಾರೆ.

By suddi9

Leave a Reply

Your email address will not be published. Required fields are marked *