ಬಜಪೆ : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗಣೇಶ ಪೂಜಾ ಸಮಿತಿ ವತಿಯಿಂದ ಜರಗಿದ 27 ವರ್ಷದ ಗಣೇಶೋತ್ಸವದ ಭವ್ಯ ಶೋಭಾಯಾತ್ರೆ ಗುರುವಾರ ರಾತ್ರಿ ಸಂಪನ್ನಗೊಂಡಿತು.ವಿಮಾನ ನಿಲ್ದಾಣದ *ಸಮುದಾಯ ಭವನದಲ್ಲಿ ಬೆಳಿಗ್ಗೆ ಪ್ರತಿಷ್ಠಾಪನೆ, ಗಣಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು.
ಸಂಜೆ ನಾನಾ ಸ್ಪರ್ಥೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಪ್ರತಿಮಾ ಶ್ರೀಧರ್ ನಿರ್ದೇಳನದಲ್ಲಿ ಭರತಾಂಜಲಿ ಕೊಟ್ಟಾರ ಇವರಿಂದ ಭರತನಾಟ್ಯ ಹಾಗೂ ಜಾನಪದ ನೃತ್ಯ ಜರಗಿತು. ಬಳಿಕ ಸಾಂಸ್ಕೃತಿಕ ಸನ್ನಿವೇಶಗಳೊಂದಿಗೆ *ಗಣೇಶ* ಮೂರ್ತಿಯ ಭವ್ಯ ವಿಸರ್ಜನಾ ಮೆರವಣಿಗೆ ಜರಗಿತು.
ವಿಮಾನ ನಿಲ್ದಾಣ ನಿರ್ದೇಶಕ ಜೆ.ಡಿ.ರಾಧಾ ಕೃಷ್ಣ, ಸಮಿತಿಯ ಕಾರ್ಯದರ್ಶಿ ಮಹೇಶ್ ಪೈ, ಬಜಾಂಜೆ ಜಯರಾಮ್, ಸಂಚಾಲಕ ವಿ.ಎಂ.ಶಿವಣ್ಣ, ವಿಮಾನ ನಿಲ್ದಾಣ ನಾನಾ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

