ಬೆಂಗಳೂರು: ಕನ್ನಡದ ಉದಯೋನ್ಮುಖ ಪ್ರತಿಭೆ ರಕ್ಷಿತ್ ಶೆಟ್ಟಿ. ನಟಿಸಿರುವ ಚಿತ್ರಗಳು ಬೆರಳೆಣಿಕೆ ಮಾತ್ರ ಆದರೆ ಹಿಟ್ಸ್ ನೀಡಿರುವ ಯಂಗ್ ಹೀರೋಗಳಲ್ಲಿ ಅವರು ಒಬ್ಬರಾಗಿದ್ದಾರೆ. ಅವರ ಇತ್ತೀಚಿನ ಚಿತ್ರ ಉಳಿದವರು ಕಂಡಂತೆ. ಈ ಸುಂದರ ನಟನಿಗೆ ಅಪಾರ ಸಂಖ್ಯೆಯ ಫ್ಯಾನ್ ಗಳಿದ್ದಾರೆ, ಆತನ ಯಾರ ಫ್ಯಾನ್ ಗೊತ್ತೇ? ಕನ್ನಡ ವಿಭಿನ್ನ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಅಭಿಮಾನಿಯಂತೆ.
shetty
ಮಣಿಪಾಲ್ ನಲ್ಲಿ ನಡೆಯುತ್ತಿರುವ ಚಲಚಿತ್ರೋತ್ಸವದಲ್ಲಿ ಭಾಗವಹಿಸುವ ಸಲುವಾಗಿ ಅಲ್ಲಿಗೆ ಹೋಗಿದ್ದರಂತೆ. ಅಲ್ಲಿ ರಕ್ಷಿತ್ ಉಳಿದವರು ಕಂಡಂತೆ ಪ್ರದರ್ಶನ ಆಗುತ್ತಿತ್ತು.ಆದರೆ ಆ ಚಿತ್ರದ ನಂತ್ರ ಹಿಂತಿರುಗದೆ ಅಲ್ಲೇ ಉಳಿದರು, ಅದಕ್ಕೆ ಕಾರಣ ಗಿರೀಶ್ ಕಾಸರವಳ್ಳಿ ಅವರ ಚಿತ್ರ ಕೂರ್ಮಾವತಾರ ಪ್ರದರ್ಶನ ಆಗುವುದಿತ್ತು . ಈ ಸಮಯದಲ್ಲಿ ಮಾತನಾಡಿದ ಈ ಸುಂದರ ನಟ ತಾನು ಕಾಸರವಳ್ಳಿ ಅವರ ಬಹುತೇಕ ಎಲ್ಲ ಸಿನಿಮಾಗಳನ್ನು ವೀಕ್ಷಿಸಿದ್ದೇನೆ  ಎಂದು ತಿಳಿಸಿದರು. ಈ ಸಮಯದಲ್ಲಿ ಅವರ ಸಹ ನಟರಾದ ರಿಶಬ್ ಶೆಟ್ಟಿ ಮತ್ತು ಯಜ್ಞಾ ಶೆಟ್ಟಿ ಸಹ ಕಾಸರವಳ್ಳಿ   ಅವರನ್ನು ಅಭಿನಂದಿಸಿದರು.  ನಾನು ಹಲವು ವರ್ಷಗಳ ಹಿಂದೆ ಗಾಂಧಿ ಅನ್ನುವ ಶಾರ್ಟ್ ಫಿಲಿಂ ಮಾಡುವಾಗ ರಕ್ಷಿತ್ ಗಿರೀಶ್ ಕಾಸರವಳ್ಳಿ ಅವರ ಮಾರ್ಗದರ್ಶನ ಪಡೆಯಲು ಅನೇಕ ಬಾರಿ ಭೇಟಿ ಆಗುತ್ತಿದ್ದರಂತೆ. ರಕ್ಷಿತ್ ಅವರ ಗಾಂಧಿಚಿತ್ರವು ಸಹ ಕೂರ್ಮಾವತಾರದಂತೆ  ಗಾಂಧಿತತ್ವಗಳನ್ನು ಆಧರಿಸಿದ ಕಿರು ಚಿತ್ರವಾಗಿತ್ತು. ಆದ್ರೆ ಕೂರ್ಮಾವತಾರದ ಶೈಲಿಯೇ ಅದ್ಭುತ ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದರು ರಕ್ಷಿತ್.

By suddi9

Leave a Reply

Your email address will not be published. Required fields are marked *