ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಗುರು ಮಂದಿರದಲ್ಲಿ ಇಂದಿಲ್ಲಿ ಶನಿವಾರ ಮುಂಜಾನೆ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 161ನೇ ಜಯಂತಿ ಉತ್ಸವಕ್ಕೆ ವಿಜೃಂಭನೆಯಿಂದ ಚಾಲನೆಯನ್ನೀಡಿತು. ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ನೇತೃತ್ವದಲ್ಲಿ ಆಯೋಜಿಸಿರುವ ಎರಡು ದಿನಗಳಲ್ಲಿ ಸಂಭ್ರಮೋಲ್ಲಾಸದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವಕ್ಕೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ
ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತರು. ಶ್ರೀ ರುಂಡಮಾಲಿನಿ ದೇವಸ್ಥಾನಪೆÇವಾಯಿ ಇದರಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಬಳಿಕ ಪೂಜಾಧಿಗಳಲ್ಲಿ ಪಾಲ್ಗೊಂಡು ನಾರಾಯಣಗುರು ಪ್ರತಿಮೆಗೆ ಆರತಿಯನ್ನೆತ್ತಿ ನೆರೆದ ಭಕ್ತರನ್ನು ಹರಸಿದರು.
Billawar Assn. Guru Jayanti -A2

Billawar Assn. Guru Jayanti -A1

Billawar Assn. Guru Jayanti -7

Billawar Assn. Guru Jayanti -5

Billawar Assn. Guru Jayanti -4

Billawar Assn. Guru Jayanti -3

Billawar Assn. Guru Jayanti -1
ಮುಂಜಾನೆ ಶ್ರೀ ಧನಂಜಯ ಶಾಂತಿ ಗಣಹೋಮ ನೆರವೇರಿಸಿದರು. ಬಳಿಕ ಪ್ರಭಾಕರ ಸಸಿಹಿತ್ಲು ಮತ್ತು ಸಂಗಡಿಗರು ನಿರಂತರ 24ತಾಸುಗಳ `ಓಂ ನಮೋ ನಾರಾಯಣಾಯ ನಮಃ ಶಿವಾಯಃ’ ಜಪಯಜ್ಞ ಆರಂಭಿಸಿದರು. ಈ ಪುಣ್ಯಾಧಿ ಕಾರ್ಯಕ್ರಮದಲ್ಲಿಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್, ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಜೊತೆ ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್, ವಿಭಾಗದ ಕಾರ್ಯಾಧ್ಯಕ್ಷ ನೀಲೇಶ್ಬಿ.ಪೂಜಾರಿ, ಎನ್.ಎಂ ಸನೀಲ್, ಸಿ.ಟಿ ಸಾಲ್ಯಾನ್, ಶ್ರೀನಿವಾಸ ಕರ್ಕೇರ, ನಾಗೇಶ್ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಶ್ರೀಮತಿ ಶಕುಂತಳಾ ಕೆ.ಕೋಟ್ಯಾನ್ ಸೇರಿದಂತೆಮಹಾದಾನಿಗಳು, ಸಾಮಾಜಿಕ ಮತ್ತು ಧಾರ್ಮಿಕ ಸಮಿತಿಯ ಕಾರ್ಯಧ್ಯಕ್ಷ ಮೋಹನ್ ಜಿ.ಪೂಜಾರಿ ಮತ್ತು ಕಾರ್ಯದರ್ಶಿ ರವೀಂದ್ರ ಎ.ಅವಿೂನ್ ಇತರೇ ಪದಾಧಿಕಾರಿಗಳು ಮತ್ತು ನೂರಾರು ಸದ್ಭಕ್ತರು ಉಪಸ್ಥಿತರಿದ್ದರು. ಆದಿತ್ಯವಾರ ಮುಂಜಾನೆ ಜಪಯಜ್ಞಕ್ಕೆ ಮಂಗಳ ಹಾಡಿ, ಕಳಶಾಭಿಷೇಕ, ಭಜನೆ, ಮಂಗಳಾರತಿಯೊಂದಿಗೆ ತೀರ್ಥಪ್ರಸಾದ ವಿತರಿಸಿ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮದೊಂದಿಗೆ ನಾರಾಯಣ ಗುರುಗಳ
ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *