ಕಲಿಕೆಯ ಜನತೆಗೆ ದೇಶಪ್ರೇಮ ರೂಢಿಸಿಕೊಳ್ಳಿ-ಆದಿತ್ಯ ನಾರಾಯಣ್

ಬಜಪೆ : ಕಲಿಕೆಯ ಜನತೆ ಮಕ್ಕಳು ತಮ್ಮ ಗುಣದೋಷಗಳನ್ನು ತಿದ್ದಿಕೊಂಡು ತಮ್ಮೊಳಗೆ ದೇಶಪ್ರೇಮ ಜಾಗೃತಗೊಳಿಸಿಕೊಂಡಲ್ಲಿ ಸೈನಿಕರಂತೆ ಶಿಸ್ತುಬದ್ದ ರಾಷ್ಟ್ರಭಿಮಾನದ ಬದುಕು ಕಾಣಬಹುದು. ಇದು ದಷ್ಟರಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಕರಿಸುವ ಗುಣವಿರಲಿ.* ಎಂದು ಖ್ಯಾತ ಸಂಗೀತ ನಿರ್ದೇಶಕ. ಛತ್ತೀಸ್‍ಘಡ್ ಸರಕಾರದ ನೀತಿ ಆಯೋಗದ ಸದಸ್ಯ ಆದಿತ್ಯ ನಾರಾಯಣ್ ಹೇಳಿದರು.

ಮಿತ್ರರು-ಮುಚ್ಚೂರು ಇವರ ಸಂಯೋಜನೆಯಲ್ಲಿ ಲಯನ್ಸ್ ಕ್ಲಬ್ ಮುಚ್ಚೂರು – ನೀರುಡೆ, ಸರಕಾರಿ ಹಿ.ಪ್ರಾ.ಶಾಲೆ ಹಾಗೂ ಪ್ರೌಢಶಾಲೆ ಮುಚ್ಚೂರು ಇವರ ಸಹಭಾಗಿತ್ವದಲ್ಲಿ ಮುಚ್ಚೂರು ಶಾಲೆಯಲ್ಲಿ ಬುಧವಾರ ಜರಗಿದ ಸೈನಿಕರಿಗೊಂದು ಸಲಾಂ ಯೋಧರೊಂದಿಗೆ ಸಂವಾದ ಪ್ರತಿಭೆಗೊಂದು ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಚ್ಚೂರು ಪರಿಸರದ ಹಳ್ಳಿ ಪ್ರತಿಭಾವಂತ ಮಕ್ಕಳು ಯಾವುದೇ ಮಟ್ಟದ ಶಿಕ್ಷಣವನ್ನು ಆರ್ಥಿಕ ಕಾರಣದಿಂದ ವಂಚಿತರಾಗದಂತೆ ಮಿತ್ರರು-ಮುಚ್ಚೂರು ಸಂಘಟನೆ ಆಧರಿಸುತ್ತದೆ. ಆದರೆ ಫಲಾನುಭವಿಗಳಲ್ಲಿ ಯಾವುದೇ ಗುಣ ದೋಷಗಳಿರಬಾರದು ಎಂದು ಅವರು ಹೇಳಿದರು.
17 vm muchur prathibha (1)

17 vm muchur prathibha

17 vm muchur yodha
ಕಾರ್ಯಕ್ರಮ ಉದ್ಘಾಟಿಸಿ ಜಿ.ಪಂ. ಸದಸ್ಯ ಜನಾರ್ಧನ ಗೌಡ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ- ಕೇವಲ ಕ್ರೀಡೆಯೊಂದರಲ್ಲಿ ಗೆದ್ದವನಿಗೆ ಸರಕಾರ ಅದ್ದೂರಿ ಗೌರವ ನೀಡುತ್ತದೆ. ಆದರೆ ಸೈನಿಕರ ಬಗೆಗಿನ ನಡೆ ಏನೇನೂ ಸಾಲದು. ಎಂದರು.
ಪ್ರತಿಬೆಗೊಂದು ನಮನ :
ಕಲ್ಲಮುಂಡ್ಕೂರು, ನೀರ್ಕೆರೆ, ನೀರುಡೆ, ಮುಚ್ಚೂರು ಶಾಲೆಗಳ ಹತ್ತು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಪ್ರತಿಭೆಗೊಂದು ನಮನ ಕಾರ್ಯಕ್ರಮ ಈ ಸಂದರ್ಭ ನಡೆಯಿತು. ಸರಿತಾ ಆದಿತ್ಯ ನಾರಾಯಣ್ ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ನಾಯ್ಕ್ ಬಿ. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕುಮುದಿನಿ, ಉದ್ಯಮಿ ಶೆಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷೆ ಹರೀಶ್ ಗೌಡ, ಅನುಷಾ ಕೆ. ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸೈನಿಕರಿಗೊಂದು ಸಲಾಂ- ಯೋಧರೊಂದಿಗೆ ಸಂವಾದ*-
ಅಪೂರ್ವ ಪರಿಕಲ್ಪನೆಯ ಸೈನಿಕರಿಗೊಂದು ಸಲಾಂ – ಯೋಧರೊಂದಿಗೆ ಸಂವಾದ ಕಾರ್ಯಕ್ರಮ ಮೂಡಿಬಂತು.
ಕಾರ್ಯಕ್ರಮದಲ್ಲಿ ಪ್ರಸ್ತುತ ಇಂಡಿಯನ್ ನೇವಿಯ ಮಾಸ್ಟರ್ ಚೇಫ್ ಆಫೀಸರ್ ಆಗಿರುವ ಜಗದೀಶ್ ಬಲ್ಲಾಖ್ ಬೈಲ್ ನಿವೃತ್ತ ಯೋಧ ಹಾಗೂ ಪ್ರಸ್ತುತ ಮುಚ್ಚೂರು ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಹೆರಾಲ್ಡ್ ಫೆರ್ನಾಂಡಿಸ್ ಹಾಗೂ ನಿವೃತ್ತ ಯೋಧ ಹಾಗೂ ಪ್ರಸ್ತುತ ಮುಚ್ಚೂರು ಗ್ರಾ.ಪಂ.ನ ಪಂಚಾಯಿತಿ ಅಭಿವೃದ್ಧಿ ಅಕಾರಿಯಾಗಿರುವ ಯಶವಂತ ಬಿ. ಅವರುಗಳು ಪಾಲ್ಗೊಂಡಿದ್ದು ಶಾಲೆಗಳ ಹಾಗೂ ಊರಪರವಾಗಿ ಸನ್ಮಾನಿಸಿ *ಸೈನಿಕರ ಪ್ರತಿನಿಗಳಾಗಿ ಗೌರವ ಸಲ್ಲಿಸಲಾಯಿತು.
ಹೆರಾಲ್ಡ್ ಫೆರ್ನಾಂಡಿಸ್ ಅವರಿಗೆ ಅಜ್ಜನ ಅನುಭವ ಪ್ರೇರಣೆಯಾದರೆ, ತಾಯಿಗೆ ಒಬ್ಬನೇ ಮಗನಾಗಿರುವ ಜಗದೀಶ್ ಬಲ್ಲಾಳ ಬೈಲ್ ಅವರಿಗೆ ಕಾರ್ಗಿಲ್ ಯೋಧರ ನೋವುಗಳ ರೇಡೀಯೋ ಸಂದೇಶ ಪ್ರೇರಣೆ, ಆದರೆ ಯಶವಂತ ಅವರು ಯಾವುದೇ ಮುಂಚಿತ ಪ್ರೇರಣೆ ಇಲ್ಲ್ಲದೆ ತಮಗರಿವಿಲ್ಲದೆಯೇ ಸೇನೆಗೆ ಸೇರಿದರು.
ಯೋಧರೊಂದಿಗೆ ಸಂವಾದದಲ್ಲಿ ಮಕ್ಕಳು ಅನಿರೀಕ್ಷಿತವಾಗಿ ಮುಗ್ದ ಹಾಗೂ ಗಂಭೀರ ಪ್ರಶ್ನೆಗಳನ್ನು ಕೇಳಿ ಗಮನ ಸೆಳೆದರೆ ಅಷ್ಟೇ ಸ್ಪಷ್ಟ ಉತ್ತರ ಯೋಧರ ಕಡೆಯಿಂದ ಬಂತು.
ನೀವು ಹೇಗೆ ಸೇನೆಗೆ ಸೇರಿದ್ದು?.. ನಿಮಗೆ ಪ್ರಾಣಭಯ ಆಗಿಲ್ಲವೇ? ಕಾರ್ಗಿಲ್ ಅನುಭವ ಹೇಳಿ.. ಭಯೋತ್ಪಾದಕರೊಂದಿಗಿನ ಹೋರಾಟದ ಅನುಭವ ತಿಳಿಸಿ?.. ಸೇನೆಯಲ್ಲಿ ಮಹಿಳೆಯರಿಗೆ ಅವಕಾಶಗಳು ಏನೇನಿದೆ ತಿಳಿಸಿ.. ಯುದ್ದದ ವಿಧಾನಗಳು ಗಡಿ ಪ್ರದೇಶದ ಅನುಭವಗಳು… ಹೀಗೆ ಹಲವು ಪ್ರಶ್ನೆಗಳು ಮಕ್ಕಳ ಕಡೆಯಿಂದ ಬಂದಾಗ ಕಾರ್ಯಕ್ರಮ ಸಂಯೋಜಕರಿಗೆ ಸಾರ್ಥಕ್ಯದ ಅನುಭವ.

By suddi9

Leave a Reply

Your email address will not be published. Required fields are marked *