ಮುಂಬೈ: ಯಶ್ರಾಜ್ ಫಿಲಂಸ್ ಯಜಮಾನ ಆದಿತ್ಯ ಚೋಪ್ರಾ ಮತ್ತು ಸೆಕ್ಸಿ ಬ್ಯೂಟಿ ರಾಣಿ ಮುಖರ್ಜಿ ಪ್ರೇಮ ಸಾಕಷ್ಟು ಕಾಲದಿಂದ ನಡೀತಾ ಇತ್ತು. ಇನ್ನೇನು ಇಬ್ಬರು ಮಾಡುವೆ ಆಗಿಯೇ ಹೋಗ್ತಾರೆ ಎನ್ನುವ ಸುದ್ದಿಯಂತೂ ಇಡೀ ಬಾಲಿವುಡ್ ಲೋಕದಲ್ಲಿ ಹರಡುತ್ತಲೇ ಇತ್ತು. ಅದೆಷ್ಟು ಬಿಸಿಯಾಗಿ ಹೊರ ಹೊಮ್ಮುತ್ತಾ ಇತ್ತೋ ಅಷ್ಟೇ ಬೇಗ ತಣ್ಣಗಾಗಿ ಬಿಡುತ್ತಿತ್ತು. ಆದರೂ ಈ ವರ್ಷ ಇವರಿಬ್ಬರು ಮದುವೆ ಆಗೇ ಆಗ್ತಾರೆ ಎನ್ನುವ  ಮಾಹಿತಿ ಗಾಢವಾಗಿತ್ತು,14  ಫೆಬ್ರವರಿ 2014  ಇವರಿಬ್ಬರು ಮದುವೆ ಆಗೇ ತೀರ್ತಾರೆ ಎನ್ನುವ ಸುದ್ದಿಯು, ಜೊತೆಗೆ ಮದುವೆಗೆ ರಾಜಸ್ತಾನ್ ಅರಮನೆ   ಬುಕ್ ಆಗಿದೆ ಎನ್ನುವ ಸಂಗತಿಯು ಸಹ ಎಲ್ಲೆಡೆ ಹರಡಿತ್ತು. ಆದರೆ ಹಾಗೆ ಆಗಲೇ ಇಲ್ಲ. ಆದರೆ ಅಂತೂ ಇಂತೂ ಈ ಜೋಡಿ 21  ಎಪ್ರಿಲ್ನಲ್ಲಿ   ಮದುವೆ ಆಗಿದ್ದಾರೆ. ಆದರೆ ಭಾರತದಲ್ಲಿ ಅಲ್ಲ, ಇಟಲಿ ದೇಶಕ್ಕೆ ಹೋಗಿ ಅಲ್ಲಿ ಮದುವೆ ಆಗಿದ್ದಾರೆ.
rani
ನನ್ನ ಬದುಕಿನ ಅತ್ಯಂತ ಮಹತ್ವದ ಕ್ಷಣಗಳ ಬಗ್ಗೆ ನನ್ನ ಫ್ಯಾನ್ ಗಳಿಗೆ ಹೇಳಲು ಇಷ್ಟ ಪಡ್ತೀನಿ . ನಾನು ಇಟಲಿಯಲ್ಲಿ ಮದುವೆ ಆದೆ. ಈ  ಮದುವೆ ಕಾರ್ಯಕ್ರಮದಲ್ಲಿ  ಕೆಲವು ಆಪ್ತರು ಮಾತ್ರ  ಬಂದಿದ್ದರು. ನಮ್ಮ ಮದುವೆಗೆ ಯಶ್ ಅಂಕಲ್ ಇಲ್ಲ, ಅವರನ್ನು ನಾವು ತುಂಬಾ ಮಿಸ್ ಮಾಡಿಕೊಂಡೆವು. ಅವರು ಇಲ್ಲಿ ಇಲ್ಲದೆ ಇದ್ದರು ಸಹ ಯಶ್ ಅಂಕಲ್ ಅವರ ಆಶೀರ್ವಾದ ನಮ್ಮ ಮೇಲೆ ಇದ್ದೆ ಇರುತ್ತದೆ ಎಂದು ಬರೆದಿದ್ದಾಳೆ. ಡೇಟಿಂಗ್ ಮಾಡ್ತಾ ಇದ್ದ ಈ ಜೋಡಿ ಅಂತಿಮವಾಗಿ ತಮ್ಮ ಸಂಬಂಧಕ್ಕೆ ಒಂದು ಅರ್ಥ ನೀಡಿದ್ದಾರೆ. ಈ ನವಜೋಡಿಗೆ ಶುಭ ಹಾರೈಸೋಣ !

By suddi9

Leave a Reply

Your email address will not be published. Required fields are marked *